ಸುಂಟಿಕೊಪ್ಪ, ಜು. ೨೧: ಸುಂಟಿಕೊಪ್ಪ ವರ್ಕ್ಶಾಪ್ ಮಾಲಿಕರ ಸಂಘದ ೨೨ನೇ ವಾರ್ಷಿಕ ಮಹಾಸಭೆ ಇಲ್ಲಿನ ಕೊಡವ ಸಮಾಜದಲ್ಲಿ ಸಂಘದ ಅಧ್ಯಕ್ಷ ಪಿ.ಆರ್. ಸುನೀಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಬಿ.ಎಸ್. ರಮೇಶ್, ಉಪಾಧ್ಯಕ್ಷರಾಗಿ ತಂಗವೇಲು, ಕಾರ್ಯದರ್ಶಿಯಾಗಿ ಮಣಿಕಂಠ, ಖಜಾಂಚಿಯಾಗಿ ಸಂದೀಪ್, ಸಂಘಟನಾ ಕಾರ್ಯದರ್ಶಿಯಾಗಿ ಫೆಲಿಕ್ಸ್, ಸಹ ಕಾರ್ಯದರ್ಶಿಯಾಗಿ ರಜಾಕ್, ಗೌರವ ಅಧ್ಯಕ್ಷರಾಗಿ ವಿ.ಎ. ಸಂತೋಷ್, ಪಿ.ಆರ್. ಸುಕುಮಾರ್, ಕೆ.ಪಿ. ವಿನೋದ್ ಹಾಗೂ ೯ ಜನರು ಸಮಿತಿ ಸದಸ್ಯರಾಗಿ ಆಯ್ಕೆಯಾದರು.