ಮಡಿಕೇರಿ, ಆ. ೫: ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ವೀರ ಯೋಧರ ಸ್ಮರಣೆ ಮಾಡುವುದು, ಕಳೆದು ಹೋದ ಭಾರತದ ಭೂ ಭಾಗಗಳನ್ನು ಮತ್ತೆ ಪಡೆಯುವ ಸಂಕಲ್ಪದೊAದಿಗೆ ಹಿಂದೂ ಜಾಗರಣಾ ವೇದಿಕೆಯು ಪ್ರತಿ ವರ್ಷ ದೇಶದಾದ್ಯಂತ ಸ್ವಾತಂತ್ರೊö್ಯÃತ್ಸವಕ್ಕೆ ಮುಂಚಿತವಾಗಿ ಅಖಂಡ ಭಾರತ ಸಂಕಲ್ಪ ದಿನವನ್ನು ಆಯೋಜಿಸುತ್ತಿದೆ.
ತಾ.೭ ರಂದು ವೀರಾಜಪೇಟೆ, ತಾ.೯ ರಂದು ಮಡಿಕೇರಿ, ತಾ. ೧೦ ರಂದು ಮಾದಾಪುರ, ತಾ.೧೧ ರಂದು ಕೊಡ್ಲಿಪೇಟೆ, ತಾ.೧೨ ರಂದು ಪೊನ್ನಂಪೇಟೆ ಹಾಗೂ ತಾ.೧೪ ರಂದು ಕುಶಾಲನಗರದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಪಂಜಿನ ಮೆರವಣಿಗೆ ಹಾಗೂ ವಾಹನ ಜಾಥಾ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳು ನಿವೃತ್ತ ಸೇನಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ದಿಕ್ಸೂಚಿ ಭಾಷಣಕಾರರಾಗಿ ರಾಜ್ಯದ ವಿವಿಧ ಭಾಗಗಳಿಂದ ಗಣ್ಯರು ಆಗಮಿಸಲಿದ್ದಾರೆ ಎಂದು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್ ತಿಳಿಸಿದ್ದಾರೆ.