ಮಡಿಕೇರಿ, ಜು. ೨೦: ಜಿಲ್ಲೆಗೆ ತಾ.೧೯ ರಂದು ಆಗಮಿಸಿದ್ದ ಕೊಡಗು-ಮೈಸೂರು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅವರಿಗೆ ಮಡಿಕೇರಿ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ಶತಮಾನ ಭವನದ ಮುಂದುವರಿದ ಕಾಮಗಾರಿಗೆ ಅನುದಾನ ನೀಡುವಂತೆ ಮನವಿ ಮಾಡಲಾಯಿತು. ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶತಮಾನ ಭವನದಲ್ಲಿ ಸಸ್ಯಾಹಾರಿ ಊಟದ ಸಮಾರಂಭಗಳಿಗೆ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪ ನೆರವಾಗಿದೆ. ಆದರೆ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ನಡೆಸಲು ವಿಶಾಲ ಸ್ಥಳದ ಕೊರತೆಯಿದ್ದು, ಭವನದ ಈಗಿರುವ ಕಟ್ಟಡದ ಮೇಲೆ ಹೆಚ್ಚುವರಿ ಸಭಾಂಗಣವೊAದನ್ನು ನಿರ್ಮಿಸಲು ಅನುದಾನದ ಅಗತ್ಯವಿದ್ದು, ಇದಕ್ಕೆ ಸ್ಪಂದಿಸುವAತೆ ಮನವಿ ಪತ್ರದ ಮೂಲಕ ಸಂಸದರಲ್ಲಿ ಕೋರಲಾಯಿತು. ಈ ಸಂದರ್ಭ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷೆ ಗೀತಾ ಗಿರೀಶ್, ಕಾರ್ಯದರ್ಶಿ ಬಿ.ಕೆ ಜಗದೀಶ್, ನಿರ್ದೇಶಕರುಗಳಾದ ಜಿ.ಡಿ. ಶಿವಶಂಕರ್, ಬಿ.ಕೆ. ಅರುಣ್ ಕುಮಾರ್, ಸೋಮೇಶ್ ಭಟ್ ಅವರುಗಳು ಹಾಜರಿದ್ದರು.