ಪ್ಯಾರಿಸ್, ಆ. ೪: ಪಂದ್ಯದ ಬಹುತೇಕ ಮುಕ್ಕಾಲು ಭಾಗ ಅವಧಿ ೧೦ ಆಟಗಾರರನ್ನಷ್ಟೇ ಹೊಂದಿದ್ದರೂ ರಕ್ಷಣಾತ್ಮಕ ಆಟ ಆಡುವ ಮೂಲಕ ಭಾರತ ಪುರುಷರ ಹಾಕಿ ತಂಡವು ಗ್ರೇಟ್ ಬ್ರಿಟನ್ ವಿರುದ್ಧ ರೋಚಕ ಜಯ ಸಾಧಿಸಿ ಒಲಂಪಿಕ್ಸ್ ಹಾಕಿ ಸೆಮಿಫೈನಲ್‌ಗೆ ತಲುಪಿತು. ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಹಾಕಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂದು ಭಾರತದ ಆಟಗಾರ ಅಮಿತ್ ರೋಹಿದಾಸ್ ಅವರಿಗೆ ಪಂದ್ಯದ ೨೭ನೇ ನಿಮಿಷದಲ್ಲಿಯೇ ಫೌಲ್ ಒಂದಕ್ಕೆ ರೆಡ್ ಕಾರ್ಡ್ ದೊರಕಿತು. ಉಳಿದ ೪೩ ನಿಮಿಷಗಳಲ್ಲಿ ೧೦ ಆಟಗಾರರನ್ನಷ್ಟೆ ಹೊಂದಿದ್ದ ಕಾರಣ ರಕ್ಷಣಾತ್ಮಕ ಆಟ ಆಡುವ ಮೂಲಕ ಭಾರತ ೧-೧ ಡ್ರಾ ಸಾಧಿಸಿತು .(ಭಾರತದ ಪರ ಹರ್ಮನ್ ಪ್ರೀತ್ ಮೊದಲು ಗೋಲ್ ಭಾರಿಸಿದರು). ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಭಾರತವು ೪-೨ ಗೋಲುಗಳಿಂದ ಬ್ರಿಟನ್ ವಿರುದ್ಧ ಜಯಿಸಿ ಸೆಮಿಫೈನಲ್ ತಲುಪಿತು. ಶೂಟೌಟ್‌ನಲ್ಲಿ ಭಾರತದ ಗೋಲ್ ಕೋಪರ್ ಶ್ರೀಜೇಶ್ ಅತ್ಯುತ್ತಮ ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ತಾ.೬ ರಂದು (ನಾಳೆ) ಜರ್ಮನಿ ಅಥವಾ ಅರ್ಜಂಟಿನಾ ವಿರುದ್ಧ ಸೆಮಿಫೈನಲ್ ಪಂದ್ಯ ನಡೆಯಲಿದೆ.

ಲಕ್ಷö್ಯಗೆ ಸೋಲು

ಒಲಂಪಿಕ್ಸ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಲಕ್ಷö್ಯ ಸೆನ್ ಅವರು ಎದುರಾಳಿ ಹಾಲಿ ಚಾಂಪಿಯನ್ ಡೆನ್ಮಾರ್ಕ್ ದೇಶದ ವಿಕ್ಟರ್ ಅವರೊಂದಿಗೆ ೨೨-೨೦, ೨೧-೧೪ ಮೂಲಕ ಸೋಲನುಭವಿಸಿದರು. ತಾ.೫ ರಂದು (ಇಂದು) ಮಲೇಷಿಯಾ ವಿರುದ್ಧ ಕಂಚಿನ ಪದಕದ ಪಂದ್ಯವನ್ನು ಲಕ್ಷö್ಯ ಆಡಲಿದ್ದು, ಸಂಜೆ ೬ ಗಂಟೆಗೆ ಪಂದ್ಯ ಆರಂಭವಾಗಲಿದೆ.