ಪೊನ್ನAಪೇಟೆ, ಆ. ೫: ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊನ್ನಂಪೇಟೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ೪ ಹಸುಗಳು ಮತ್ತು ಒಂದು ಎಮ್ಮೆ ಸೇರಿ ಒಟ್ಟು ೫ ಜಾನುವಾರುಗಳನ್ನು ರಕ್ಷಣೆ ಮಾಡಿ, ವಾಹನ ಸಮೇತ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ.

ಮಡಿಕೇರಿ ತಾಲೂಕಿನ ಹೊದವಾಡ ಕೊಟ್ಟಮುಡಿ ಗ್ರಾಮದ ಹೆಚ್. ಹೆಚ್. ಖಾಲಿದ್ ಬಂಧಿತ ಆರೋಪಿ. ತಾ. ೪ ರಂದು ರಾತ್ರಿ ೧.೩೦ ರ ಸಮಯದಲ್ಲಿ ಜಾನುವಾರುಗಳನ್ನು ತುಂಬಿಸಿಕೊAಡು ಪಿಕಪ್ ವಾಹನ (ಕೆ.ಎ. ೧೨, ಸಿ. ೨೪೩೨) ದಲ್ಲಿ ಕೇರಳ ಕಡೆಗೆ ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು, ಕಾನೂರು ಬಳಿ ಮುಖ್ಯ ರಸ್ತೆಯಲ್ಲಿ ವಾಹನ ಸಮೇತ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರಕ್ಷಣೆ ಮಾಡಿದ ಗೋವುಗಳನ್ನು ಮೈಸೂರಿನ ಪಿಂಜರಪೋಲ್‌ಗೆ ರವಾನಿಸಲಾಗಿದೆ. ಕೊಡಗು ಎಸ್.ಪಿ ಹಾಗೂ ಎ.ಎಸ್.ಪಿ ನಿರ್ದೇಶನದ ಮೇರೆಗೆ ವೀರಾಜಪೇಟೆ ತಾಲೂಕು ಡಿ.ವೈ.ಎಸ್.ಪಿ, ಗೋಣಿಕೊಪ್ಪ ಸಿ.ಐ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ಠಾಣೆ ಸಬ್ ಇನ್ಸ್ಪೆಕ್ಟರ್ ನವೀನ್, ಕ್ರೆöÊಮ್ ಸಬ್ ಇನ್ಸ್ಪೆಕ್ಟರ್ ಹೆಚ್.ಸಿ. ಸುಬ್ರಮಣ್ಯ, ಸಿಬ್ಬಂದಿ ಮಹದೇಶ್ವರಸ್ವಾಮಿ, ಪ್ರಸನ್ನ, ಮುತ್ತುರಾಜ್, ಸಂತೋಷ್, ಭರತ್ ಇನ್ನಿತರರು ಪಾಲ್ಗೊಂಡಿದ್ದರು.