ಮಡಿಕೇರಿ, ಜು. ೨೧: ಪ್ರಾಂಶುಪಾಲರ ಸಂಘದ ಸಹಭಾಗಿತ್ವದಲ್ಲಿ ಗಣಕಯಂತ್ರ ಉಪನ್ಯಾಸಕರ ಕಾರ್ಯಾಗಾರವು ಮಡಿಕೇರಿ ಸಂತ ಮೈಕಲರ ಪದವಿಪೂರ್ವ ಕಾಲೇಜಿನಲ್ಲಿ ಜರುಗಿತು. ಮೂರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ದೇವಕಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್‌ಗೆ ಸಂಬAಧಪಟ್ಟ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದರು.

ಮಡಿಕೇರಿಯ ಸಂತ ಮೈಕಲರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ಸುಮಂತ್ ಅವರು ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೆ. ಗೋವಿಂದರಾಜ ಅವರನ್ನು ಪರಿಚಯಿಸಿ ಮಾತನಾಡಿ, ಕಲಿಯದಿದ್ದರೆ ನಾವು ಬೌದ್ಧಿಕರಾಗಿ ಕುಂಠಿತರಾಗುತ್ತೇವೆ. ಹೊಸ ವಿಚಾರಗಳನ್ನು ಕಲಿಯುವುದರ ಮೂಲಕ ನಾವು ಯುವಕರಾಗಬೇಕಾಗಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಬಾರ ಉಪನಿರ್ದೇಶಕಿ ಜ್ಯೋತಿ ಮಾತನಾಡಿ, ಹೊಸ ವಿಚಾರವಾದ ‘ಪೈಥಾನ್’ ಅನ್ನು ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ತಲುಪಿಸುತ್ತೀರಿ ಎಂಬುದು ಮುಖ್ಯ ಎಂದರು. ಕಾರ್ಯಕ್ರಮಕ್ಕೆ ಕೂಡಿಗೆಯ ಸೈನಿಕ್ ಸ್ಕೂಲ್ ಉಪನ್ಯಾಸಕ ಕೆ. ಗೋವಿಂದರಾಜ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಒಂದು ದಿನದ ಕಾರ್ಯಾಗಾರವನ್ನು ನೆರವೇರಿಸಿಕೊಟ್ಟರು. ಆ್ಯನೆಟ್ ವಿಲ್ಮ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ರೇಖಾ ಸ್ವಾಗತಿಸಿ, ಪ್ರಾಂಶುಪಾಲ ಆ್ಯಂಟನಿ ಆಳ್ವಾರೀಸ್ ವಂದಿಸಿದರು.