ಮಡಿಕೇರಿ, ಜು. ೨೦: ಮಡಿಕೇರಿ ನಗರದ ಪ್ರವೇಶದಲ್ಲಿನ ಜನರಲ್ ತಿಮ್ಮಯ್ಯ ವೃತ್ತದ ಸಮೀಪ ಕಾಂಕ್ರೀಟಿಕರಣಗೊAಡ ರಸ್ತೆಯ ಭಾಗ ಕಿತ್ತು ಬಂದು ಹೊಂಡ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರು ಎಚ್ಚರ ವಹಿಸುವ ಅಗತ್ಯವಿದೆ. ಈ ಹಿಂದೆ ಹಾನಿಯಾಗಿದ್ದ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ದುರಸ್ತಿ ಪಡಿಸಿ, ವೃತ್ತವನ್ನು ನವೀಕರಿಸಿ ಸ್ವಲ್ಪ ಬಲಭಾಗಕ್ಕೆ ಸ್ಥಳಾಂತರಿಸಿ ಅಲ್ಲಿ ಪ್ರತಿಮೆಯನ್ನು ಮರುಸ್ಥಾಪಿಸಲಾಯಿತು. ವೃತ್ತ ತೆರವಾದ ಸ್ಥಳವು ಸಂಪೂರ್ಣ ಗುಂಡಿಮಯವಾಗಿದ್ದು ವಾಹನ ಸವಾರರಿಗೆ ಅಡಚಣೆಯಾಗುತ್ತಿತ್ತು. ಬೇಸಿಗೆಯಿಡಿ ನಿದ್ದೆಯಲ್ಲಿದ್ದ ನಗರಸಭೆ ಮಳೆಗಾಲ ಶುರುವಾಗುತ್ತಿದ್ದಂತೆ ಈ ಗುಂಡಿಮಯ ರಸ್ತೆಯ ಭಾಗವನ್ನು ಕಾಂಕ್ರೀಟಿಕರಣಗೊಳಿಸಿದ ಪರಿಣಾಮ ಇದೀಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕಾಂಕ್ರೀಟ್ ಕಿತ್ತು ಬಂದು ಗುಂಡಿ ನಿರ್ಮಾಣವಾಗಿ, ವಾಹನ ಸವಾರರಿಗೆ ಅಡೆಚಣೆಯಾಗಿದೆ. -ಟಿ.ಜಿ. ಸತೀಶ್