ಇಂದು ಮಾವು ದಿನ

"ಮಾವು ಹಣ್ಣುಗಳ ರಾಜ" ಎಂದು ಶಿಕ್ಷಕರು ತರಗತಿಯಲ್ಲಿ ಹೇಳುತ್ತಿದ್ದ ನೆನಪು ಇನ್ನೂ ಇದೆ. ಐದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಮಾವು ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನವನ್ನು ಹೊಂದಿದೆ.

ಮಾವಿನ ಕಾಯಿಯ ಸುವಾಸನೆಯನ್ನೇ ಹೊಂದಿ ಬಾಯಲ್ಲಿ ನೀರೂರಿಸುವ ಎಲೆಗಳನ್ನು ಹಬ್ಬ ಹರಿದಿನಗಳಲ್ಲಿ ಬಾಗಿಲಿಗೆ ತೋರಣ ಕಟ್ಟುವುದರಿಂದ ಸಹಜ ಸೌಂದರ್ಯದೊAದಿಗೆ ಅದರ ಪರಿಮಳಕ್ಕೆ ಕ್ರಿಮಿಕೀಟಗಳು ಬರದಂತೆ ಔಷಧವಾಗಬಹುದು.

ಯುಗಾದಿಯ ದಿನ ಮಾವಿನ ಕಾಯಿಯ ಪದಾರ್ಥವನ್ನು ತಿನ್ನಲೇಬೇಕೆಂಬುದು ಜನಪದರಲ್ಲಿ ಕಟ್ಟುನಿಟ್ಟಾಗಿ ಪಾಲಿಸಲ್ಪಡುವ ಸಂಪ್ರದಾಯ. ಧರ್ಮಶಾಸ್ತçದ ಪ್ರಕಾರ ಮಾವಿನ ಎಲೆಯನ್ನು ಲಕ್ಷಿö್ಮಗೆ ಪ್ರಿಯವೆಂದು ಪೂರ್ಣ ಕಲಶದಲ್ಲಿಟ್ಟು ದೇವಿಯನ್ನು ಆಹ್ವಾನಿಸಿ ಪೂಜಿಸುತ್ತಾರೆ. ಒಮ್ಮೆ ಶಿವಪುತ್ರ ಸುಬ್ರಹ್ಮಣ್ಯ ತನ್ನ ಗೆಳೆಯರಿಗೆ ಮಾವಿನ ಎಲೆಗಳನ್ನು ಗಂಟು ಹಾಕುವ ಕೆಲಸ ನೀಡಿದ್ದನಂತೆ. ಮಹಾಭಾರತ, ರಾಮಾಯಣ ಗ್ರಂಥಗಳಲ್ಲಿ ಮಾವಿನ ವರ್ಣನೆ ಇದ್ದು ಮಾವಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ.

ಹಿಂದೂ ಪುರಾಣದಲ್ಲಿ, ಮಹಾಭಾರತದಲ್ಲಿ, ಲಕ್ಷಿö್ಮÃಶನ ಜೈಮಿನಿ ಭಾರತದಲ್ಲಿ, ಕರಾವಳಿಯ ಯಕ್ಷಗಾನದಲ್ಲಿ, ಹೆಳವನಕಟ್ಟೆ ಗಿರಿಯಮ್ಮನ ಚಂದ್ರಹಾಸನ ಕಥೆಯಲ್ಲಿ, ಜನಪದ ಗೀತೆಯಲ್ಲಿ ಬರುವ ಚಂದ್ರಹಾಸನು ಮಾವಿನ ಮರದ ಕೆಳಗೆ ಮಲಗಿ ನಿದ್ರಿಸುವಾಗ ತಾನು ತಂದಿದ್ದ ಪತ್ರದಲ್ಲಿ ಅಕ್ಷರ ತಪ್ಪಾಗಿರುವುದನ್ನು ಗಮನಿಸಿದ ‘ವಿಷಯೆ’ ಎಂಬ ಹೆಣ್ಣು ಮಗಳು ಮಾವಿನ ಎಲೆಯ ರಸದಿಂದ ಅಕ್ಷರ ಸರಿಪಡಿಸಿ ಚಂದ್ರಹಾಸ ಬದುಕುಳಿಯುವಂತೆ ಮಾಡಿದ ಕಥೆ ಅತಿರೋಚಕವಾದದ್ದು. ಪಿ. ಲಂಕೇಶ ಅವರ ಆತ್ಮಕಥನದ ಹೆಸರು "ಹುಳಿ ಮಾವಿನ ಮರ" ಅಲ್ಲಿರುವ ಅಧ್ಯಾಯಗಳು ವಾಟೆ, ಸಸಿ, ಗಿಡ, ಮರ.

ಕುವೆಂಪುರವರ ಮಲೆನಾಡಿನ ಚಿತ್ರಗಳಲ್ಲಿ "ಕಾಡಿನಲ್ಲಿ ಕಳೆದ ಒಂದು ಇರುಳು" ಕಥೆಯಲ್ಲಿ ಕುವೆಂಪುರವರು ಗೆಳೆಯರೊಂದಿಗೆ ಕಾಡಿನಲ್ಲಿ ಒಂದು ರಾತ್ರಿ ಕಳೆಯುವ ಸಂದರ್ಭ ಬಹಳ ದೊಡ್ಡದಾದ ಕಾಡು ಮಾವಿನ ಮರ ಮತ್ತು ಅದರ ಹಣ್ಣುಗಳ ರುಚಿಗೆ ಕಾಡು ಪ್ರಾಣಿಗಳು ತಿನ್ನುವುದನ್ನು ವಿವರಿಸುತ್ತಾರೆ. ಸಾಹಿತ್ಯದಲ್ಲಿ ಪಂಪ, ಬೇಂದ್ರೆ, ಕುವೆಂಪು, ತೇಜಸ್ವಿ ಸೇರಿದಂತೆ ಹಲವಾರು ಸಾಹಿತಿಗಳು ಕೋಗಿಲೆಯೊಂದಿಗೆ ಮಾವಿನ ಮರದ ಚಿಗುರು ಹಣ್ಣುಗಳೊಂದಿಗೆ ವರ್ಣಿಸಿದ್ದಾರೆ.

ನಮಗೆಲ್ಲಾ ತಿಳಿದಿರುವ ಹಾಗೆ, ಪ್ರಕೃತಿ ಕಾಲಕಾಲಕ್ಕೆ ತಕ್ಕ ಹಾಗೆ ನಿಸರ್ಗದತ್ತವಾದ ಹಣ್ಣುಗಳನ್ನು ನೀಡುತ್ತಾ ಬರುತ್ತಿದೆ. ಹೀಗಾಗಿ ಋತುವಿಗೆ ಅನುಗುಣವಾಗಿ ಸಿಗುವ ಈ ಹಣ್ಣುಗಳನ್ನು ಸೇವಿಸುತ್ತಾ ಬರುವುದರಿಂದ ನಮ್ಮ ಆರೋಗ್ಯವನ್ನು ಸದೃಢತೆಯನ್ನು ಕಾಯ್ದುಕೊಳ್ಳಲು ನೆರವಾಗುವುದು. ಮಾವಿನ ಹಣ್ಣುಗಳನ್ನು ಮನುಷ್ಯರಂತೆಯೇ ಪ್ರಾಣಿ ಕೂಡ ಹುಡುಕಿಕೊಂಡು ಬಂದು ತಿನ್ನುತ್ತವೆ. ಅಳಿಲು, ಪಕ್ಷಿಗಳು ಮಾವಿನ ಹಣ್ಣನ್ನು ತಿನ್ನುವುದನ್ನು ನಾವು ಬಾಲ್ಯದಿಂದಲೂ ಕಂಡಿದ್ದೇವೆ. ವಿಭಿನ್ನ ರೀತಿಯ ಅದ್ಭುತ ರುಚಿ ಹೊಂದಿರುವ ಮಾವಿನ ಸವಿ ಸವಿಯದವರು ಯಾರಿದ್ದಾರೆ. ಒಂದೊAದು ಜಾತಿಯ ಮಾವಿನ ಹಣ್ಣು ಬೇರೆ ಬೇರೆ ರೀತಿಯ ರುಚಿ ಹೊಂದಿರುತ್ತವೆ. ಈ ಹಣ್ಣು ಹಳದಿ, ಕೆಂಪು, ಕಿತ್ತಳೆ ಹಾಗೂ ಹಸಿರು ಬಣ್ಣದಲ್ಲಿ ಸಿಗುತ್ತವೆ. ಇಷ್ಟೆಲ್ಲಾ ಹಿನ್ನೆಲೆ ಹೊಂದಿರುವ ಮಾವಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ೧೯೮೭ ರಲ್ಲಿ ‘ಭಾರತೀಯ ತೋಟಗಾರಿಕಾ ಮಂಡಳಿ’ಯು ಅಂರ‍್ರಾಷ್ಟಿçÃಯ ಮಾವು ಉತ್ಸವದ ಪರಿಕಲ್ಪನೆಯನ್ನು ಭಾರತದಲ್ಲಿ ಜಾರಿಗೆ ತಂದಿತು. ಪ್ರತಿ ವರ್ಷ ಜುಲೈ ೨೨ ರಂದು "ರಾಷ್ಟಿçÃಯ ಮಾವುಗಳ ದಿನ" ಎಂದು ಆಚರಿಸಲಾಗುತ್ತದೆ.

ಕರ್ನಾಟಕದಲ್ಲಿ ರಸಪುರಿ, ಅಲ್ಫಾನ್ಸೊ, ಮಲ್ಲಿಕಾ, ತೋತಾಪುರಿ, ಬೈಗನಪಲ್ಲಿ, ಪೈರಿ, ನೀಲಂ, ಮಲ್ಗೋವಾ ಮಾವು ಇದ್ದು ಇವು ಹೆಚ್ಚು ರಫ್ತಾಗುತ್ತವೆ.

ಸಲೆಡ್‌ನಿಂದ ಹಿಡಿದು ಚಟ್ನಿ, ಗೊಜ್ಜು, ಸಾಂಬಾರು, ಹುಳಿ, ಹೀಗೆ ಬಗೆ ಬಗೆಯ ತಿನಿಸುಗಳನ್ನು ಕೂಡ ತಯಾರಿಸಲಾಗುತ್ತದೆ. ಫಸಲಿನ ಸಂದರ್ಭದಲ್ಲಿ ನೋಡಲು ಎರಡು ಕಣ್ಣುಗಳು ಸಾಲದು ಅದರಲ್ಲೂ ಮಲೆನಾಡಿನಲ್ಲಿ ಸಿಗುವ ಕಾಡು ಮಾವು, ಜೀರಿಗೆ ಮಾವುಗಳಿಂದ ತಯಾರಿಸುವ ವಿವಿಧ ಖಾದ್ಯಗಳು ಅತ್ಯಂತ ರುಚಿಕರವಾಗಿರುತ್ತದೆ. ಮಲೆನಾಡಿನಲ್ಲಿ ಕಾಡು ಮಾವಿನಕಾಯಿ ಮತ್ತು ಹಣ್ಣನ್ನು ಉಪ್ಪಿನೊಂದಿಗೆ ಭರಣಿಗಳಲ್ಲಿ ಸಂಗ್ರಹಿಸಿಡುವುದು ವಾಡಿಕೆ.

ಔಷಧಿ: ಮಾವಿನ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ ರಾತ್ರಿಯಿಡೀ ನೀರಿನಲ್ಲಿ ಬಿಟ್ಟು ಬೆಳಿಗ್ಗೆ ಈ ನೀರನ್ನು ಕುಡಿದರೆ ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಹಾಗೆಯೇ ಮಾವಿನ ಮರದ ತೊಗಟೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿ ಇಟ್ಟುಕೊಂಡು ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಅದರ ಕಷಾಯವನ್ನು ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ. ಮಾವಿನ ಎಲೆಗಳನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಮೂಳೆ ನೋವಿಗೆ, ತಲೆ ಕೂದಲು ಕಪ್ಪಾಗಲು ಬಳಸಲಾಗುತ್ತದೆ. ಮಾವಿನ ಚಿಗುರಿನಿಂದ ಮುಖದ ಸೌಂದರ್ಯಕ್ಕೆ, ದೇಹ ಸುಗ್ಗುಗಟ್ಟುವುದನ್ನು ತಡೆಗಟ್ಟಲು, ಚರ್ಮದ ಸುಟ್ಟ ಗಾಯಕ್ಕೆ ಇದರ ಪೇಸ್ಟನ್ನು ಲೇಪನ ಮಾಡುತ್ತಾರೆ. ಅಧಿಕ ರಕ್ತದೊತ್ತಡ, ದೇಹದ ಕೊಬ್ಬು ನಿವಾರಣೆಗೆ ಚಿಗುರು ಎಲೆಗಳ ಕಷಾಯವನ್ನು ಉಪಯೋಗಿಸಬಹುದು. ಇದು ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡಿ ಇಂಗಾಲದ ಡೈ ಆಕ್ಸೆöÊಡನ್ನು ವೇಗವಾಗಿ ಹೀರಿಕೊಳ್ಳುತ್ತದೆ. ಮಾವಿನಲ್ಲಿ ವಿಟಮಿನ್ ಸಿ ಮತ್ತು ಬೀಟಾ-ಕ್ಯಾರೋಟಿನ್‌ನಂತಹ ಆ್ಯಂಟಿ ಆಕ್ಸಿಡೆಂಟ್‌ಗಳ ಅಂಶವಿದ್ದು ನಿಯಮಿತ ಸೇವನೆಯಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ಮುಖದ ಕಾಂತಿಯನ್ನು ವೃದ್ಧಿಸುವುದರೊಂದಿಗೆ ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿ ಕಣ್ಣಿನ ದೃಷ್ಟಿಗೆ ಹೊಳಪು ನೀಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಎಲೆಯಿಂದ ಗೊಬ್ಬರ ತಯಾರಿಸಬಹುದು. ಇದರ ನೆರಳು ಮನಸ್ಸಿಗೆ ಆಹ್ಲಾದವನ್ನುಟು ಮಾಡುತ್ತದೆ. ಹಾಗೆಯೇ ಮಾವಿನ ಮರದ ನೆರಳು ಮನೆಯ ಮೇಲೆ ಬೀಳಬಾರದೆಂಬುದು ಜನಪದರ ನಂಬಿಕೆ.

ಮಾವಿನ ಮೇಳಗಳನ್ನು ಏರ್ಪಡಿಸಿ ಹಲವು ರೀತಿಯ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟದೊಂದಿಗೆ ಮಾವುಗಳಲ್ಲಿರುವ ತಳಿಗಳ ಕುರಿತು ಮಾಹಿತಿಯನ್ನು ಗಿಡಗಳ ಮಾರಾಟವನ್ನು ಮಾಡಲಾಗುತ್ತದೆ. ಅಳಿವಿನಂಚಿನಲ್ಲಿರುವ "ಅಪ್ಪೆ ಮಿಡಿ ಮಾವಿನ" ಮರಗಳಿಂದ ಮಿಡಿಕಾಯಿ ಕೀಳುವಾಗ ಅದರ ಕೊಂಬೆಗಳನ್ನೆಲ್ಲ ಕಡಿಯುವುದರಿಂದ ಮರ ನಾಶವಾಗುತ್ತಿವೆ.

೧೫೦ಕ್ಕೂ ಹೆಚ್ಚು ತಳಿಗಳನ್ನು ಹೊಂದಿರುವ ಮಿಡಿ ಮಾವನ್ನು (ಕಾಡು ಮಾವು) ರಕ್ಷಿಸುವ ಅವಶ್ಯಕತೆ ಇದೆ. ಹಾಗೆಯೇ ರೈತರು ತಮ್ಮ ಕೃಷಿಯಲ್ಲಿ ಮಾವನ್ನು ಹೆಚ್ಚು ಬೆಳೆಯುತ್ತಿರುವುದು ಸಂತೋಷದ ವಿಷಯ. ಆದರೆ ಮಧ್ಯವರ್ತಿಗಳು ಹಣ್ಣು ಹೆಚ್ಚು ಕಾಲ ಕೆಡದಂತೆ ಬಣ್ಣ ಹೆಚ್ಚಾಗಲು ಔಷಧಿಯನ್ನು ಸಿಂಪಡಿಸುತ್ತಿರುವುದು ಬೇಸರದ ವಿಷಯ.ಪದವೀಧರರಾಗಿರುವ ರೈತರು ಆಧುನಿಕ ರೀತಿಯಲ್ಲಿ ಕಸಿ ಕಟ್ಟುವ ಕೆಲಸದಲ್ಲಿ ಆಸಕ್ತಿ ವಹಿಸುತ್ತಿರುವುದು ಸಂತೋಷದ ವಿಷಯವೇ ಸರಿ.

ಮಿಡಿ ಮಾವಿನ ಉಪ್ಪಿನಕಾಯಿಯ ಹೆಸರೇಳಿದರೆ ಬಾಯಲ್ಲಿ ನೀರು ಬರುವುದಲ್ಲವೇ...!

- ಎಸ್.ಎಂ. ರಜನಿ, ಸಹಾಯಕ ಪ್ರಾಧ್ಯಾಪಕರು,

ಕಾವೇರಿ ಕಾಲೇಜು ಗೋಣಿಕೊಪ್ಪಲು.