ಭಾರತದಲ್ಲಿ ಆಗಸ್ಟ್ ೭ ಅನ್ನು ಜಾವಲಿನ್ ದಿನವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಅಥ್ಲೆಟಿಕ್ಸ್ನ ಉನ್ನತ ಸಂಸ್ಥೆಯಾದ ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾವು ಟೋಕಿಯೋ ಒಲಂಪಿಕ್ಸ್ನಲ್ಲಿ ನಿರಜ್ ಚೋಪ್ರಾ ಅವರ ಜಾವಲಿನ್ ಎಸೆತದ ಐತಿಹಾಸಿಕ ಚಿನ್ನದ ಪದಕದ ಸ್ಮರಣಾರ್ಥವಾಗಿ ಆಗಸ್ಟ್ ೭ ಅನ್ನು ಜಾವಲಿನ್ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ.

ಅಂದು ಆಗಸ್ಟ್ ೭, ೨೦೨೧ ರಂದು ಟೋಕಿಯೋ ಗೇಮ್ಸ್ನ ಪುರುಷರ ಜಾವೆಲಿನ್ ಥ್ರೋ ವಿಭಾಗದ ಫೈನಲ್‌ನಲ್ಲಿ ನೀರಜ್ ಚೋಪ್ರಾ ೮೭.೫೮ ಮೀಟರ್ ದೂರ ಎಸೆದು ಚಿನ್ನದ ಪದಕವನ್ನು ಗಳಿಸಿ ಭಾರತಕ್ಕೆ ಕೀರ್ತಿಯನ್ನು ತಂದರು. ಚೋಪ್ರಾ ಅವರು ಟ್ರಾö್ಯಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದು ಇತಿಹಾಸ ನಿರ್ಮಿಸಿದರು. ಟೋಕಿಯೋದಲ್ಲಿ ಚಿನ್ನದ ಪದಕ ಗೆದ್ದು, ೨೦೦೮ ರ ಬೀಜಿಂಗ್ ಗೇಮ್ಸ್ನಲ್ಲಿ ಅಭಿನವ್ ಬಿಂದ್ರಾ ಅವರು ಚಿನ್ನದ ಪದಕ ಗೆದ್ದ ನಂತರ ಚೋಪ್ರಾ ಅವರು ಭಾರತದಿಂದ ಎರಡನೇ ವೈಯಕ್ತಿಕ ಚಿನ್ನದ ಪದಕದ ವಿಜೇತರಾದರು.

ಭಾರತೀಯ ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ಅಥ್ಲೆಟಿಕ್ ಪರಾಕ್ರಮವನ್ನು ಜಾವಲಿನ್ ಎಸೆತದಲ್ಲಿ ತೋರಿ, ಅಮೋಘ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ

ಜಾವಲಿನ್ ಎಸೆತ: ಪ್ರಾಚೀನ ಕಾಲದಲ್ಲಿ ಗ್ರೀಕರು ಭರ್ಜಿಯನ್ನು ಮುಖ್ಯ ಆಯುಧವನ್ನಾಗಿ ಉಪಯೋಗಿಸುತ್ತಿದ್ದರು. ಅದಕ್ಕಾಗಿಯೇ ಇದನ್ನು ‘ಭಲ್ಲೆ ಎಸೆತ’ ಎಂದು ಕೂಡ ಕರೆಯುತ್ತಾರೆ. ಇದು ಬಹಳ ಪ್ರಾಚೀನವಾದದ್ದು. ಕ್ರಿ.ಪೂ. ೭೦೮ ರಲ್ಲಿ ಪೆಂಟಥ್ಲಾನ್ ಕ್ರೀಡೆಯಲ್ಲಿ ಈ ಸ್ಪರ್ಧೆಯು ಕೂಡ ಇತ್ತು.

ಚೋಪ್ರಾ ಚಮತ್ಕಾರದ ನಿರೀಕ್ಷೆ: ಟ್ರಾö್ಯಕ್ ಅಂಡ್ ಫೀಲ್ಡ್ ಒಲಂಪಿಕ್ಸ್ನ ಮುಖ್ಯ ಆಕರ್ಷಣೆ. ಈ ಬಾರಿ ಭಾರತ ಸ್ಪರ್ಧಾ ತಂಡಕ್ಕೆ ಒಲಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಭಾರತದ ಬಾವುಟ ಹಿಡಿದು ನಾಯಕತ್ವ ವಹಿಸಿದ್ದು ವಿಶೇಷವಾಗಿತ್ತು. ಇದೀಗ ಎಲ್ಲರ ಚಿತ್ತ ನೀರಜ್ ಚೋಪ್ರಾರ ಜಾವಲಿನ್ ಎಸೆತದ ಸ್ಪರ್ಧೆಯೇ ಕೇಂದ್ರ ಬಿಂದುವಾಗಿದೆ. ಏಕೆಂದರೆ ಹಾಲಿ ಒಲಂಪಿಕ್ ಚಾಂಪಿಯನ್ ಹಾಗೂ ವಿಶ್ವ ಚಾಂಪಿಯನ್ ಸಹ ಆಗಿರುವ ನೀರಜ್, ಮತ್ತೊಂದು ಸ್ವರ್ಣ ಪದಕ ಗೆಲ್ಲುವರೇ ಎಂದು ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ.

ಹರಿಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ಖಂದ್ರಾ ಗ್ರಾಮದ ಸುಬೇದಾರ್ ನೀರಜ್ ಚೋಪ್ರಾ ಒಲಂಪಿಕ್ಸ್ನ ಜಾವಲಿನ್ ಸ್ಪರ್ಧೆಯಲ್ಲಿ ಚಿನ್ನದ ಪಕದ ಗೆದ್ದ ಏಷ್ಯಾದ ಮೊದಲ ಅಥ್ಲೀಟ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಏಷ್ಯಾದ ಜಾವಲಿನ್ ಪಟು ಎಂಬ ದಾಖಲೆ ಹೊಂದಿದ್ದಾರೆ.

ಪ್ಯಾರಿಸ್ ಒಲಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದುಕೊಂಡಲ್ಲಿ ಒಲಂಪಿಕ್ಸ್ ಇತಿಹಾಸದಲ್ಲಿಯೇ ಚಾಂಪಿಯನ್ ಪಟ್ಟ ಉಳಿಸಿಕೊಂಡ ಐದನೇ ಅಥ್ಲೀಟ್ ಆಗಲಿದ್ದಾರೆ. ಅಲ್ಲದೇ, ವೈಯಕ್ತಿಕ ಸ್ಪರ್ಧೆಗಳಲ್ಲಿ ಎರಡು ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಗೌರವ ಕೂಡ ಸಂಪಾದಿಸಲಿದ್ದಾರೆ.

ಸ್ನಾಯುವಿನ ನೋವಿನಿಂದಾಗಿ ಕಳೆದ ವರ್ಷ ನೀರಜ್ ಕೆಲವು ಕ್ರೀಡಾಕೂಟಗಳಿಂದ ಹೊರಗುಳಿದಿದ್ದರು. ಮೇ ತಿಂಗಳು ನಡೆದಿದ್ದ ದೋಹಾ ಡೈಮಂಡ್ ಲೀಗ್‌ನಲ್ಲಿ ೮೮.೩೬ ಮೀಟರ್ ದೂರ ಜಾವಲಿನ್ ಎಸೆದು ಎರಡನೇ ಸ್ಥಾನ ಪಡೆದಿದ್ದು, ಋತುವಿನ ಶ್ರೇಷ್ಠ ಸಾಧನೆಯಾಗಿದೆ. ಆದರೆ ಅವರು ಓಸ್ಟಾವಾ ಗೋಳ್ಡ್ ಸ್ಟೆçöÊಕ್ ಕೂಟದಿಂದ ಹೊರಗುಳಿದಿದ್ದರು.

ಹೀಗೆ ಒಲಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಆಗಿ ಭಾರತಕ್ಕೆ ಚಿನ್ನದ ಪದಕ ತಂದು ಭವಿಷ್ಯದಲ್ಲೂ ಭಾರತದ ಕೀರ್ತಿ ಬೆಳಗಿಸುವ ಭರವಸೆ ಹೊಂದಿರುವ ನೀರಜ್ ಚೋಪ್ರಾ ಅವರಿಗೆ ಅವರ ಸಾಧನೆಗಳ ಸ್ಮರಣಾರ್ಥವಾಗಿ ಜಾವಲಿನ್ ದಿನ ಆಚರಿಸಿ ಅವರ ಭವಿಷ್ಯದಲ್ಲೂ ಮಹತ್ವದ ಸಾಧನೆಗಳನ್ನು ಮಾಡಲಿ ಎಂದು ಹಾರೈಸೋಣ.

ತಾ. ೬ ರಂದು ನಡೆದ ಪ್ಯಾರಿಸ್ ಒಲಂಪಿಕ್ಸ್ ಜಾವಲಿನ್ ಅರ್ಹತಾ ಸುತ್ತಿನಲ್ಲಿ ೮೯.೩೪ ಮೀಟರ್ ಎಸೆತದ ಮೂಲಕ ತಾ. ೮ ರಂದು ನಡೆಯಲಿರುವ ಅಂತಿಮ ಸುತ್ತಿಗೆ ನೀರಜ್ ಆಯ್ಕೆಯಾಗಿದ್ದಾರೆ.

- ಹರೀಶ್ ಸರಳಾಯ, ಮಡಿಕೇರಿ. ಮೊ. ೯೭೩೧೮೧೦೨೫೦.