ಮಡಿಕೇರಿ, ಜು. ೨೧: ಸಿ.ಐ.ಎಸ್.ಸಿ.ಇ. ವಲಯ ಮಟ್ಟದ ಹಾಕಿ ಪಂದ್ಯಾವಳಿಯು ತಾ. ೧೪ ರಿಂದ ತಾ. ೧೭ ರವರೆಗೆ ಬೆಂಗಳೂರಿನ ಶಾಂತಿನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸ್ಟೇಡಿಯಂನಲ್ಲಿ ನಡೆಯಿತು. ಬೆಂಗಳೂರಿನ ವಿದ್ಯಾಶಿಲ್ಪ ಅಕಾಡೆಮಿಯವರು ಈ ಪಂದ್ಯಾವಳಿಯನ್ನು ಆಯೋಜಿಸಿದ್ದರು.

ಪಂದ್ಯಾವಳಿಯಲ್ಲಿ ಕೊಡಗಿನ ಗೋಣಿಕೊಪ್ಪಲಿನ ಕ್ಯಾಲ್ಸ್ ಶಾಲೆಯ ಹಾಕಿಪಟುಗಳು ಸ್ಪರ್ಧಿಸಿದ್ದು, ವಯೋಮಿತಿ ೧೪ ರ ವಿಭಾಗದಲ್ಲಿ ಅಂತಿಮ ಸ್ಪರ್ಧೆಯಲ್ಲಿ ಬೆಂಗಳೂರಿನ ವಿದ್ಯಾಶಿಲ್ಪ ಅಕಾಡೆಮಿಯ ವಿರುದ್ಧ ೨-೦ ಗೋಲುಗಳಿಂದ ಜಯಗಳಿಸಿ ಚಾಂಪಿಯನ್ ಶಿಪ್ ತಮ್ಮದಾಗಿಸಿಕೊಂಡರು. ಕ್ಯಾಲ್ಸ್ ಶಾಲೆಯ ಸಮೃದ್ದ್ ಚೇಂದAಡ ಹಾಗೂ ದೈವಿಕ್ ಪೊನ್ನಣ್ಣ ತಲಾ ಒಂದೊAದು ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

ಈ ತಂಡದಲ್ಲಿ ಆರು ಹಾಕಿ ಪಟುಗಳು ಮುಂದೆ ಒರಿಸ್ಸಾದ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಹಾಗೆಯೇ ವಯೋಮಿತಿ ೧೯ ವಿಭಾಗದಲ್ಲಿ ಕ್ಯಾಲ್ಸ್ ತಂಡವು ಬೆಂಗಳೂರಿನ ಸೈಂಟ್ ಜೋಸೆಫ್ ಶಾಲೆಯ ವಿರುದ್ಧ ಸೆಣಸಾಡಿ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತು. ಈ ವಿಭಾಗದಲ್ಲಿಯೂ ಆರು ಕ್ರೀಡಾಪಟುಗಳು ರಾಷ್ಟçಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.