ಹೌದು ಮೊನ್ನೆ ವಯನಾಡಿನ ಮೇಪಾಡ್, ಮುಂಡಕೈ, ಹಾಗೂ ಚೂರಲ್ಮಲ ಗ್ರಾಮಗಳನ್ನೆ ಒಕ್ಕಲೆಬ್ಬಿಸಿದ ಭೀಕರ ಜಲಪ್ರಳಯದ ಪ್ರದೇಶದಲ್ಲಿ ಒಂದು ಸುತ್ತು.
ಆ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡುವ ಉದ್ದೇಶದಿಂದ ಹ್ಯುಮಾನಿಟಿ ರಿಲೀಫ್ ಸೊಸೈಟಿ (ಊಖS) ಕರ್ನಾಟಕ ರಾಜ್ಯದ ತಂಡ ಹೊರಟಾಗ ಅದರೊಂದಿಗೆ ಸೇರಿಕೊಂಡು ಘಟನಾ ಸ್ಥಳಕ್ಕೆ ತಲುಪುವ ಮೊದಲೆ ಸುಮಾರು ೧೫ ಕಿಲೋಮೀಟರ್ ದೂರದಲ್ಲಿ ಮೇಪಾಡ್ ಎಂಬ ಪಟ್ಟಣಕ್ಕೆ ತಲುಪುವಾಗ ದುರಂತದ ಭೀಕರತೆ ಎಷ್ಟಿದೆ ಎಂಬುದು ತಿಳಿಯಿತು.
ಸೈರನ್ಗಳನ್ನು ಮೊಳಗಿಸುತ್ತಾ ವೇಗದಲ್ಲಿ ಮೃತ ಶರೀರಗಳನ್ನು ಹೊತ್ತು ತರುತ್ತಿದ್ದ ತುರ್ತು (ಆಂಬ್ಯುಲೆನ್ಸ್) ವಾಹನಗಳು, ಪೊಲೀಸ್, ಹಾಗೂ ಆರೋಗ್ಯ ಇಲಾಖೆಯ ವಾಹನಗಳ ಬರಾಟೆ ಒಟ್ಟಿನಲ್ಲಿ ಒಂದು ಭಯದ ವಾತಾವರಣವನ್ನು ತರುವಂತಿತ್ತು. ರುಂಡವಿಲ್ಲದ ಛಿದ್ರಗೊಂಡ ದೇಹಗಳು ಮೇಪಾಡ್ ಎಂಬ ಊರಿನ ಸರಕಾರಿ ಪ್ರೌಢಶಾಲೆಯ ವಿವಿಧ ಕೋಣೆಗಳಲ್ಲಿ ದ್ದವು. ಗುರುತು ಹಿಡಿಯಲು ಕುಟುಂಬಸ್ಥರು ಹರಸಾಹಸ ಪಡುತ್ತಿದ್ದರು. ಓಹ್ ಎಂತಹಾ ಭಯಾನಕ ಪರಿಸ್ಥಿತಿ ಎಂದರೆ ಅದನ್ನು ವಿವರಿಸಲು ಸಾಧ್ಯವಿಲ್ಲ ಬಿಡಿ.
ಕಣ್ಣೀರು ಸುರಿಸಲು ಕೆಲ ಕುಟಂಬಗಳೇ ಇಲ್ಲ. ವಯನಾಡು ದುರಂತವು ಎಷ್ಟರ ಮಟ್ಟಿಗೆ ಭಯಾನಕ ಅಂದರೆ, ಕಾಫಿ ಹಾಗೂ ಚಹಾ ತೋಟಗಳ ಮಧ್ಯೆ ಇರುವ ಪ್ರದೇಶದಲ್ಲಿ ಆ ಊರಿನವರು ಮಾತ್ರವಲ್ಲದೆ ದೂರದ ಅಸ್ಸಾಮ್ ಹಾಗೂ ಇನ್ನಿತರ ರಾಜ್ಯಗಳ ಕಾರ್ಮಿಕರೂ ದುರಂತದ ಭೀಕರತೆಗೆ ಇಲ್ಲವಾಗಿದ್ದಾರೆ. ಪುಟ್ಟ ಮಕ್ಕಳು, ಮಹಿಳೆಯರು, ಹಿರಿಯರು ಸಾವಿನಲ್ಲಿ ಒಂದಾಗಿದ್ದರಿAದ, ಮೃತದೇಹಗಳನ್ನು ನೋಡಿ ಅಳುವ ಕೆಲ ಮುಖಗಳಿಲ್ಲ, ಕಣ್ಣೀರು ಸುರಿಸಲು ಕೆಲ ಕಣ್ಣುಗಳಿಲ್ಲ.
ಧರ್ಮ ಜಾತಿಯ ದ್ವೇಷಗಳನ್ನು ಕಿತ್ತು ಹಾಕಿದ ದುರಂತ
ದ್ವೇಷ, ಅಸೂಯೆ ಮತ್ತು ಜಾತಿ-ಧರ್ಮಗಳ ಹೆಸರಲ್ಲಿ ರಕ್ತಪಾತ ನಡೆಸುವ ಜನರು, ವಯನಾಡಿನ ದುರಂತದಿAದ ಪಾಠ ಕಲಿಯದಿದ್ದರೆ ಇನ್ನೆಂದಿಗೂ ಸಾಧ್ಯವಿಲ್ಲ, ಬಿಡಿ.
ಸ್ವಯಂ ಸೇವಕ ತಂಡಗಳ ಶ್ಲಾಘನೀಯ ಕಾರ್ಯ
ಒಂದು ಕಡೆ ಮೃತ ಶರೀರಗಳನ್ನು ಹೊತ್ತು ತರುತ್ತಿರುವ ನೂರಾರು ತುರ್ತು ವಾಹನಗಳು, ಇತರ ವಾಹನಗಳ ಓಡಾಟ, ಜೊತೆಗೆ ಹೆಚ್ಚಿದ ಜನಸಂದಣಿ, ಇದನ್ನು ನಿಭಾಯಿಸಲು ಕೇವಲ ಪೊಲೀಸರಿಂದ ಸಾಧ್ಯವಿರಲಿಲ್ಲ. ವಿಶೇಷ ಬಂದೋಬಸ್ತ್ ಮಾಡಲೇಬೇಕು. ಇಂತಹ ಸಂದರ್ಭದಲ್ಲಿ ಅವರಿಗೆ ಸಾಥ್ ನೀಡಿದ್ದು ಉತ್ಸಾಹಿ ತರುಣರು. ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳದ ವಿವಿಧ ಭಾಗಗಳಿಂದ ಸಂತ್ರಸ್ತರ ಸೇವೆಗಾಗಿ ಆಗಮಿಸಿದ ವಿವಿಧ ಸಂಘ-ಸAಸ್ಥೆಗಳ ಯುವಕರು ಹಿರಿಯರು, ಸದಸ್ಯರುಗಳು ಸ್ವಯಂ ಮುಂದೆ ಬಂದು ರಸ್ತೆ ಸಂಚಾರ ನಿಯಂತ್ರಿಸಲು ಸಹಕರಿಸುವ ದೃಶ್ಯ ಕಂಡು ದೇವರ ನಾಡು ಎಂದು ಹೆಮ್ಮೆ ಅನಿಸಿತ್ತು.
ಹೊಟ್ಟೆ ತುಂಬಾ ಆಹಾರ
ಅಲ್ಲಿನ ಸರಕಾರ ಸ್ಥಾಪಿಸಿರುವ ಪರಿಹಾರ ಕೇಂದ್ರ ಹಾಗೂ ಮೃತ ದೇಹಗಳ ದಾಸ್ತಾನು ಕೇಂದ್ರವಿರುವ ಮೇಪಾಡಿ ಎಂಬ ಸಣ್ಣ ನಗರದಿಂದ ದುರಂತ ನಡೆದ ಪ್ರದೇಶಕ್ಕೆ ತೆರಳುವ ದಾರಿಯುದ್ದಕ್ಕೂ ಬೆಳಗಿನ ಉಪಹಾರದಿಂದ ಪ್ರಾರಂಭಿಸಿ ರಾತ್ರಿ ಊಟವನ್ನು ಅಲ್ಲಿಗೆ ಬರುವಂತಹ ನೊಂದವರು ಹಾಗೂ ಬಂದವರಿಗೆಲ್ಲರಿಗೂ ವಿವಿಧ ಸಂಘ-ಸAಸ್ಥೆಗಳ ಮೂಲಕ ಉಚಿತ ಆಹಾರ ಪೊಟ್ಟಣಗಳನ್ನು ವಿತರಿಸಿ ಅಲ್ಲಿನ ಮಸೀದಿ ಯೊಂದರಲ್ಲಿ ಅಲ್ಲೇ ಕುಳಿತು ಆಹಾರ ಸೇವಿಸಲು ವ್ಯವಸ್ಥೆ ಮಾಡಲಾಗಿತ್ತು. ದಾರಿಯುದ್ದಕ್ಕೂ ಆಸು ಪಾಸಿನ ಮನೆಗಳ ಮುಂದೆ ಚಿಕ್ಕ ಪುಟ್ಟ ಹೊಟೇಲ್ಗಳು ವ್ಯಾಪಾರ ಬಿಟ್ಟು ದಾರಿಯಲ್ಲಿ ಹೋಗುವವರನ್ನು ಕರೆದು ಚಹಾ ತಿಂಡಿ, ಕುಡಿಯಲು ನೀರು ನೀಡಿ ಧÀನ್ಯರಾಗುತ್ತಿದ್ದರು.
ಶಿವಕ್ಷೇತ್ರ ಮತ್ತು ಪೂಜಾರಿಯ ದೇಹ
ದುರಂತದಲ್ಲಿ ಮಂದಿರ, ಮಸೀದ ಇಗರ್ಜಿ, ಶಾಲೆ, ಇದ್ಯಾವುವು ಲೆಕ್ಕಕ್ಕಿಲ್ಲ. ಆನೆ ನಡೆದದ್ದೇ ದಾರಿ ಎಂಬAತೆ ನೀರು ರೌದ್ರವತಾರದೊಂದಿಗೆ ಎಲ್ಲವನ್ನು ತನ್ನೊಟ್ಟಿಗೆ ಕಸಿದು ಕೊಂಡು ಹೋಯಿತು. ಮುಂಡ ಕೈ ಎಂಬ ಪ್ರದೇಶ ಸೇತುವೆ ಸಮೀಪದಲ್ಲಿರುವ ಶಿವ ಕ್ಷೇತ್ರದ ಪೂಜಾರಿ ಎಂದಿನAತೆ ಅಲ್ಲೆ ನಿದ್ರಿಸಿದ್ದರಂತೆ, ಘೋರವಾದ ಶಬ್ಧಕ್ಕೆ ಎಚ್ಚರವಾದಾಗ ಸೇತುವೆ ಸಮೇತ ಕುಸಿದು ಬಂದು ಕ್ಷೇತ್ರ ಮತ್ತು ಅಲ್ಲಿನ ಪ್ರದೇಶ ಸಂಪೂರ್ಣ ಮುಳುಗಿ ಹೋಯಿತು. ಎರಡು ದಿವಸದ ನಂತರ ಮೂವತೈದು ಕಿಲೋಮೀಟರ್ ದೂರದಲ್ಲಿ ಪೂಜಾರಿಯ ದೇಹ ಸಿಕ್ಕಿತು ಎಂದು ದುರ್ಘಟನೆಯಿಂದ ಪಾರಾದ ರಾಜು ಹೇಳುತ್ತಾರೆ
ತನ್ನವರ ದೇಹಗಳನ್ನು ಗುರುತು ಹಿಡಿಯಲು ಬಂದ ನಾಸಿರ್
ದೂರದ ಊರಿನಲ್ಲಿ ಕೆಲಸಕ್ಕಿದ್ದ ನಾಸಿರ್ ಎಂಬವರು ಸುದ್ದಿ ತಿಳಿದಾಕ್ಷಣ ದುರಂತ ಸ್ಥಳಕ್ಕೆ ಧಾವಿಸಿ ಬಂದಿದ್ದರು, ಆದರೆ ದುರದೃಷ್ಟವಶಾತ್ ತನ್ನ ಕುಟುಂಬದ ಸೋದರರು, ಸೋದರಿಯರು, ಮಕ್ಕಳು, ಅಕ್ಕಪಕ್ಕದಲ್ಲೇ ವಾಸಿಸುತ್ತಿದ್ದ ರಕ್ತ ಸಂಬAಧಿಗಳು ಸೇರಿ ಒಟ್ಟು ಹದಿನೇಳು ಜನರನ್ನು ಕಳೆದುಕೊಂಡು ತನ್ನವರ ದೇಹಗಳನ್ನು ಗುರುತಿಸಲು ಶವಾಗಾರ ಕೋಣೆಗಳಲ್ಲಿ ಅಲೆದಾಡುತ್ತಿದ್ದರು. ಈಗಾಗಲೇ ಒಂಭತ್ತು ಜನರ ಮೃತ ಶರೀರಗಳನ್ನು ಕಷ್ಟಪಟ್ಟು ಗುರುತಿಸಿದ್ದು ಮುಂದೆ ಎಲ್ಲಿಗೆ ಹೋಗಲಿ ? ಕಣ್ಣಲ್ಲಿ ಗಳಗಳನೇ ನೀರು...
ಕಣ್ಣೆದುರೆ ಕಂಡ ದುರಂತ-ಪಾರಾದ ಕನ್ನಡಿಗ ಕುಟುಂಬ
ಸರಿ ಸುಮಾರು ಮೂವತ್ತು ವರುಷಗಳಿಂದ ಅಲ್ಲೇ ವಾಸವಿರುವ ಚಾಮರಾಜನಗರ ಜಿಲ್ಲೆಯ ಕುಟುಂಬವೊAದು ದುರಂತದಿAದ ಪಾರಾದ ಬಗ್ಗೆ ಅಭಿಪ್ರಾಯ ಹಂಚಿಕೊAಡಿದ್ದು ಹೀಗೆ....
ಘಟನಾ ದಿನ ರಾತ್ರಿ ಸುಮಾರು ೧-೩೦ ಕ್ಕೆ ದನಗಳ ಕೊಟ್ಟಿಗೆಯಿಂದ ದನಗಳು ಭೀಕರವಾಗಿ ಕೂಗುವ ಶಬ್ದವನ್ನು ಕೇಳಿ ಧಾವಿಸಿದಾಗ ‘‘ಬೋ’’ ಎಂಬ ಘೋರ ಶಬ್ಧದೊಂದಿಗೆ ನೀರು ಹರಿದು ಕೊಟ್ಟಿಗೆ ಹತ್ತಿರ ತಲುಪಿತ್ತು. ಕೊಟ್ಟಿಗೆಯಿಂದ ದನಗಳನ್ನು ಕಟ್ಟಿ ಹಾಕಿದ ಹಗ್ಗಗಳನ್ನು ಬಿಚ್ಚಲು ಅಮ್ಮ, ತಮ್ಮ, ಗಂಡು ಮಕ್ಕಳು ತೆರಳಿ ಇನ್ನೇನು ಹಗ್ಗದ ಗಂಟನ್ನು ಬಿಚ್ಚಬೇಕು ಅಷ್ಟರಲ್ಲಿ ಎರಡನೇ ಜಲಪ್ರಳಯದಿಂದ ನೀರಿನ ರಭಸ ಹೆಚ್ಚಾಗಿ ಕೊಟ್ಟಿಗೆಯನ್ನೇ ಮುಳುಗಿಸಿ ಬಿಟ್ಟಿತು, ತಕ್ಷಣ ಅಮ್ಮನನ್ನು ಹೇಗೋ ಹೊರ ತಂದು ಕೊಟ್ಟಿಗೆಯ ಶೀಟನ್ನು ಒಡೆದು ಹೊರ ಓಡಿ ಮನೆ ಸೇರಿದಾಗ ಹೊಳೆ, ಸೇತುವೆ ಮುರಿದು ಜಲಪ್ರವಾಹ ಮತ್ತಷ್ಟು ಹೆಚ್ಚಿ ಆ ಪ್ರದೇಶದ ಎಲ್ಲಾ ಮನೆಗಳು ಕೊಚ್ಚಿ ಹೋದವು. ಗೆಳೆಯನ ಅಗಲುವಿಕೆ
ರಕ್ಷಣಾ ಕಾರ್ಯಾಚರಣೆ, ಸಮಾಜ ಸೇವೆ ನಿರತರಾದ ಪ್ರಜೀಸ್ ಎಂಬವರು ಅಪಾಯಕಾರಿ ಪರಿಸ್ಥಿತಿಯಲ್ಲಿ ಇತರರನ್ನು ರಕ್ಷಿಸಲು ತೆರಳಿ ಪ್ರಾಣ ಕಳೆದುಕೊಂಡಿದ್ದನ್ನು ಒಬ್ಬರು ವಿವರಿಸುವಾಗ ಅವರ ಕಣ್ತುಂಬಿ ಬಂತು. ಕಳೆದ ಸಲ ಅದೇ ಪ್ರದೇಶ ದಲ್ಲಿ ಭೂಕುಸಿತ ಉಂಟಾದಾಗಲೂ ಗೆಳೆಯರೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ. ಮಕ್ಕಳು, ಮಹಿಳೆಯರು, ಪುರುಷರು ಆ ಪ್ರವಾಹದಲ್ಲಿ ಸಿಲುಕಿ ಯಾರಾದರೊಬ್ಬರು ನಮ್ಮನ್ನು ರಕ್ಷಿಸಿ, ಅಂತ ಅಂಗಲಾಚುತ್ತಿದ್ದುದ್ದನ್ನು ಕಂಡ ಪ್ರಜೀಶ್ ಹಿಂದೆ-ಮುAದೆ ನೋಡದೇ ಸಾಧ್ಯವಾದಷ್ಟು ಜನರನ್ನು ಒಬ್ಬಂಟಿಯಾಗಿ ರಕ್ಷಿಸಿ ದಡ ಸೇರಿಸಿದ್ದ, ನಂತರ ನಿತ್ರಾಣಗೊಂಡ ಪ್ರಜೀಶ್ ನೀರಿನ ಸೆಳತಕ್ಕೆ ಸಿಲುಕಿ ತನ್ನ ಕೈಯಲ್ಲಿದ್ದ ಟಾರ್ಚ್ -ಪ್ರತ್ಯಕ್ಷ ವರದಿ : ಅಬ್ದುಲ್ಲಾ,
ಮಡಿಕೇರಿಮೇಲಕ್ಕೆ ಎತ್ತಿದ್ದು ಮಾತ್ರ ಕಾಣಸಿಕ್ಕಿತು. ಮರುದಿನ ಪ್ರಜೀಶ್ ಮೃತದೇಹ ಸುಮಾರು ಮೂವತೈದು ಕಿಲೋಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಕಂಡು ಬಂತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ಕುಸಿದು ಬಿದ್ದ ಅಧ್ಯಾಪಕ
‘‘ನಾನು ಯಾವಾಗಲೂ ಮಕ್ಕಳೊಂದಿಗೆ ಹೇಳುತ್ತಿದ್ದೆ , ಮಕ್ಕಳೇ ನೀವೆಷ್ಟು ಭಾಗ್ಯವಂತರು ಅಲ್ವಾ ಈ ಹಚ್ಚ ಹಸಿರು, ಹರಿಯುವ ನದಿ, ನೀರಿನ ಜರಿ ಪ್ರಕೃತಿ ಸೌಂದರ್ಯದ ನಡುವೆ ನೀವು ಕಲಿಯುತ್ತಿದ್ದೀರ ಎಂದು’’ ಆದರೆ ಅಯ್ಯೋ ದೇವರೆ ಆ ಪುಟ್ಟ ಮಕ್ಕಳನ್ನು ಇನ್ನು ಎಲ್ಲಿ ನೋಡಲೀ ಎಂದು ಹೇಳುತ್ತಾ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಶಾಲಾ ಕಟ್ಟಡಕ್ಕೆ ಭೇಟಿ ನೀಡಿದ ಅಧ್ಯಾಪಕರೋರ್ವರು ಕುಸಿದು ಬಿದ್ದರು.
ನಾವು ಹಿಂತಿರುಗಿ ಬರುವವರೆಗೂ ಅರಣ್ಯ, ಕಾಡು, ತೋಟ, ಜರಿಗಳಲ್ಲಿ ವಿವಿಧ ತಂಡಗಳಿAದ ದೇಹಗಳ ಹುಡುಕಾಟ ನಡೆಯುತ್ತಲೇ ಇತ್ತು. ಅಗೆದಷ್ಟು ಅಂಗಾAಗಗಳಿಲ್ಲದ ದೇಹಗಳು ಸಿಗುತ್ತಲೇ ಇವೆ. ದಣಿವರಿಯದ ಸ್ವಯಂ ಸೇವಕರ ನಿಷ್ಕಳಂಕ ಸೇವೆ ಸಾಗುತ್ತಲಿದೆ, ತುರ್ತು ವಾಹನಗಳ ಸೈರನ್ಗಳು ಮೊಳಗುತ್ತಲೇ ಇವೆ.