ಮಡಿಕೇರಿ, ಜು. ೧೯: ಕಳೆದ ಕೆಲ ದಿನಗಳಿಂದ ಕೊಡಗು ಜಿಲ್ಲೆ ಯಾದ್ಯಂತ ಸುರಿಯು ತ್ತಿರುವ ಭಾರೀ ಮಳೆ ಪರಿಣಾಮ ಜಿಲ್ಲೆಯ ವಿವಿಧೆಡೆ ಸೇರಿದಂತೆ ಭಾಗಮಂಡಲ ಭಗಂಡೇಶ್ವರ ಸನ್ನಿಧಿಯೂ ಕೂಡ ಬಹುತೇಕ ನೀರಿನಿಂದ ಆವೃತವಾಗಿದೆ. ದೇವಾಲಯದ ೪ನೆ ಮೆಟ್ಟಿಲಿನವರೆಗೂ ನದಿ ನೀರು ಏರಿಕೆಯಾಗಿದ್ದು, ಭಕ್ತಾದಿಗಳು ದೇವರ ದರ್ಶನ ಪಡೆಯುವುದು ಅಸಾಧ್ಯವೆಂಬAತಾಗಿದೆ. ಈ ನಡುವೆ ವಿಶೇಷ ಭಕ್ತಾದಿಯೊಂದು ದೂರದ ಕೇರಳದಿಂದ ಆಗಮಿಸಿ ಸುಮಾರು ೧೦ ದಿನಗಳಿಂದ ಇಲ್ಲೆ ಆಶ್ರಯ ಪಡೆದಿದ್ದು, ಇದೀಗ ಅದರ ಮಾಲೀಕನೊಂದಿಗೆ ಒಂದಾಗಿದೆ.

ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ್ ಎಂಬಲ್ಲಿನಿAದ ಹಾರುತ್ತಾ ಸಾಗಿದ ಪಾರಿಜಾತ ಹೆಸರಿನ ಈ ಪಾರಿವಾಳವು ಮೋಡ ಕವಿದ ವಾತಾವರಣದಲ್ಲಿ ದಾರಿ ತಪ್ಪಿದೆ. ಸ್ವಾತಂತ್ರö್ಯ ದಿನ ಸೇರಿದಂತೆ ಇತರ ದಿನಗಳ ಸಂದರ್ಭ ನಡೆಯುವ ಕ್ರೀಡೆಗಳ ಸಂದರ್ಭಗಳಲ್ಲಿ ಭಾಗವಹಿಸುವ ತರಬೇತಿ ಪಡೆದಿರುವ ಈ ಪಾರಿವಾಳವು ದಿಕ್ಕು ತಪ್ಪಿ ಮಾಲೀಕನತ್ತ ಹಿಂತಿರುಗುವಲ್ಲಿ ವಿಫಲವಾಗಿದೆ. ಈ ಸಂದರ್ಭ ಇದಕ್ಕೆ ಆಶ್ರಯವಾಗಿದ್ದು ಭಗಂಡೇಶ್ವರ ಸನ್ನಿಧಿ. ಸನ್ನಿಧಿಯಲ್ಲಿ ಕಳೆದ ೧೦ ದಿನಗಳ ಹಿಂದೆ ಸೇರಿಕೊಂಡು ಗೋಪುರ, ಸತ್ಯನಾರಾಯಣ ಪೂಜೆ ನಡೆಯುವ ಸ್ಥಳದ ಸುತ್ತವೇ ಹಾರಾಡುತ್ತಿತ್ತು. ಇದಕ್ಕೆ ಅಲ್ಲಿನ ಅರ್ಚಕರಾದ ಹರೀಶ್ ಭಟ್ ಅವರು ಗೋಧಿ, ಇತರ ಧಾನ್ಯಗಳನ್ನು ನೀಡಿ ಉಪಚಾರ ಮಾಡುತ್ತಿದ್ದರು. ಇದನ್ನು ಹೊರಗೆ ಬಿಟ್ಟರೂ ಇತರ ಪಾರಿವಾಳಗಳೊಂದಿಗೆ ಸೇರಿಕೊಳ್ಳದೆ ವಾಪಸ್ಸು ದೇವಾಲಯದಲ್ಲಿಯೇ ಸೇರಿಕೊಳ್ಳುತ್ತಿತ್ತು. ರಾತ್ರಿ ವೇಳೆ ಬೆಕ್ಕು ಇದನ್ನು ಭೇಟೆಯಾಡದಂತೆ ಕೋಣೆಯೊಂದರಲ್ಲಿ ಅರ್ಚಕರಾದ ಹರೀಶ್ ಭಟ್ ಅವರು ಸುರಕ್ಷಿತವಾಗಿ ಇರಿಸುತ್ತಿದ್ದರು.

ಇದರ ಕಾಲಿನಲ್ಲಿ ಉಂಗುರ ಇದ್ದದನ್ನು ಗಮನಿಸಿದ ಅರ್ಚಕರಾದ ಹರೀಶ್ ಭಟ್ ಅವರು, ಆ ಉಂಗುರದಲ್ಲಿ ಮುದ್ರಿತವಾಗಿದ್ದ ಫೋನ್ ಸಂಖ್ಯೆಯನ್ನು ಗಮನಿಸಿ ಇದಕ್ಕೆ ಕರೆ ಮಾಡಿದ್ದಾರೆ. ಫೋನ್ ಸ್ವೀಕರಿಸಿದ ಕೇರಳದ ತಳಿಪರಂಬ್‌ನ ಶ್ರೀಜಿತ್ ಎಂಬ ವ್ಯಕ್ತಿ ತಾನು ಆ ಪಾರಿವಾಳದ ಮಾಲೀಕನಾಗಿದ್ದು, ಪಾರಿವಾಳವನ್ನು ಸುರಕ್ಷಿತವಾಗಿರಿಸುವಂತೆ ಇರಿಸಲು ಅರ್ಚಕರಲ್ಲಿ ಕೋರಿದ್ದು, ಇಂದು ಕೇರಳದಿಂದ ಕಾರಿನಲ್ಲಿ ಭಾಗಮಂಡಲಕ್ಕೆ ಆಗಮಿಸಿ ಪಾರಿವಾಳವನ್ನು ಕರೆದೊಯ್ದಿದ್ದಾರೆ.

``೧೦ ದಿನಗಳ ಹಿಂದೆ ಪಾರಿವಾಳ ದೇವಾಲಯ ಆವರಣ ಸೇರಿಕೊಂಡಿದ್ದು, ಅದಕ್ಕೆ ಆಹಾರ ನೀಡಿ ಪೋಷಿಸಿದೆ. ಇದನ್ನು ಹೊರಗೆ ಬಿಟ್ಟರೂ ಸ್ವಲ್ಪ ಹೊತ್ತು ಕಳೆದ ನಂತರ ವಾಪಸ್ಸು ದೇವಾಲಯ ಆವರಣಕ್ಕೆ ಬರುತ್ತಿತ್ತು. ಅದರ ಕಾಲಿನಲ್ಲಿನ ಉಂಗುರದಲ್ಲಿದ್ದ ಮೊಬೈಲ್ ಸಂಖ್ಯೆ ತಡವಾಗಿ ಬೆಳಕಿಗೆ ಬಂದಿದ್ದು, ಕರೆ ಮಾಡಿದಾಗ ಪಾರಿವಾಳದ ಮಾಲೀಕ ಸ್ವೀಕರಿಸಿದ್ದಾರೆ. ಅವರಿಗೆ ವಿಷಯ ತಿಳಿಸಿದ ಮೇರೆಗೆ ಭಾಗಮಂಡಲಕ್ಕೆ ಬಂದು ಅದನ್ನು ಹಿಂಪಡೆದಿದ್ದಾರೆ. ಮಾಲೀಕ ತಳಿಪರಂಬ್‌ನ ಶ್ರೀಜಿತ್ ಅವರು ಇದುವರೆಗೆ ಭಾಗಮಂಡಲಕ್ಕೆ ಬಂದಿರಲಿಲ್ಲ. ಇದೀಗ ಪಾರಿವಾಳದಿಂದಾಗಿ ದೇವರ ದರ್ಶನ ಪಡೆಯುವಂತಾಗಿದೆ. ಮುಂದಿನ ದಿನಗಳಲ್ಲಿ ಕುಟುಂಬ ಸಮೇತವಾಗಿ ದೇವಾಲಯಕ್ಕೆ ಆಗಮಿಸುವುದಾಗಿ ಅವರು ಹೇಳಿದ್ದಾರೆ’’ ಎಂಬುದಾಗಿ ಅರ್ಚಕ ಹರೀಶ್ ಭಟ್ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.