ಪ್ಯಾರಿಸ್, ಆ. ೫: ಸತತವಾಗಿ ೨ನೆ ಬಾರಿ ಒಲಂಪಿಕ್ಸ್ ಹಾಕಿ ಸೆಮಿಫೈನಲ್ ತಲುಪಿರುವ ಭಾರತ ಪುರುಷರ ಹಾಕಿ ತಂಡಕ್ಕೆ ತಾ.೬ ರಂದು (ಇಂದು) ಜರ್ಮನಿ ಎದುರಾಗಲಿದೆ. ಕಳೆದ ಒಲಂಪಿಕ್ಸ್ನಲ್ಲಿ ಬೆಲ್ಜಿಯಮ್ ವಿರುದ್ಧ ಸೆಮಿಫೈನಲ್ನಲ್ಲಿ ಸೋತು ಕಂಚಿನ ಪದಕದ ಪಂದ್ಯದಲ್ಲಿ ಜರ್ಮನಿ ವಿರುದ್ಧ ಗೆದ್ದು ೪೮ ವರ್ಷಗಳ ಬಳಿಕ ಒಲಂಪಿಕ್ಸ್ ಹಾಕಿಯಲ್ಲಿ ಪದಕ ಸಾಧನೆ ಮಾಡಿತ್ತು. ಒಲಂಪಿಕ್ಸ್ ಇತಿಹಾಸದಲ್ಲಿ ಒಟ್ಟು ೮ ಚಿನ್ನ, ೧ ಬೆಳ್ಳಿ ಹಾಗೂ ೩ ಕಂಚು ಪದಕಗಳನ್ನು ಪಡೆದಿರುವ ಭಾರತ ಈ ಬಾರಿಯೂ ಪದಕ ಗೆಲ್ಲುವ ನಿರೀಕ್ಷೆಯಿದೆ.
ಮತ್ತೊಂದು ಸೆಮಿಫೈನಲ್ನಲ್ಲಿ ಸ್ಪೇಯ್ನ್ ತಂಡ ನೆದರ್ಲ್ಯಾಂಡ್ ವಿರುದ್ಧ ಆಡಲಿದೆ. ಇವೆರಡು ತಂಡಗಳು ಕ್ವಾರ್ಟರ್ ಫೈನಲ್ನಲ್ಲಿ ಕ್ರಮವಾಗಿ ಹಾಲಿ ಚಾಂಪಿಯನ್ ಬೆಲ್ಜಿಯಮ್ ಹಾಗೂ ಹಾಲಿ ರನ್ನರ್ ಅಪ್ ಆಸ್ಟೆçÃಲಿಯಾವನ್ನು ಮಣಿಸಿ ಸೆಮಿಫೈನಲ್ ತಲುಪಿವೆ.
ನೆದರ್ಲ್ಯಾಂಡ್ ಹಾಗೂ ಸ್ಪೇಯ್ನ್ ನಡುವಿನ ಪಂದ್ಯ ತಾ.೬ ರಂದು (ಇಂದು) ಸಂಜೆ ೫:೩೦ ಕ್ಕೆ ನಡೆದರೆ, ಭಾರತ-ಜರ್ಮನಿ ಪಂದ್ಯ ರಾತ್ರಿ ೧೦:೩೦ಕ್ಕೆ ಪ್ರಾರಂಭವಾಗಲಿದೆ.
ಬ್ಯಾಡ್ಮಿAಟನ್ನಲ್ಲಿ
ಹುಸಿಯಾದ ನಿರೀಕ್ಷೆ
ಒಲಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿನ ಕಂಚು ಪದಕದ ಪಂದ್ಯದಲ್ಲಿ ಮೊದಲ ಸೆಟ್ ಗೆದ್ದರೂ ಮತ್ತೆರಡು ಸೆಟ್ಗಳಲ್ಲಿ ಮಲೇಷಿಯಾ ವಿರುದ್ಧ ಸೋತ ಭಾರತದ ಲಕ್ಷö್ಯ ಸೆನ್ ಅವರು ಬಹುನಿರೀಕ್ಷಿತ ಪದಕ ಗೆಲ್ಲುವಲ್ಲಿ ವಿಫಲರಾದರು.