ಕುಶಾಲನಗರ, ಆ. ೫: ಕುಶಾಲನಗರ ವಲಯದ ಅಂದಗೋವೆ ಗ್ರಾಮದ ಭದ್ರಕಾಳಿ ದೇವರ ಕಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯ ಪ್ರದೇಶಕ್ಕೆ ಅಟ್ಟುವ ಕಾರ್ಯಾಚರಣೆ ತಾ. ೭ರಂದು ನಡೆಯಲಿದೆ.
ಕುಶಾಲನಗರ ವಲಯದ ಅಂದಗೋವೆ ಗ್ರಾಮದಲ್ಲಿ ಕಾಡಾನೆಗಳ ಉಪಟಳವಿದ್ದು ಸಾರ್ವಜನಿಕ ಮನವಿಯ ಮೇರೆಗೆ ಇಲಾಖೆಯು ಕಾಡಾನೆಗಳ ಕಾರ್ಯಾಚರಣೆಗೆ ಮುಂದಾಗಿದೆ. ಅಂದಗೋವೆ ಭಾಗದ ನಾಕೂರು ಶಿರಂಗಾಲ, ಕಾನ್ಬೈಲ್, ಬೈಚನಹಳ್ಳಿ, ಅಂದಗೋವೆ, ಹೇರೂರು, ಕಲ್ಲೂರು ಮತ್ತು ಹೊಸಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಕಾಡಾನೆ ಕಾರ್ಯಾಚರಣೆ ನಡೆಯಲಿರುವುದರಿಂದ ಗ್ರಾಮದ ಗ್ರಾಮಸ್ಥರು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ವಲಯ ಅರಣ್ಯಾಧಿಕಾರಿ ಕುಶಾಲನಗರ ವಲಯ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.