ಮಡಿಕೇರಿ, ಜು. ೨೦: ಒಂದು ವಾರಕ್ಕೂ ಅಧಿಕ ಸಮಯದಿಂದ ಜಿಲ್ಲೆಯಲ್ಲಿ ಕಂಡುಬAದಿದ್ದ ಮಳೆ - ಗಾಳಿಯ ಅಬ್ಬರ ಶನಿವಾರದಿಂದು ಒಂದಷ್ಟು ಕಡಿಮೆಯಾಗಿದೆ. ತಾ. ೨೦ ರಿಂದ ಪುಷ್ಯ ಮಳೆ ನಕ್ಷತ್ರ ಆರಂಭಗೊAಡಿದ್ದು, ಜುಲೈ ೬ ರಿಂದ ಇದ್ದ ಪುನರ್ವಸು ಮಳೆಯ ಅರ್ಭಟ ಇದೀಗ ತಗ್ಗಿದಂತಾಗಿದೆ. ಸತತ ದಿನಗಳಿಂದ ಸುರಿದ ನಿರಂತರ ಮಳೆಯಿಂದಾಗಿ ಇಡೀ ಜಿಲ್ಲೆಯಾದ್ಯಂತ ವ್ಯಾಪಕ ನಷ್ಟ ಸಂಭವಿಸಿದ್ದು ಜನಜೀವನ ಅಸ್ತವ್ಯಸ್ತಗೊಂಡAತಾಗಿತ್ತು. ಕಳೆದ ಒಂದು ವಾರದಿಂದಲೂ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇದೀಗ ಮಳೆಯ ರಭಸ ಕಡಿಮೆಯಾದ ಹಿನ್ನೆಲೆ ಜನತೆ ಒಂದಷ್ಟು ಚೇತರಿಸಿ ಕೊಳ್ಳುವಂತಾಗಿದೆ. ಎಲ್ಲೆಡೆ ಏರಿಕೆಯಾಗಿದ್ದ ನೀರಿನ ಮಟ್ಟದಲ್ಲೂ ಕೊಂಚ ಇಳಿಮುಖವಾಗುತ್ತಿದೆ.

ಶನಿವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಜಿಲ್ಲೆಯಲ್ಲಿ ಸರಾಸರಿ ೨.೨೩ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೨.೬೩ ಇಂಚು, ವೀರಾಜಪೇಟೆ ೧.೨೫, ಪೊನ್ನಂಪೇಟೆ ೨.೦೨, ಸೋಮವಾರಪೇಟೆ ೩.೮೬ ಹಾಗೂ ಕುಶಾಲನಗರ ತಾಲೂಕಿನಲ್ಲಿ ೧.೪೧ ಇಂಚು ಮಳೆ ಕಳೆದ ೨೪ ಗಂಟೆಗಳಲ್ಲಿ ದಾಖಲಾಗಿದೆ.

ಜಿಲ್ಲೆಯ ವಿವಿಧ ಹೋಬಳಿ ಗಳಲ್ಲೂ ಮಳೆಯ ಪ್ರಮಾಣ ಒಂದಷ್ಟು ಇಳಿಮುಖವಾಗಿದೆ. ಆದರೂ ಮುಂಗಾರಿನ ಚಿತ್ರಣ ಮುಂದುವರಿದ್ದು ಮತ್ತೆ ಯಾವ ಸಮಯದಿಂದ ಪುಷ್ಯ ಮಳೆಯೂ ತನ್ನ ಅಬ್ಬರ ತೋರಲಿದೆಯೋ ಎಂಬ ಆತಂಕ ಜನತೆಯಲ್ಲಿ ಇದೆ.

ಕಳೆದ ೨೪ ಗಂಟೆಗಳಲ್ಲಿ ಮಡಿಕೇರಿ ಹೋಬಳಿಯಲ್ಲಿ ೨.೩೮, ನಾಪೋಕ್ಲು ೨.೩೨, ಸಂಪಾಜೆ ೨.೪೧, ಭಾಗಮಂಡಲ ೩.೩೬, ವೀರಾಜಪೇಟೆ ೧.೨೪, ಅಮ್ಮತ್ತಿಯಲ್ಲಿ ೧.೨೬ ಇಂಚು ಮಳೆಯಾಗಿದೆ. ಹುದಿಕೇರಿ ೨.೩೪, ಶ್ರೀಮಂಗಲ ೩.೮೦, ಪೊನ್ನಂಪೇಟೆ ೧, ಬಾಳೆಲೆ ೧, ಸೋಮವಾರಪೇಟೆ ೩.೨೮, ಶನಿವಾರಸಂತೆ ೨.೨೮, ಶಾಂತಳ್ಳಿ ೭.೩೬, ಕೊಡ್ಲಿಪೇಟೆ ೨.೦೨, ಸುಂಟಿಕೊಪ್ಪ ೨ ಹಾಗೂ ಕುಶಾಲನಗರ ಹೋಬಳಿಯಲ್ಲಿ ೦.೭೯ ಇಂಚು ಮಳೆಯಾಗಿದೆ.ಸೋಮವಾರಪೇಟೆ : ತಾಲೂಕಿನಾದ್ಯಂತ ಮಳೆಯ ಅಬ್ಬರ ಕೊಂಚ ಮಟ್ಟಿಗೆ ತಗ್ಗಿದ್ದರೂ ಗಾಳಿಯ ಭೋರ್ಗರೆತ ಹೆಚ್ಚಾಗಿದೆ. ನಿನ್ನೆಯವರೆಗೂ ಸುರಿದ ಧಾರಾಕಾರ ಮಳೆಗೆ ವಾತಾವರಣದಲ್ಲಿ ಶೀತ ಅಧಿಕವಾಗಿದ್ದು, ವಾಸದ ಮನೆಗಳಿಗೆ ಹಾನಿಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಪಟ್ಟಣ ಸಮೀಪದ ಕಲ್ಕಂದೂರು ಗ್ರಾಮದ ಹಸೈನಾರ್ ಎಂಬವರಿಗೆ ಸೇರಿದ ವಾಸದ ಮನೆಯ ಮೇಲೆ ಮರ ಉರುಳಿಬಿದ್ದು, ಮೇಲ್ಛಾವಣಿ ಜಖಂಗೊAಡಿದೆ. ಅದೃಷ್ಟವಶಾತ್ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಶನಿವಾರಸಂತೆ ಹೋಬಳಿಯ ಶುಂಠಿ ಮಂಗಳೂರು ಗ್ರಾಮದ ಇಂದ್ರಮ್ಮ ಮುತ್ತಪ್ಪ ಅವರ ವಾಸದ ಮನೆ ಅತೀ ಶೀತಕ್ಕೆ ಕುಸಿತಗೊಂಡಿದೆ. ಮನೆಯ ಒಂದು ಪಾರ್ಶ್ವ ಗೋಡೆ ಸಹಿತ ಕುಸಿದು ಬಿದ್ದಿದ್ದು, ವಾಸಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಮನೆ ಮಂದಿಗೆ ಸಂಬAಧಿಕರ ಮನೆಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಶಾಂತಳ್ಳಿ ಹೋಬಳಿಯ ತೋಳೂರುಶೆಟ್ಟಳ್ಳಿ ಗ್ರಾಮದ ವಿ.ಕೆ. ಇಂದಿರಾ ಕುಮಾರಪ್ಪ ಅವರಿಗೆ ವಾಸದ ಮನೆಯ ಗೋಡೆ, ಛಾವಣಿ ಕುಸಿದು ಶೇ. ೭೦ರಷ್ಟು ಹಾನಿಯಾಗಿರುವ ಬಗ್ಗೆ ಕಂದಾಯ ಇಲಾಖೆಗೆ ವರದಿಯಾಗಿದೆ. ಮಳೆಯ ಅಬ್ಬರ ತಗ್ಗಿದ್ದರೂ ವಾತಾವರಣದಲ್ಲಿನ ಶೀತದಿಂದಾಗಿ ಕಚ್ಚಾ ಮನೆಗಳು ಹಾನಿಯಾಗುತ್ತಿವೆ. ಸಿದ್ದಾಪುರ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಸಂತ್ರಸ್ತರಿಗೆ ಪರಿಹಾರ ಕೇಂದ್ರವನ್ನು ತೆರೆಯಲಾಗಿದ್ದು, ಈ ಕೇಂದ್ರದಲ್ಲಿ ಆರು ಕುಟುಂಬಗಳ ೧೮ ಮಂದಿ ತಮ್ಮ ಸಂಸಾರದೊAದಿಗೆ ವಾಸವಾಗಿದ್ದಾರೆ. ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ನೇತೃತ್ವದಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗೆ ಮನೋರಂಜನೆಗಾಗಿ ಟಿವಿಯನ್ನು ಅಳವಡಿಸಲಾಗಿದ್ದು, ಉತ್ತಮ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ತಹಶೀಲ್ದಾರ್ ಸೂಚನೆಯ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸಂತ್ರಸ್ತರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಸಂತ್ರಸ್ತರ ಕುಟುಂಬದ ಮಕ್ಕಳಿಗೆ ಆಟವಾಡಲು ಕೇರಂ ವ್ಯವಸ್ಥೆ ಮಾಡಲಾಗಿದ್ದು ಸಂತ್ರಸ್ತರು ತಮ್ಮ ಮನೆಯಲ್ಲಿರುವಂತೆ ಪರಿಹಾರ ಕೇಂದ್ರದಲ್ಲಿ ಕಾಲ ಕಳೆಯುತ್ತಿದ್ದಾರೆ. ಇವರುಗಳಿಗೆ ತಾಲೂಕು ಆಡಳಿತದ ವತಿಯಿಂದ ಎಲ್ಲಾ ಅಗತ್ಯ ವಸ್ತುಗಳನ್ನು ತಹಶೀಲ್ದಾರ್ ರಾಮಚಂದ್ರ ನೀಡಿದ್ದಾರೆ. ಕೆಲವು ಸಂತ್ರಸ್ತ ಕುಟುಂಬಗಳು ಪರಿಹಾರ ಕೇಂದ್ರಕ್ಕೆ ಆಗಮಿಸದೆ ತಮ್ಮ ಸಂಬAಧಿಕರ ಮನೆಗೆ ತೆರಳಿವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪರಿಹಾರ ಕೇಂದ್ರದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಆಡಳಿತಾಧಿಕಾರಿ ಹೋಮಪ್ಪ ಬಣಕರ್, ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಫೀಕ್, ಕಾರ್ಯದರ್ಶಿ ಮೋಹನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ್, ಉಪಾಧ್ಯಕ್ಷ ಪಳನಿಸ್ವಾಮಿ, ಸದಸ್ಯರುಗಳು, ಸಿಬ್ಬಂದಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಶಿಕ್ಷಕರು ಸ್ಥಳದಲ್ಲೇ ಹಾಜರಿದ್ದಾರೆ. - ವಾಸು

ಕುಂದಳ್ಳಿ ಗ್ರಾಮದ ಕನ್ನಳ್ಳಿ-ಬೇಕನಳ್ಳಿಯಲ್ಲಿ ಹೊಳೆಯ ನೀರು ಗದ್ದೆಗಳಿಗೆ ನುಗ್ಗಿದೆ. ಮರಳು ಮಿಶ್ರಿಣ ಮಣ್ಣು ಶೇಖರಣೆಯಾಗಿರುವುದರಿಂದ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಸುಮಾರು ೧೦ ಏಕರೆ ಗದ್ದೆ ಪ್ರದೇಶ ಜಲಾವೃತವಾಗಿದೆ.

ಹಟ್ಟಿಹೊಳೆ-ಮುಕ್ಕೋಡ್ಲು ರಸ್ತೆಯಲ್ಲಿರುವ ಹೊದಕಾನ ಶ್ರೀ ಭದ್ರಕಾಳಿ ದೇವಾಲಯ ಜಲಾವೃತಗೊಂಡಿದೆ. ಹಟ್ಟಿಹೊಳೆಯಲ್ಲಿ ನೀರಿನ ಹರಿವು ಅಧಿಕವಾಗಿದ್ದು, ಅಕ್ಕಪಕ್ಕದ ಹೊಳೆಪಾತ್ರದ ಪ್ರದೇಶಕ್ಕೆ ನೀರು ನುಗ್ಗಿದೆ.

ಭಾರೀ ಗಾಳಿಗೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿದ್ದು, ಸೆಸ್ಕ್ ಸಿಬ್ಬಂದಿಗಳು ಹರಸಾಹಸ ಪಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಹಾನಿ ಸಂಭವಿಸುತ್ತಿದೆ. ತೋಟ, ರಸ್ತೆ ಬದಿಯಲ್ಲಿ ಸಾಗಿರುವ ತಂತಿಗಳ ಮೇಲೆ ಮರಗಳು ಬಿದ್ದು, ಕಂಬಗಳು ಧರಾಶಾಹಿಯಾಗುತ್ತಿವೆ. ಬಿಡುವಿಲ್ಲದ ಕೆಲಸದಲ್ಲಿ ವಿದ್ಯುತ್ ಇಲಾಖಾ ಲೈನ್‌ಮೆನ್‌ಗಳು ತೊಡಗಿಸಿಕೊಂಡಿದ್ದಾರೆ.ಐಗೂರು : ಮಳೆ ಮತ್ತು ಗಾಳಿಯ ರಭಸಕ್ಕೆ ಯಡವಾರೆಯ ವಸಂತ ಎಂಬವರ ತೋಟದಲ್ಲಿದ್ದ ಒಣಗಿದ ಬೀಟಿ ಮರವು ದಿವಂಗತ ಚಂದ್ರಶೇಖರ್ ಅವರ ಪತ್ನಿ ಆಶಾ ಚಂದ್ರಶೇಖರ್ ಅವರ ಮನೆಯ ಮುಂಭಾಗಕ್ಕೆ ರಸ್ತೆಗೆ ಅಡ್ಡಲಾಗಿ ಬಿದ್ದು ಮನೆಯ ಒತ್ತಿನಲ್ಲಿದ್ದ ಅಂಗಡಿಯ ಮೇಲ್ಛಾವಣಿಯ ಶೀಟುಗಳು ನಾಶವಾಗಿದೆ. ಅದೃಷ್ಟವಶಾತ್ ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸಿದ್ದಾಪುರ ಗಾಳಿ ಮಳೆಗೆ ಸಿಲುಕಿ ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಜಿಲಗೆರೆ ಪುಲಿಯೇರಿ ಗ್ರಾಮದ ನಿವಾಸಿ ಶಾರದಾ ನಾರಾಯಣ ಎಂಬವರ ಮನೆ ಕುಸಿದಿದೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಅನೀಸ್ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕುಶಾಲನಗರ: ಕುಶಾಲನಗರದಲ್ಲಿ ಪ್ರವಾಹ ಪೀಡಿತ ಸಾಯಿ ಬಡಾವಣೆಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನದಿ ನಿರ್ವಹಣೆ ಮೂಲಕ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ,ಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ಮತ್ತಿತರರು ಇದ್ದರು.

ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಕೇರಿ ಗ್ರಾಮದ ಬಿದ್ದಂಡ ಪ್ರೇಮ ಕುಶಾಲಪ್ಪ ಎಂಬವರ ಮನೆಯ ಸಮೀಪದ ಲೈನ್ ಮನೆಗೆ ಗಾಳಿ ಮಳೆಯ ರಭಸಕ್ಕೆ ಮರ ಉರುಳಿ ಬಿದ್ದಿದೆ.

ಸಿದ್ದಾಪುರ : ಚೆನ್ನಯ್ಯನಕೋಟೆ ಗ್ರಾಮದ ಕಾಲೋನಿ ನಿವಾಸಿ ಲಕ್ಷಿö್ಮ ಎಂಬವರ ಮನೆಯ ಗೋಡೆಗಳು ಕುಸಿದಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಪಿ.ಆರ್. ಶೀಲಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.