ಮಡಿಕೇರಿ, ಜು. ೨೦: ಹಾಕಿ ಇಂಡಿಯಾ ವತಿಯಿಂದ ಕೇರಳದ ಕೊಲ್ಲಂನಲ್ಲಿ ತಾ.೧೯ರಿಂದ ಆರಂಭ ಗೊಂಡಿರುವ ೨ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ದಕ್ಷಿಣ ವಲಯ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿ ರುವ ಹಾಕಿ ಕರ್ನಾಟಕ ತಂಡದಲ್ಲಿ ಕೊಡಗಿನ ಆಟಗಾರರು ಅಧಿಕ ಸಂಖ್ಯೆಯಲ್ಲಿ ಸ್ಥಾನ ಪಡೆದಿದ್ದಾರೆ.

ಬಾಲಕರ ವಿಭಾಗದಲ್ಲಿ ೧೧ ಮಂದಿ ಹಾಗೂ ಬಾಲಕಿಯರ ವಿಭಾಗದಲ್ಲಿ ೧೦ ಮಂದಿ ಹಾಕಿ ಕರ್ನಾಟಕ ಸಬ್ ಜೂನಿಯರ್ ತಂಡ ವನ್ನು ಪ್ರತಿನಿಧಿಸು ತ್ತಿದ್ದಾರೆ. ಬಾಲಕರ ವಿಭಾಗದಲ್ಲಿ ತಂಡದ ನಾಯಕನಾಗಿ ಜಿಲ್ಲೆಯ ಶಶಿತ್‌ಗೌಡ ವಿ.ವೈ ಹಾಗೂ ಬಾಲಕಿ ಯರ ವಿಭಾಗದ ತಂಡದ ನಾಯಕಿ ಯಾಗಿ ಅಚ್ಚಪಂಡ ಪರ್ಲಿನ್ ಪೊನ್ನಮ್ಮ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡದ ಆಟಗಾರರಾಗಿ ಬಾಲಕರ ವಿಭಾಗದಲ್ಲಿ ಧನುಷ್ ಸಿ, ವಿಪಿನ್ ವಿ.ಪಿ, ಮೋಹನ್ ಬಿ.ಪಿ, ಲೆನನ್ ಮಾದಪ್ಪ ಸಿ.ಪಿ, ಚಿರಾಗ್ ಜೆ. ಕೋಟ್ಯಾನ್, ಆರ್ಯನ್ ಅಯ್ಯಪ್ಪ ಎನ್.ಡಿ, ಪೂವಣ್ಣ ಕೆ.ಪಿ, ಕಾಳಪ್ಪ ಎಂ.ಸಿ, ದುರ್ಗೇಶ್ ಎಸ್.ಕೆ ಹಾಗೂ ಯಶ್ವಂತ್ ಕೆ.ಆರ್. ತಂಡದಲ್ಲಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಎನ್.ಬಿ. ಸೀತಮ್ಮ, ಎ.ಎಂ. ತಂಗಮ್ಮ, ಎ.ಎನ್. ತ್ರಿಷಾ ಕಾವೇರಮ್ಮ, ಬಿ.ಯು. ಮನಸ್ವಿ, ಕೆ.ಎ. ಪೂರ್ವಿ ಪೂವಮ್ಮ, ಎನ್.ಆರ್. ನೀಲಮ್ಮ, ಟಿ.ಎಂ. ಧನ್ಯ, ಎಂ.ಎಲ್. ಕೃತಿಕ, ಹೆಚ್.ಎನ್. ಜೀವಿತ ಇವರುಗಳು ತಂಡದಲ್ಲಿದ್ದಾರೆ.