ಮಡಿಕೇರಿ, ಜು. ೨೧: ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಪುನರ್ವಸು ಮಳೆಯ ನಂತರ ನಿನ್ನೆಯಿಂದ ಆರಂಭಗೊAಡ ಪುಷ್ಯ ಮಳೆ ಆರಂಭದಲ್ಲೇ ತಗ್ಗಿದ್ದು, ನಿನ್ನೆ ಹಾಗೂ ಇಂದು ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಕಡಿಮೆಯಾಗಿದೆ. ತಾ. ೬ ರಿಂದ ಹಲವಾರು ದಿನಗಳ ಕಾಲ ಆರ್ಭಟಿಸಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದ ಪುನರ್ವಸು ಮಳೆಯ ಬಳಿಕ ನಿನ್ನೆಯಿಂದ ಆರಂಭವಾಗಿರುವ ಪುಷ್ಯ ಮಳೆಯು ರಭಸವಾಗಿ ಸುರಿಯಲಿದೆ ಎಂಬ ನಿರೀಕ್ಷೆ ಸದ್ಯದ ಮಟ್ಟಿಗೆ ಹುಸಿಯಾದಂತಿದೆ.
ಆಗಸ್ಟ್ ೩ರವರೆಗೂ ಪುಷ್ಯ ಮಳೆ ಇರಲಿದ್ದು, ಮುಂದಿನ ದಿನಗಳಲ್ಲಿ ಆಶ್ಲೇಷ ಮಳೆ ರಭಸಗೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಪುನರ್ವಸು ಮಳೆಯಿಂದಾಗಿ ಅಸ್ತವ್ಯಸ್ತಗೊಂಡಿದ್ದ ಜನಜೀವನ ಎರಡು ದಿನಗಳಿಂದ ಕೊಂಚ ತಹಬದಿಗೆ ಬಂದಿದ್ದು, ಉಕ್ಕಿ ಹರಿಯುತ್ತಿದ್ದ ಜಲಮೂಲಗಳಲ್ಲಿ ನೀರಿನ ಪ್ರಮಾಣ ಕೊಂಚ ಕ್ಷೀಣಿಸಿದೆ. ಮಳೆಯಿಂದ ಜಿಲ್ಲೆಯಲ್ಲಿ ಉಂಟಾಗಿರುವ ಅನಾಹುತಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಎರಡು ದಿನಗಳಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಬೋಸರಾಜ್ ಅವರು ಜಿಲ್ಲೆಯಲ್ಲಿ ಸುತ್ತಾಟ ನಡೆಸುತ್ತಿದ್ದು, ಈ ಅವಧಿಯಲ್ಲಿಯೇ ಮಳೆಯ ಪ್ರಮಾಣ ಇಳಿಮುಖಗೊಂಡಿರುವುದು ವಿಶೇಷವೆನಿಸಿದೆ.
ಕಳೆದ ೨೪ ಗಂಟೆ ಅವಧಿಯಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ ೧೧.೬೦ ಇಂಚು ಮಳೆಯಾಗಿದೆ. ಸೋಮವಾರಪೇಟೆ ಹೋಬಳಿಯಲ್ಲಿ ೧.೫೮ ಇಂಚು, ಶನಿವಾರಸಂತೆಗೆ ೨.೭೯ ಇಂಚು, ಶಾಂತಳ್ಳಿಗೆ ೪.೪೮ ಇಂಚು, ಕೊಡ್ಲಿಪೇಟೆಗೆ ೨.೭೪ ಇಂಚು ಮಳೆ ಸುರಿದಿದೆ.
ಪೊನ್ನಂಪೇಟೆ ತಾಲೂಕಿನಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೬.೬೫ ಇಂಚು ಮಳೆಯಾಗಿದೆ. ಪೊನ್ನಂಪೇಟೆ ಹೋಬಳಿಯಲ್ಲಿ ೧.೧೮ ಇಂಚು, ಹುದಿಕೇರಿಗೆ ೧.೬೫ ಇಂಚು, ಶ್ರೀಮಂಗಲಕ್ಕೆ ೨.೪೪ ಇಂಚು, ಬಾಳೆಲೆಗೆ ೧.೩೭ ಇಂಚು ಮಳೆ ಬಿದ್ದಿದೆ. ೩ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಮಡಿಕೇರಿ ತಾಲೂಕಿಗೆ ಕಳೆದ ೨೪ ಗಂಟೆ ಅವಧಿಯಲ್ಲಿ ೩.೫೯ ಇಂಚು ಮಳೆಯಾಗಿದೆ. ಮಡಿಕೇರಿ ಹೋಬಳಿಯಲ್ಲಿ ೦.೩೪, ನಾಪೋಕ್ಲುವಿನಲ್ಲಿ ೧.೧೦ ಇಂಚು, ಸಂಪಾಜೆಗೆ ೦.೦೧ ಇಂಚು, ಭಾಗಮಂಡಲಕ್ಕೆ ೨.೧೨ ಇಂಚು ಮಳೆಯಾಗಿದೆ. ಕಳೆದ ೨೪ ಗಂಟೆ ಅವಧಿಯಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ೦.೪೯ ಇಂಚು ಮಳೆಯಾಗಿದೆ. ವೀರಾಜಪೇಟೆ ಹೋಬಳಿಯಲ್ಲಿ ೦.೨೯ ಇಂಚು, ಅಮ್ಮತ್ತಿ ಹೋಬಳಿಗೆ ೦.೧೯ ಇಂಚು ಮಳೆ ಸುರಿದಿದೆ.
ಕುಶಾಲನಗರ ತಾಲೂಕಿನಲ್ಲಿ ಕಳೆದ ೨೪ ಗಂಟೆ ಅವಧಿಯಲ್ಲಿ ೦.೦೫ ಇಂಚು ಮಳೆಯಾಗಿದೆ. ಕುಶಾಲನಗರ ಹೋಬಳಿಯಲ್ಲಿ ೦.೦೧ ಇಂಚು, ಸುಂಟಿಕೊಪ್ಪ ಹೋಬಳಿಗೆ ೦.೦೩ ಇಂಚು ಮಳೆಯಾಗಿದೆ.