ವೀರಾಜಪೇಟೆ, ಜು. ೨೧: ಹುಟ್ಟಿನಿಂದ ಹೃದಯ ಸಂಬAಧಿ ಸಮಸ್ಯೆಯಿಂದ ಬಳಲುತ್ತಿರುವ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮದ ಬಿ.ಎಸ್. ಮಮತ ರೈ ಹಾಗೂ ದಿವಂಗತ ಶ್ಯಾಮ್ ಅವರ ೯ ವರ್ಷದ ಪುತ್ರಿ ಬಿ.ಎಸ್. ಐಶಾನ್ಯ ರೈ ಅವರ ಚಿಕಿತ್ಸಾ ವೆಚ್ಚಕ್ಕೆ ವೀರಾಜಪೇಟೆ ತಾಲೂಕು ಬಂಟರ ಸಂಘದ ವತಿಯಿಂದ ಇತ್ತೀಚೆಗೆ ಸಹಾಯಧನ ಒದಗಿಸಲಾಯಿತು.

ಈ ಸಂದರ್ಭ ಮಾತನಾಡಿದ ವೀರಾಜಪೇಟೆ ತಾಲೂಕು ಬಂಟರ ಸಂಘದ ಅಧ್ಯಕ್ಷ ನೀಲಿಮಾಡು ದಯಾನಂದ ರೈ ಅವರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಐಶಾನ್ಯ ರೈ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗಿಲ್ಲ. ಮಗು ಜನಿಸಿದಂದಿನಿAದ ಇಲ್ಲಿಯವರೆಗೆ ಚಿಕಿತ್ಸೆಗೆ ಸಾಕಷ್ಟು ಹಣವನ್ನು ವ್ಯಯಿಸಿರುವ ಬಡ ಪೋಷಕರು ಶಸ್ತçಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಶಸ್ತç ಚಿಕಿತ್ಸೆಯನ್ನು ಮುಂದೂಡಿಕೊAಡು ಬಂದಿದ್ದಾರೆ. ಇದೀಗ ಶಸ್ತçಚಿಕಿತ್ಸೆ ಮಾಡಿಸಲೇಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಹಣವನ್ನು ಹೊಂದಿಸಿಕೊಳ್ಳಲಾಗದೆ ಪರಿತಪಿಸುವಂತಾಗಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಶಸ್ತçಚಿಕಿತ್ಸೆಗೆ ಒಳಗಾಗಬೇಕಿದೆ. ಶಸ್ತçಚಿಕಿತ್ಸೆ ಸೇರಿದಂತೆ ಇನ್ನಿತರ ವೆಚ್ಚವನ್ನು ಭರಿಸಬೇಕಾಗಿದೆ. ಆದ್ದರಿಂದ ದಾನಿಗಳು ಮಗುವಿನ ಚಿಕಿತ್ಸೆಗಾಗಿ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಬಿ.ಎಸ್. ಮಮತ ರೈ ಅವರ ಬ್ಯಾಂಕ್ ಖಾತೆ ಸಂ: ೬೪೧೮೪೫೩೮೧೧೨ ಎಸ್.ಬಿ.ಐ. ಗೋಣಿಕೊಪ್ಪಲು, ಐ.ಎಫ್.ಸಿ. ಸಂ: SಃIಓ೦೦೧೬೨೮೨ ಅಥವಾ ಗೂಗಲ್ ಪೇ ಸಂ: ೭೨೦೪೩೧೪೦೩೮ ಮೂಲಕ ನೆರವು ನೀಡಬಹುದು. ಮಾಹಿತಿಗಾಗಿ ದೂ.ಸಂ: ೮೧೦೫೮೩೦೫೬೦ ಅನ್ನು ಸಂಪರ್ಕಿಸುವAತೆ ಕೋರಲಾಗಿದೆ.