ವಯನಾಡ್ ಭೂಕುಸಿತಕ್ಕೆ ಪ್ರಮುಖ ಕಾರಣಗಳು

ಬೆಂಗಳೂರು, ಆ. ೬: ಕಳೆದ ಜುಲೈ ೨೯ರ ರಾತ್ರಿ ಕೇರಳದ ವೈನಾಡ್‌ನಲ್ಲಿ ಸಂಭವಿಸಿದ ಭಾರೀ ಭೂಕುಸಿತವು ನೂರಾರು ಜೀವಗಳನ್ನು ಬಲಿಪಡೆದಿದೆ. ಇದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ಹವಾಮಾನ ಬದಲಾವಣೆ, ದುರ್ಬಲವಾದ ಭೂಪ್ರದೇಶ ಮತ್ತು ಅರಣ್ಯದ ನಾಶವು ವಿನಾಶಕಾರಿ ಭೂಕುಸಿತಕ್ಕೆ ಕಾರಣವಾಗಿದೆ ಎಂದು ವರ್ಷಗಳಲ್ಲಿ ನಡೆಸಿದ ಹಲವು ಅಧ್ಯಯನಗಳು ತಿಳಿಸಿವೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಷ್ಟಿçÃಯ ದೂರಸಂವೇದಿ ಕೇಂದ್ರವು ಕಳೆದ ವರ್ಷ ಬಿಡುಗಡೆ ಮಾಡಿದ ಭೂಕುಸಿತದ ನಕ್ಷೆ ಪ್ರಕಾರ, ಭಾರತದ ೩೦ ಭೂಕುಸಿತ ಪೀಡಿತ ಜಿಲ್ಲೆಗಳಲ್ಲಿ ೧೦ ಕೇರಳದಲ್ಲಿದ್ದು, ವಯನಾಡ್ ೧೩ನೇ ಸ್ಥಾನದಲ್ಲಿದೆ. ಪಶ್ಚಿಮ ಘಟ್ಟಗಳು ಮತ್ತು ಕೊಂಕಣ ಬೆಟ್ಟಗಳಲ್ಲಿ (ತಮಿಳುನಾಡು, ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟç) ೦.೦೯ ಮಿಲಿಯನ್ ಚದರ ಕಿಲೋಮೀಟರ್ ಭೂಕುಸಿತಕ್ಕೆ ಗುರಿಯಾಗುತ್ತದೆ ಎಂದು ಅದು ಹೇಳಿದೆ.

"ಪಶ್ಚಿಮ ಘಟ್ಟಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಮತ್ತು ಮನೆಗಳ ಸಾಂದ್ರತೆಯಿAದಾಗಿ ಅವೈಜ್ಞಾನಿಕ ಗುಡ್ಡಗಳ ಅಗೆತದಿಂದಾಗಿ ಭೂಕುಸಿತ ಸಂಭವಿಸಿದೆ ಎಂದು ವರದಿ ಹೇಳಿದೆ. ೨೦೨೧ ರಲ್ಲಿ ಸ್ಟಿçಂಗರ್ ಪ್ರಕಟಿಸಿದ ಅಧ್ಯಯನದ ಪ್ರಕಾರ ಕೇರಳದ ಎಲ್ಲಾ ಭೂಕುಸಿತದ ಹಾಟ್‌ಸ್ಪಾಟ್‌ಗಳು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿವೆ ಮತ್ತು ಇಡುಕ್ಕಿ, ಎರ್ನಾಕುಲಂ, ಕೊಟ್ಟಾಯಂ, ವಯನಾಡ್, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿವೆ.

ಕೇರಳದ ಒಟ್ಟು ಭೂಕುಸಿತದ ಶೇಕಡ ೫೯ ರಷ್ಟು ತೋಟ ಪ್ರದೇಶಗಳಲ್ಲಿ ಸಂಭವಿಸಿದೆ ಎಂದು ಅದು ಹೇಳಿದೆ. ಅಧ್ಯಯನದ ಪ್ರಕಾರ ವಯನಾಡಿನಲ್ಲಿ ಅರಣ್ಯ ಪ್ರದೇಶ ನಾಶವಾಗಿರುವ ಕುರಿತು ತಿಳಿಸಿದ್ದು ೧೯೫೦ ಮತ್ತು ೨೦೧೮ ರ ನಡುವೆ ಜಿಲ್ಲೆಯಲ್ಲಿ ೬೨ ಪ್ರತಿಶತದಷ್ಟು ಕಾಡುಗಳು ಕಣ್ಮರೆಯಾಯಿತು ಮತ್ತು ಇದೇ ಸಂದರ್ಭದಲ್ಲಿ ತೋಟಗಳ ವ್ಯಾಪ್ತಿಯು ಸುಮಾರು ೧,೮೦೦ ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ತೋರಿಸಿದೆ.

ಇಂಟರ್ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ರಿಸರ್ಚ್ ಅಂಡ್ ಪಬ್ಲಿಕ್ ಹೆಲ್ತ್ನಲ್ಲಿ ಪ್ರಕಟವಾದ ಈ ಅಧ್ಯಯನವು ವಯನಾಡ್‌ನ ಒಟ್ಟು ಪ್ರದೇಶದ ಸುಮಾರು ೮೫ ಪ್ರತಿಶತದಷ್ಟು ೧೯೫೦ರ ದಶಕದವರೆಗೆ ಅರಣ್ಯ ಆವರಿಸಿತ್ತು ಎಂದು ಹೇಳಿದೆ. ವಿಜ್ಞಾನಿಗಳ ಪ್ರಕಾರ, ಹವಾಮಾನ ಬದಲಾವಣೆಯು ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ, ಇದು ವಿಶ್ವದ ಜೈವಿಕ ವೈವಿಧ್ಯತೆಯ ಎಂಟು "ಹಾಟ್‌ಸ್ಪಾಟ್‌ಗಳಲ್ಲಿ" ಒಂದಾಗಿದೆ ಎಂದು ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ (ಕುಸಾಟ್) ವಾಯುಮಂಡಲದ ರೇಡಾರ್ ಸಂಶೋಧನೆಯ ಸುಧಾರಿತ ಕೇಂದ್ರದ ನಿರ್ದೇಶಕ ಎಸ್ ಅಭಿಲಾಷ್ ತಿಳಿಸಿದ್ದಾರೆ, ಅರಬ್ಬಿ ಸಮುದ್ರದ ತೀವ್ರ ಉಷ್ಣತೆಯು ಆಳವಾದ ಮೋಡದ ವ್ಯವಸ್ಥೆಗಳ ರಚನೆಗೆ ಅವಕಾಶ ನೀಡುತ್ತಿದೆ, ಇದು ಕಡಿಮೆ ಅವಧಿಯಲ್ಲಿ ಕೇರಳದಲ್ಲಿ ಅತಿ ಹೆಚ್ಚು ಮಳೆ ಸೃಷ್ಟಿಸಿತ್ತು. ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸಿತು.

"ನಮ್ಮ ಸಂಶೋಧನೆಯು ಆಗ್ನೇಯ ಅರಬ್ಬಿ ಸಮುದ್ರವು ಬೆಚ್ಚಗಾಗುತ್ತಿದೆ ಎಂದು ಕಂಡುಹಿಡಿದಿದೆ, ಇದರಿಂದಾಗಿ ಕೇರಳ ಸೇರಿದಂತೆ ಈ ಪ್ರದೇಶದ ಮೇಲಿನ ವಾತಾವರಣದ ಉಷ್ಣವು ಹೆಚ್ಚಾಗಿದ್ದು ಅಸ್ಥಿರವಾಗಿದೆ" ಎಂದು ಅಭಿಲಾಶ್ ಹೇಳಿದರು. "ಈ ವಾತಾವರಣದ ಅಸ್ಥಿರತೆ, ಆಳವಾದ ಮೋಡಗಳ ರಚನೆಗೆ ಅನುವು ಮಾಡಿಕೊಡುತ್ತದೆ, ಇದು ಹವಾಮಾನ ಬದಲಾವಣೆಗೆ ಸಂಬAಧಿಸಿದೆ. ಈ ಮೊದಲು, ಈ ರೀತಿಯ ಮಳೆಯು ಮಂಗಳೂರಿನ ಉತ್ತರದ ಉತ್ತರ ಕೊಂಕಣ ಬೆಲ್ಟ್ನಲ್ಲಿ ಹೆಚ್ಚು ಸಾಮಾನ್ಯವಾಗಿತ್ತು" ಎಂದು ಅವರು ಹೇಳಿದರು.

೨೦೨೨ರಲ್ಲಿ ಕ್ಲೆöÊಮೇಟ್ ಅಂಡ್ ಅಟ್ಮಾಸ್ಫಿಯರಿಕ್ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಭಿಲಾಷ್ ಮತ್ತು ಇತರ ವಿಜ್ಞಾನಿಗಳ ಸಂಶೋಧನೆಯು ಭಾರತದ ಪಶ್ಚಿಮ ಕರಾವಳಿಯಲ್ಲಿ ಮಳೆಯು ಹೆಚ್ಚು ಸಂವಹನವಾಗುತ್ತಿದೆ ಎಂದು ಕಂಡುಹಿಡಿದಿದೆ. ಸಂವಹನ ಮಳೆಯು ಸಾಮಾನ್ಯವಾಗಿ ಸಣ್ಣ ಪ್ರದೇಶದಲ್ಲಿ ತೀವ್ರವಾದ, ಅಲ್ಪಾವಧಿಯ ಮಳೆ ಅಥವಾ ಗುಡುಗು ಸಹಿತ ಮಳೆಯಿಂದ ಕೂಡಿರುತ್ತದೆ.

ಅಭಿಲಾಷ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೀಟಿಯಾಕಾಲಜಿ ಮತ್ತು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿಗಳು ನಡೆಸಿದ ಮತ್ತೊಂದು ಅಧ್ಯಯನವು ೨೦೨೧ರಲ್ಲಿ ಎಲ್ಸೆವಿಯರ್‌ನಲ್ಲಿ ಪ್ರಕಟವಾಯಿತು, ಕೊಂಕಣ ಪ್ರದೇಶವು (೧೪ ಡಿಗ್ರಿ ಉತ್ತರ ಮತ್ತು ೧೬ ಡಿಗ್ರಿ ಉತ್ತರದ ನಡುವೆ) ಭಾರೀ ಮಳೆಯ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ.

"ಮಳೆ ತೀವ್ರತೆಯ ಹೆಚ್ಚಳವು ಮಾನ್ಸೂನ್ ಋತುಗಳಲ್ಲಿ ಪೂರ್ವ ಕೇರಳದ ಪಶ್ಚಿಮ ಘಟ್ಟಗಳ ಎತ್ತರದಿಂದ ಮಧ್ಯದ ಭೂ ಇಳಿಜಾರುಗಳಲ್ಲಿ ಹೆಚ್ಚುತ್ತಿರುವ ಭೂಕುಸಿತಗಳ ಸಂಭವನೀಯತೆಯನ್ನು ಸೂಚಿಸುತ್ತದೆ" ಎಂದು ಅಧ್ಯಯನವು ಹೇಳಿದೆ. ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಅವರ ನೇತೃತ್ವದಲ್ಲಿ ಸರ್ಕಾರವು ಸ್ಥಾಪಿಸಿದ "ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ"ಯು ಈ ಹಿಂದೆಯೇ ನೀಡಿದ ಎಚ್ಚರಿಕೆಯನ್ನೂ ಭೂಕುಸಿತಗಳು ದೃಢಪಡಿಸಿವೆ.

ಸಮಿತಿಯು ಇಡೀ ಬೆಟ್ಟವನ್ನು ಪರಿಸರ ಸೂಕ್ಷö್ಮ ಪ್ರದೇಶವೆಂದು ಘೋಷಿಸಲು ಮತ್ತು ಅವುಗಳ ಪರಿಸರ ಸೂಕ್ಷö್ಮತೆಯ ಆಧಾರದ ಮೇಲೆ ಪರಿಸರ ಸೂಕ್ಷö್ಮ ವಲಯಗಳಾಗಿ ವಿಂಗಡಿಸಲು ಶಿಫಾರಸು ಮಾಡಿದೆ. ೨೦೧೧ ರಲ್ಲಿ, ಪರಿಸರ ಸೂಕ್ಷö್ಮ ವಲಯ ೧ ರಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಹೊಸ ಉಷ್ಣ ವಿದ್ಯುತ್ ಸ್ಥಾವರಗಳು, ಜಲವಿದ್ಯುತ್ ಯೋಜನೆಗಳು ಮತ್ತು ದೊಡ್ಡ ಪ್ರಮಾಣದ ಪವನ ಶಕ್ತಿ ಯೋಜನೆಗಳ ಮೇಲೆ ನಿಷೇಧವನ್ನು ಶಿಫಾರಸು ಮಾಡಿತು.

ರಾಜ್ಯ ಸರ್ಕಾರಗಳು, ಕೈಗಾರಿಕೆಗಳು ಮತ್ತು ಸ್ಥಳೀಯ ಸಮುದಾಯಗಳ ಪ್ರತಿರೋಧದಿಂದಾಗಿ ೧೪ ವರ್ಷಗಳ ನಂತರವೂ ಶಿಫಾರಸುಗಳನ್ನು ಜಾರಿಗೊಳಿಸದಿರುವುದು ವಿಷಾದನೀಯವಾಗಿದ್ದು ಭೂಕುಸಿತ ಸಂಭವಿಸಿದ ಎಲ್ಲಾ ಪ್ರದೇಶಗಳಲ್ಲೂ ಮಾನವ ಹಸ್ತಕ್ಷೇಪ ಆಗಿರುವುದು ಕಂಡು ಬಂದಿದೆ. - ಕೋವರ್ ಕೊಲ್ಲಿ ಇಂದ್ರೇಶ್