ಮಡಿಕೇರಿ, ಜು. ೧೯: ಕಳೆದ ಕೆಲವು ವರ್ಷಗಳ ಬಳಿಕ ಎಂಬAತೆ ಪುನರ್ವಸು ಮಳೆ ಇಡೀ ಕೊಡಗು ಜಿಲ್ಲೆಯನ್ನು ತಲ್ಲಣಗೊಳಿಸುವ ರೀತಿಯಲ್ಲಿ ಸುರಿದಿದ್ದು, ಹತ್ತು ಹಲವಾರು ಅನಾಹುತಗಳನ್ನು ಸೃಷ್ಟಿಸಿದೆ. ಕಳೆದ ಎಂಟು ದಿನಗಳಿಂದ ನಿರಂತರವಾಗಿ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರದಿಂದಾಗಿ ಎಲ್ಲೆಡೆ ನೀರು ತುಂಬಿದ್ದು, ಜಿಲ್ಲೆ ಜಲಾವೃತಗೊಂಡAತಿದೆ. ಶಾಲಾ - ಕಾಲೇಜುಗಳಿಗೂ ಸತತ ರಜೆ, ವಿದ್ಯುತ್ ಸಮಸ್ಯೆ, ಮನೆಗಳಿಗೆ ಹಾನಿ, ಬರೆಕುಸಿತ, ಮರಗಳು ಬೀಳುತ್ತಿರುವುದು, ಹಲವೆಡೆ ರಸ್ತೆ ಸಂಪರ್ಕ ಕಡಿತ ಸೇರಿದಂತೆ ಅನೇಕ ಅನಾಹುತಗಳನ್ನು ಸೃಷ್ಟಿಸಿದ್ದ ಪುನರ್ವಸು ಮಳೆ ನಕ್ಷತ್ರ ತಾ.೧೯ರ ಶುಕ್ರವಾರ ಮುಗಿದಿದ್ದು, ತಾ. ೨೦ರಿಂದ (ಇಂದಿನಿAದ) ಪುಷ್ಯ ಮಳೆ ಆರಂಭಗೊಳ್ಳಲಿದೆ.
ವ್ಯಾಪಕ ಮಳೆ- ಗಾಳಿಯಿಂದಾಗಿ ಕಾವೇರಿ, ಲಕ್ಷö್ಮಣತೀರ್ಥ ಸೇರಿದಂತೆ ಎಲ್ಲಾ ನದಿ, ತೊರೆ, ತೋಡುಗಳು ಉಕ್ಕಿ ಹರಿಯುತ್ತಿದ್ದು, ನೀರಿನ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ. ಗುರುವಾರ ಕೂಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿದೆ. ಶುಕ್ರವಾರವೂ ಧಾರಾಕಾರ ಮಳೆಯಾಗಿದ್ದು, ಜನರ ಆತಂಕ ಇನ್ನೂ ಕಡಿಮೆಯಾಗಿಲ್ಲ. ಕಾವೇರಿ ಪ್ರವಾಹಕ್ಕೆ ತುತ್ತಾಗುವ ಕುಶಾಲನಗರ ವ್ಯಾಪ್ತಿಯ ಬಡಾವಣೆಗಳಲ್ಲಿನ ನಿವಾಸಿಗಳು ತೀರಾ ಭಯದ ವಾತಾವರಣದಲ್ಲೇ ಇದ್ದಾರೆ.
ಜಿಲ್ಲೆಯಲ್ಲಿ ಸರಾಸರಿ
೪.೨೨ ಇಂಚು ಮಳೆ
ಶುಕ್ರವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಜಿಲ್ಲೆಯಲ್ಲಿ ಸರಾಸರಿ ೪.೨೨ ಇಂಚುಗಳಷ್ಟು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೬.೧೦ ಇಂಚುಗಳಷ್ಟು ಭಾರೀ ಮಳೆ ದಾಖಲಾಗಿದೆ. ವೀರಾಜಪೇಟೆ ೫.೨೩, ಪೊನ್ನಂಪೇಟೆ ೨.೮೯, ಸೋಮವಾರಪೇಟೆ ೪.೬೦ ಹಾಗೂ ಕುಶಾಲನಗರ ತಾಲೂಕಿನಲ್ಲಿ ೨.೩೧ ಇಂಚು ಸರಾಸರಿ ಮಳೆಯಾಗಿದೆ.
ಕಳೆದ ವರ್ಷಕ್ಕಿಂತ
೨೮.೪೯ ಇಂಚು ಅಧಿಕ
ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಗೆ ಈ ಬಾರಿ ೨೮.೪೯ ಇಂಚು ಗಳಷ್ಟು ಹೆಚ್ಚು ಮಳೆಯಾಗಿದೆ. ಪ್ರಸಕ್ತ ವರ್ಷ ಜನವರಿಯಿಂದ ಈ ತನಕ ೫೩.೯೭ ಇಂಚು
(ಮೊದಲ ಪುಟದಿಂದ) ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ೨೫.೪೮ ಇಂಚುಗಳಾಗಿತ್ತು.
ಮಡಿಕೇರಿ ತಾಲೂಕಿಗೆ ೮೭.೮೭ ಇಂಚು
ಮಡಿಕೇರಿ ತಾಲೂಕಿಗೆ ಈ ಬಾರಿ ಜನವರಿಯಿಂದ ಈ ತನಕ ೮೭.೮೭ ಇಂಚುಗಳಷ್ಟು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ೪೮.೦೬ ಇಂಚುಗಳಾಗಿದ್ದು, ಈ ಬಾರಿ ೩೯.೮೧ ಇಂಚು ಅಧಿಕ ಮಳೆ ದಾಖಲಾಗಿದೆ.
ವೀರಾಜಪೇಟೆ
ವೀರಾಜಪೇಟೆ ತಾಲೂಕಿಗೂ ಈ ಬಾರಿ ಅಧಿಕ ಮಳೆಯಾಗಿದೆ. ಜನವರಿ ಯಿಂದ ಈ ತನಕ ತಾಲೂಕಿನಲ್ಲಿ ಸರಾಸರಿ ೫೯.೮೧ ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ೧೯.೬೩ ಇಂಚುಗಳಾಗಿತ್ತು. ಈ ಬಾರಿ ೪೦ ಇಂಚು ಅಧಿಕ ಮಳೆಯಾಗಿದೆ.
ಪೊನ್ನಂಪೇಟೆ
ಪೊನ್ನAಪೇಟೆ ತಾಲೂಕಿನಲ್ಲಿ ಜನವರಿಯಿಂದ ಈ ತನಕ ೫೭.೪೮ ಇಂಚು ಮಳೆಯಾಗಿದೆ. ಕಳೆದ ಬಾರಿ ೧೮.೩೦ ಇಂಚು ಮಾತ್ರವಾಗಿತ್ತು. ಈ ಬಾರಿ ೩೯.೧೮ ಇಂಚು ಅಧಿಕ ಮಳೆ ಸುರಿದಿದೆ.
ಸೋಮವಾರಪೇಟೆ
ಸೋಮವಾರಪೇಟೆ ತಾಲೂಕಿಗೂ ಕಳೆದ ವರ್ಷಕ್ಕಿಂತ ಈ ಬಾರಿ ೩೬.೪೪ ಇಂಚು ಅಧಿಕ ಮಳೆಯಾಗಿದೆ. ಕಳೆದ ವರ್ಷ ೨೨.೭೫ ಇಂಚು ಮಳೆಯಾಗಿ ದ್ದರೆ, ಈ ಬಾರಿ ೫೯.೧೯ ಇಂಚು ಮಳೆಯಾಗಿದೆ.
ಕುಶಾಲನಗರ
ಕುಶಾಲನಗರ ತಾಲೂಕಿನಲ್ಲೂ ಕಳೆದ ವರ್ಷಕ್ಕಿಂತ ಈ ಬಾರಿ ೨೧.೧೭ ಇಂಚು ಮಳೆ ಅಧಿಕ ಬಿದ್ದಿದೆ. ಈ ಬಾರಿ ತಾಲೂಕಿಗೆ ಜನವರಿಯಿಂದ ಈ ತನಕ ೩೯.೮೪ ಇಂಚು ಹಾಗೂ ಕಳೆದ ವರ್ಷ ೧೮.೬೭ ಇಂಚು ಮಳೆಯಾಗಿತ್ತು.
ಭಾಗಮಂಡಲಕ್ಕೆ ೮.೮೮ ಇಂಚು
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾಗಮಂಡಲ ಹೋಬಳಿಗೆ ೮.೮೮ ಇಂಚುಗಳಷ್ಟು ಭಾರೀ ಮಳೆಯಾಗಿದೆ. ಶಾಂತಳ್ಳಿ ಹೋಬಳಿಯಲ್ಲಿ ೭.೩೨, ನಾಪೋಕ್ಲು ೬ ಇಂಚು, ವೀರಾಜಪೇಟೆ ೪.೫೨, ಮಡಿಕೇರಿ ಹೋಬಳಿಯಲ್ಲಿ ೫.೪೧ ಇಂಚು ಮಳೆ ದಾಖಲಾಗಿದೆ. ಉಳಿದಂತೆ ಸಂಪಾಜೆ ೪.೧೦, ಹುದಿಕೇರಿ ೩.೩೮, ಶ್ರೀಮಂಗಲ ೩.೪೦, ಪೊನ್ನಂಪೇಟೆ ೨.೯೬, ಬಾಳೆಲೆ ೧.೮೪ ಇಂಚು, ಸೋಮವಾರಪೇಟೆ ೪.೪೮, ಶನಿವಾರಸಂತೆ ೩.೬೦, ಕೊಡ್ಲಿಪೇಟೆ ೩, ಸುಂಟಿಕೊಪ್ಪ ೨.೮೪ ಹಾಗೂ ಕುಶಾಲನಗರ ಹೋಬಳಿಯಲ್ಲಿ ೧.೭೮ ಇಂಚು ಮಳೆಯಾಗಿದೆ.ಸಿದ್ದಾಪುರ : ಗಾಳಿ-ಮಳೆಗೆ ಸಿಲುಕಿ ಚೆನ್ನಯ್ಯನಕೋಟೆ ಗ್ರಾಮದ ಶೋಭಾ ಎಂಬವರ ಮನೆ ಭಾಗಶಃ ಹಾನಿಯಾಗಿರುತ್ತದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆ ಶೀಲಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಐಗೂರು: ಈಗಾಗಲೇ ಜಿಲ್ಲೆಯಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಕಿರಗಂದೂರು ಗ್ರಾ.ಪಂ. ವ್ಯಾಪ್ತಿಯ ದುರ್ಗಾ ನಗರದ ಚೋರನ ಹೊಳೆಯ ನದಿ ಪಾತ್ರದ ರಸ್ತೆ ಬದಿಯಲ್ಲಿ ಮನೆ ಕಟ್ಟಿಕೊಂಡು ಸುಮಾರು ಹತ್ತು ಮನೆಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಚೋರನ ಹೊಳೆಯು ತುಂಬಿ ಹರಿಯುತ್ತಿದ್ದು, ಮಳೆಯ ನೀರು ಈ ಭಾಗದ ಹೊಳೆಯ ಬದಿಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಓಮಣ್ಣ, ಗಣೇಶ್, ಗಾರೆ ಸುಂದರ, ರಾಜೇಂದ್ರ, ಸುಂದರ ರಾಜು, ಪಾಪಣ್ಣ ಮತ್ತು ಗಣೇಶ ಎಂಬವರ ಮನೆಗಳ ಕಟ್ಟಡಗಳ ಗೋಡೆಗಳಿಗೆ ಸವರಿಕೊಂಡು ಹರಿಯುತ್ತಿದ್ದು, ಮನೆಗಳು ಅಪಾಯದ ಅಂಚಿನಲ್ಲಿವೆ. ಈ ಭಾಗದ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗಣೇಶ್ ಹೇಳುವಂತೆ, ಹಲವು ವರ್ಷಗಳಿಂದ ಮಳೆಗಾಲದಲ್ಲಿ ಈ ರೀತಿಯ ತೊಂದರೆಗಳು ಈ ಭಾಗದಲ್ಲಿ ಸಂಭವಿಸುತ್ತಿದ್ದು, ಈ ಭಾಗದ ನಿವಾಸಿಗಳ ಮನೆಯ ರಕ್ಷಣೆಗೆ ತಡೆಗೋಡೆಯ ಅವಶ್ಯಕತೆ ಇದೆ. ಈ ಮೊದಲು ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ತಡೆಗೋಡೆಗಾಗಿ ಮನವಿ ಸಲ್ಲಿಸಿದ್ದರು. ಆದರೆ ಈ ಭಾಗದಲ್ಲಿ ತಡೆಗೋಡೆ ಕೆಲಸ ಆಗದ ಕಾರಣ ಈಗಿನ ಶಾಸಕ ಡಾ. ಮಂತರ್ ಗೌಡ ಅವರಿಗೆ ತಡೆಗೋಡೆಗಾಗಿ ಈ ಭಾಗದ ಜನರು ಮನವಿ ಸಲ್ಲಿಸಿದ್ದಾರೆ ಆದರೂ ತಡೆಗೋಡೆ ಕೆಲಸ ಆಗಿರುವುದಿಲ್ಲ. ಮಳೆಗಾಲದ ನಂತರ ಮುಂದಿನ ಬೇಸಿಗೆಯಲ್ಲಾದರೂ ತಡೆಗೋಡೆ ನಿರ್ಮಿಸಿ ಕೊಡುವರೆಂಬ ಆಶಾ ಭಾವನೆಯ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದೇವೆ ಎಂದು ಹೇಳಿದರು. ಮಡಿಕೇರಿ: ನಗರದ ಮೂರ್ನಾಡು ರಸ್ತೆಯಲ್ಲಿ ಬರೆ ಕುಸಿತಗೊಂಡಿದ್ದು, ಸ್ಥಳೀಯ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗಿದೆ.
ಅಲ್ಲಿನ ನಿವಾಸಿಯೊಬ್ಬರು ೨೦೧೯ರಲ್ಲಿ ರಸ್ತೆ ನಿರ್ಮಿಸುವ ಉದ್ದೇಶದಿಂದ ಬರೆ ಅಗೆದ ಹಿನ್ನೆಲೆ ಪ್ರತಿ ಮಳೆಗಾಲದಲ್ಲಿಯೂ ಮಣ್ಣು ಕುಸಿತಗೊಳ್ಳುತ್ತದೆ. ಈ ಬಾರಿಯ ಮಳೆಗಾಲದಲ್ಲಿಯೂ ಬರೆ ಜರೆದಿದ್ದು, ಅಕ್ಕಪಕ್ಕದ ಮನೆಗಳಿಗೆ ತೆರಳುವ ಸಂಪರ್ಕ ಕಡಿತಗೊಳ್ಳುವ ಭೀತಿ ಸೃಷ್ಟಿಯಾಗಿದೆ. ಈ ಬಗ್ಗೆ ಸೂಕ್ತ ಕ್ರಮವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಡಿಕೇರಿ: ಭಾರೀ ಗಾಳಿ ಮಳೆಗೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮರಗೋಡು ಗ್ರಾ.ಪಂ. ವ್ಯಾಪ್ತಿಯ ಜನತಾ ಕಾಲೋನಿ ನಿವಾಸಿ ಬಿ.ಬಿ. ಸುಜಾತ ಅವರ ಮನೆ ನೆಲಸಮವಾಗಿದೆ. ಮನೆಯ ಸಾಮಗ್ರಿಗಳೆಲ್ಲವೂ ಮನೆಯ ಅವಶೇಷಗಳಡಿ ನಾಶವಾಗಿದೆ. ಅನಾರೋಗ್ಯದಿಂದಿದ್ದ ಸುಜಾತ (೫೮) ತನ್ನ ಮಗಳ ಮನೆಯಲ್ಲಿದ್ದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಕಂದಾಯ ಹಾಗೂ ಗ್ರಾ.ಪಂ. ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು.ಸಿದ್ದಾಪುರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡAಗೇರಿ ಗ್ರಾಮದಲ್ಲಿ ಕಿರು ಸೇತುವೆ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಅಪಾಯದಲ್ಲಿರುವ ಈ ಕಿರು ಸೇತುವೆಯನ್ನು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕಿರು ಸೇತುವೆ ಮೇಲೆ ಸಾರ್ವಜನಿಕರು ಓಡಾಡದಂತೆ ಹಾಗೂ ವಾಹನಗಳು ಸಂಚರಿಸದAತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಮಳೆಯಿಂದಾಗಿ ಕೊಂಡAಗೇರಿ ಭಾಗದ ವಸತಿ ಪ್ರದೇಶದಲ್ಲಿ ಬರೆ ಕುಸಿದಿದ್ದು, ಯಾವುದೇ ಅನಾಹುತಗಳು ಸಂಭವಿಸಲಿಲ್ಲ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಹೋಮಪ್ಪ ಬಣಕರ್, ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾ.ಪಂ. ಸದಸ್ಯ ಅಂದಾಯಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸದಸ್ಯರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ನಾಲ್ಕೆöÊದು ದಿನಗಳಿಂದ ರಭಸದ ಗಾಳಿ ಸಹಿತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಚರಂಡಿಗಳು ತುಂಬಿ ಮುಖ್ಯ ರಸ್ತೆ ಮೇಲೆ ನೀರು ಹರಿಯುತ್ತಾ ಸಂಚಾರ ತ್ರಾಸದಾಯಕವಾಗಿ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಆಗಾಗ್ಗೆ ಕಣ್ಣಾಮುಚ್ಚಾಲೆಯಾಡುವ ವಿದ್ಯುತ್ ಸಮಸ್ಯೆಯೂ ಕಾಡುತ್ತಿದೆ. ಶಾಲಾ- ಕಾಲೇಜುಗಳಿಗೆ ರಜೆ ಇದ್ದು ವಿದ್ಯಾರ್ಥಿಗಳು ಮನೆಯಲ್ಲಿ ಉಳಿದಿದ್ದಾರೆ. ಕೃಷಿಕರು ಬಿಡುವು ನೀಡದ ಮಳೆಯ ಕಾರಣ ಕೃಷಿಯನ್ನು ಸ್ಥಗಿತಗೊಳಿಸಿದ್ದಾರೆ. ಪಟ್ಟಣದ ರಸ್ತೆಗಳು ಬಿಕೋ ಎನ್ನುತ್ತಿದ್ದು, ಅಂಗಡಿ ಮಳಿಗೆಗಳು ಗ್ರಾಹಕರಿಲ್ಲದೆ ಭಣಗುಡುತ್ತಿವೆ.
ಪುನರ್ವಸು ಮಳೆ ಜೊತೆಗೆ ಗಾಳಿಯ ಅರ್ಭಟದೊಂದಿಗೆ ಮಳೆಯಾಗುತ್ತಿದೆ. ಶುಕ್ರವಾರ ಮಧ್ಯಾಹ್ನದವರೆಗೆ ಮಳೆ ಜೋರಾಗಿ ಬಿಡುವು ನೀಡದೆ ಸುರಿಯಿತು. ಮಧ್ಯಾಹ್ನದ ನಂತರ ಮಳೆಯ ಪ್ರಮಾಣ ಕಡಿಮೆಯಾಗಿದೆ. ವರ್ಷ ಆರಂಭದಿAದ ಈವರೆಗೆ ಶನಿವಾರಸಂತೆ ಪಟ್ಟಣಕ್ಕೆ ೩೮ ಇಂಚು ಮಳೆಯಾಗಿದೆ. ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೫೦ ಇಂಚು ಮಳೆಯಾಗಿದೆ. ಅಲ್ಲಲ್ಲಿ ಬರೆ ಕುಸಿತದಿಂದ ಮರಗಳು ನೆಲಕಚ್ಚುತ್ತಿವೆ. ಮನೆಗಳು ಕುಸಿಯುತ್ತಿವೆ.
ಕಾಫಿ ತೋಟಗಳಲ್ಲಿ ಕೆಲಸವಿದ್ದರೂ ಮಳೆ-ಗಾಳಿಯ ಅಬ್ಬರಕ್ಕೆ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಲು ಅಂಜುವAತಾಗಿದೆ. ಒಂದೆಡೆ ಮಳೆಯ ಅಬ್ಬರವಾದರೇ ಮತ್ತೊಂದೆಡೆ ಕಾಡಾನೆಗಳ ದಾಂಧಲೆ. ಬೆಳೆ ಹಾನಿ ಕೃಷಿಕರನ್ನು ಕಂಗೆಡಿಸಿದೆ. ಕೆಲವು ಗದ್ದೆಗಳಲ್ಲಿ ಕೆಲ ರೈತರು ಮಾತ್ರ ಬದು ಕಡಿಯುವುದು. ಕೆಸರು ಹೊಡೆಯುವುದು, ಅಗೆ ಹಾಕುವುದು, ನಾಟಿ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಳೆಗಳು ತುಂಬಿ ಹರಿಯುತ್ತಿವೆ. ಕಾಜೂರು ಹೊಳೆ ಹಾಗೂ ಬಿಳಹ ಹೊಳೆ ಮೈದುಂಬಿ ಹರಿಯುತ್ತಿದ್ದು ಖುಷಿ ಎನಿಸುತ್ತದೆ ಎಂದು ಕೃಷಿ ವಿಜ್ಞಾನಿ ಅ.ಡಿ.ಮೋಹನ್ ಕುಮಾರ್ ಹಾಗೂ ಪ್ರಗತಿಪರ ರೈತ ಕಾಜೂರು ಚಂದ್ರಣ್ಣ ಹರ್ಷ ವ್ಯಕ್ತಪಡಿಸಿದರು.ಕುಶಾಲನಗರ: ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಕುಶಾಲನಗರ- ಮಡಿಕೇರಿ ರಸ್ತೆಯ ತಾವರೆಕೆರೆ ಮತ್ತು ಗಂಧದಕೋಟೆ ಬಳಿ ನದಿ ನೀರು ರಸ್ತೆ ಮೇಲೆ ಹರಿಯುವ ಸಾಧ್ಯತೆ ಅಧಿಕವಾಗಿದೆ.
ಈಗಾಗಲೇ ಹೆದ್ದಾರಿ ರಸ್ತೆಯ ಅಂಚಿನಲ್ಲಿ ನದಿ ಪ್ರವಾಹ ನೀರು ನಿಂತಿದ್ದು, ಕೆಲವೇ ಅಡಿಗಳಷ್ಟು ನೀರು ಏರಿಕೆಯಾದಲ್ಲಿ ಮಡಿಕೇರಿ- ಕುಶಾಲನಗರ- ಮೈಸೂರು ರಾಷ್ಟಿçÃಯ ಹೆದ್ದಾರಿ ರಸ್ತೆ ಸಂಚಾರ ಸಂಪೂರ್ಣ ವ್ಯತ್ಯಯ ಗೊಳ್ಳುವ ಸಾಧ್ಯತೆ ಕಂಡು ಬಂದಿದೆ. ರಸ್ತೆಯ ಅಂಚಿನಲ್ಲಿ ಇರುವ ಹೊಲ, ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆ ಬದಿಯಲ್ಲಿದ್ದ ನರ್ಸರಿ ಕೇಂದ್ರದ ಸಾವಿರಾರು ಸಂಖ್ಯೆಯ ಮೌಲ್ಯದ ಗಿಡಗಳನ್ನು ಸ್ಥಳದಿಂದ ತೆರವುಗೊಳಿಸುತ್ತಿದ್ದ ದೃಶ್ಯ ಕಂಡುಬAತು. ಸಿದ್ದಾಪುರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡAಗೇರಿ ಗ್ರಾಮದಲ್ಲಿ ಕಿರು ಸೇತುವೆ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಅಪಾಯದಲ್ಲಿರುವ ಈ ಕಿರು ಸೇತುವೆಯನ್ನು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕಿರು ಸೇತುವೆ ಮೇಲೆ ಸಾರ್ವಜನಿಕರು ಓಡಾಡದಂತೆ ಹಾಗೂ ವಾಹನಗಳು ಸಂಚರಿಸದAತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಮಳೆಯಿಂದಾಗಿ ಕೊಂಡAಗೇರಿ ಭಾಗದ ವಸತಿ ಪ್ರದೇಶದಲ್ಲಿ ಬರೆ ಕುಸಿದಿದ್ದು, ಯಾವುದೇ ಅನಾಹುತಗಳು ಸಂಭವಿಸಲಿಲ್ಲ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಹೋಮಪ್ಪ ಬಣಕರ್, ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾ.ಪಂ. ಸದಸ್ಯ ಅಂದಾಯಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸದಸ್ಯರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕರಿಕೆ : ಕೇರಳ ರಾಜ್ಯ ಸಂಪರ್ಕ ಕಲ್ಪಿಸುವ ಅಂತರ್ ರಾಜ್ಯ ಹೆದ್ದಾರಿ ಭಾಗಮಂಡಲ-ಕರಿಕೆ ರಸ್ತೆಯ ತಣ್ಣಿಮಾನಿ ಬಳಿ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿ ಹತ್ತಾರು ವಾಹನಗಳು ಮಳೆಯ ನಡುವೆ ರಸ್ತೆಯಲ್ಲಿ ಸಿಲುಕಿಕೊಂಡಿದ್ದವು. ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಯಿತು.ಸುಂಟಿಕೊಪ್ಪ: ಸುಂಟಿಕೊಪ್ಪ ಕಂದಾಯ ಕಛೇರಿ ಸಮೀಪದ ನಿವಾಸಿ ಡಿ.ಎಂ.ಮAಜುನಾಥ್ ಎಂಬವರ ಮನೆಯ ಮೇಲೆ ತಡೆಗೋಡೆ ಕುಸಿದುಬಿದ್ದ ಪರಿಣಾಮ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಮುಂಜಾನೆ ೩.೩೦ರ ಸಂದರ್ಭದಲ್ಲಿ ದಿ.ಎಚ್. ಗಂಗಾಧರ್ ಅವರ ಜಾಗದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆಯು ಡಿ.ಎಂ. ಮುಂಜುನಾಥ್ ಎಂಬವರ ಮನೆ ಮೇಲೆ ಕುಸಿದು ಬಿದ್ದಿದೆ. ಇದರಿಂದ ಮನೆಯ ಗೋಡೆ, ಗೃಹೋಪಯೋಗಿ ವಸ್ತುಗಳು ಹಾನಿಗೀಡಾಗಿದ್ದು, ನಷ್ಟವುಂಟಾಗಿದೆ ಎಂದು ಮಂಜುನಾಥ್ ಕಂದಾಯ ಇಲಾಖೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಕಂದಾಯ ಪರಿವೀಕ್ಷಕ ಪ್ರಶಾಂತ್, ಗ್ರಾವi ಆಡಳಿತಾಧಿಕಾರಿ ನಾಗೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್, ಸದಸ್ಯ ಬಿ.ಎಂ.ಸುರೇಶ್ ಭೇಟಿ ನೀಡಿ ಪರಿಶೀಲಿಸಿದರು.ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ನಾಲ್ಕೆöÊದು ದಿನಗಳಿಂದ ರಭಸದ ಗಾಳಿ ಸಹಿತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಚರಂಡಿಗಳು ತುಂಬಿ ಮುಖ್ಯ ರಸ್ತೆ ಮೇಲೆ ನೀರು ಹರಿಯುತ್ತಾ ಸಂಚಾರ ತ್ರಾಸದಾಯಕವಾಗಿ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಆಗಾಗ್ಗೆ ಕಣ್ಣಾಮುಚ್ಚಾಲೆಯಾಡುವ ವಿದ್ಯುತ್ ಸಮಸ್ಯೆಯೂ ಕಾಡುತ್ತಿದೆ. ಶಾಲಾ- ಕಾಲೇಜುಗಳಿಗೆ ರಜೆ ಇದ್ದು ವಿದ್ಯಾರ್ಥಿಗಳು ಮನೆಯಲ್ಲಿ ಉಳಿದಿದ್ದಾರೆ. ಕೃಷಿಕರು ಬಿಡುವು ನೀಡದ ಮಳೆಯ ಕಾರಣ ಕೃಷಿಯನ್ನು ಸ್ಥಗಿತಗೊಳಿಸಿದ್ದಾರೆ. ಪಟ್ಟಣದ ರಸ್ತೆಗಳು ಬಿಕೋ ಎನ್ನುತ್ತಿದ್ದು, ಅಂಗಡಿ ಮಳಿಗೆಗಳು ಗ್ರಾಹಕರಿಲ್ಲದೆ ಭಣಗುಡುತ್ತಿವೆ.
ಪುನರ್ವಸು ಮಳೆ ಜೊತೆಗೆ ಗಾಳಿಯ ಅರ್ಭಟದೊಂದಿಗೆ ಮಳೆಯಾಗುತ್ತಿದೆ. ಶುಕ್ರವಾರ ಮಧ್ಯಾಹ್ನದವರೆಗೆ ಮಳೆ ಜೋರಾಗಿ ಬಿಡುವು ನೀಡದೆ ಸುರಿಯಿತು. ಮಧ್ಯಾಹ್ನದ ನಂತರ ಮಳೆಯ ಪ್ರಮಾಣ ಕಡಿಮೆಯಾಗಿದೆ. ವರ್ಷ ಆರಂಭದಿAದ ಈವರೆಗೆ ಶನಿವಾರಸಂತೆ ಪಟ್ಟಣಕ್ಕೆ ೩೮ ಇಂಚು ಮಳೆಯಾಗಿದೆ. ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೫೦ ಇಂಚು ಮಳೆಯಾಗಿದೆ. ಅಲ್ಲಲ್ಲಿ ಬರೆ ಕುಸಿತದಿಂದ ಮರಗಳು ನೆಲಕಚ್ಚುತ್ತಿವೆ. ಮನೆಗಳು ಕುಸಿಯುತ್ತಿವೆ.
ಕಾಫಿ ತೋಟಗಳಲ್ಲಿ ಕೆಲಸವಿದ್ದರೂ ಮಳೆ-ಗಾಳಿಯ ಅಬ್ಬರಕ್ಕೆ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಲು ಅಂಜುವAತಾಗಿದೆ. ಒಂದೆಡೆ ಮಳೆಯ ಅಬ್ಬರವಾದರೇ ಮತ್ತೊಂದೆಡೆ ಕಾಡಾನೆಗಳ ದಾಂಧಲೆ. ಬೆಳೆ ಹಾನಿ ಕೃಷಿಕರನ್ನು ಕಂಗೆಡಿಸಿದೆ. ಕೆಲವು ಗದ್ದೆಗಳಲ್ಲಿ ಕೆಲ ರೈತರು ಮಾತ್ರ ಬದು ಕಡಿಯುವುದು. ಕೆಸರು ಹೊಡೆಯುವುದು, ಅಗೆ ಹಾಕುವುದು, ನಾಟಿ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಳೆಗಳು ತುಂಬಿ ಹರಿಯುತ್ತಿವೆ. ಕಾಜೂರು ಹೊಳೆ ಹಾಗೂ ಬಿಳಹ ಹೊಳೆ ಮೈದುಂಬಿ ಹರಿಯುತ್ತಿದ್ದು ಖುಷಿ ಎನಿಸುತ್ತದೆ ಎಂದು ಕೃಷಿ ವಿಜ್ಞಾನಿ ಅ.ಡಿ.ಮೋಹನ್ ಕುಮಾರ್ ಹಾಗೂ ಪ್ರಗತಿಪರ ರೈತ ಕಾಜೂರು ಚಂದ್ರಣ್ಣ ಹರ್ಷ ವ್ಯಕ್ತಪಡಿಸಿದರು.ಪೊನ್ನಂಪೇಟೆ : ದಕ್ಷಿಣ ಕೊಡಗಿನಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಪೊನ್ನಂಪೇಟೆ ತಾಲೂಕು ಹಾತೂರು ಗ್ರಾ.ಪಂ. ವ್ಯಾಪ್ತಿಯ ಕುಂದ ಗ್ರಾಮದ ಬಸವೇಶ್ವರ ಬಡಾವಣೆಗೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿನಿಂದ ಮುಳುಗಡೆಗೊಂಡು ಸಂಪರ್ಕ ಕಡಿತಗೊಂಡಿದೆ.
ಬಡಾವಣೆಯಲ್ಲಿ ಸುಮಾರು ೬೦ ಕುಟುಂಬಗಳು ಇದ್ದು, ಕಳೆದ ಒಂದು ವಾರದಿಂದ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೆಲಮಟ್ಟದಲ್ಲೇ ಅವೈಜ್ಞಾನಿಕವಾಗಿ ಸೇತುವೆಯನ್ನು ನಿರ್ಮಿಸಿರುವುದರಿಂದಾಗಿ, ಪ್ರತಿ ವರ್ಷ ಮಳೆಗಾಲಕ್ಕೆ ಸೇತುವೆ ಮುಳುಗಡೆಯಾಗುತ್ತದೆ. ಇದರಿಂದಾಗಿ ಸೇತುವೆ ಇದ್ದರೂ, ಬಸವೇಶ್ವರ ಬಡಾವಣೆಯ ಜನರಿಗೆ ಮಳೆಗಾಲದಲ್ಲಿ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ೨೦೧೮ ರಲ್ಲಿ ಈ ಮುಳುಗು ಸೇತುವೆಯನ್ನು ಕಟ್ಟಲಾಗಿದ್ದರೂ, ಒಂದೆರಡು ದಿನದ ಮಳೆಗೆ ಸೇತುವೆ ಮೇಲೆ ನೀರು ತುಂಬಿ ಹರಿಯುವುದರಿಂದ ಸೇತುವೆ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ಉಪಯೋಗವಾಗುತ್ತಿಲ್ಲ. ಜಿಲ್ಲಾಡಳಿತ ಮುಂದಿನ ವರ್ಷದ ಮಳೆಗಾಲದ ಒಳಗೆ ಸೇತುವೆಯನ್ನು ಮೇಲ್ಮಟ್ಟಕ್ಕೆ ನಿರ್ಮಿಸಿಕೊಡುವಂತೆ ಅಲ್ಲಿನ ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. (೪ನೇ ಪುಟಕ್ಕೆ)