ನಾಪೋಕ್ಲು, ಜು. ೧೨: ನಾಪೋಕ್ಲಿ ನಲ್ಲಿ ಸದಾ ಕಾಲ ನಡೆಯುತ್ತಲೇ ಇರುವ ಒತ್ತುವರಿ ಭರಾಟೆಯನ್ನು ತಡೆಯಲಾಗದೇ ಒತ್ತುವರಿ ದಾರರ ಪ್ರಶ್ನೆಗಳಿಗೆ ಉತ್ತರಿಸ ಲಾಗದೆ ಗ್ರಾಮ ಪಂಚಾಯಿತಿ ಅಡಕತ್ತರಿಯಲ್ಲಿ ಸಿಲುಕಿದೆ. ವ್ಯಕ್ತಿಯೊಬ್ಬರು ಸಾರ್ವಜನಿಕ ರಸ್ತೆ ಬದಿಯಲ್ಲಿ ಅಕ್ರಮ ಬೇಲಿ ಅಳವಡಿಸಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ನಾಗರಿಕರು ದೂರಿಕೊಂಡಿದ್ದು, ಪಂಚಾಯಿತಿ ಪ್ರತಿನಿಧಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಜನರ ಮುಂದೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಕಕ್ಕಬ್ಬೆ-ನಾಪೋಕ್ಲು ಸಂಪರ್ಕ ರಸ್ತೆಯಿಂದ ಕವಲೊಡೆಯುವ ಹಳೆ ತಾಲೂಕಿನಲ್ಲಿ ಬೊಮ್ಮಂಜಿಕೆರಿ, ಕೋಟೇರಿ ರಸ್ತೆಯ ಬದಿ ಕೆ.ಆರ್. ಮಣಿ ಎಂಬವರು ಮಂಗಳವಾರ ಜಾಗ ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ವಾಹನ ಸಂಚಾರ, ಪಾದಚಾರಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ನಾಗರಿಕರು ಪಂಚಾಯಿತಿಗೆ ಲಿಖಿತ ದೂರು ಸಲ್ಲಿಸಿದ್ದರು. ಬುಧವಾರ ಸ್ಥಳಕ್ಕೆ ಬಂದ ಪಂಚಾಯಿತಿ ಪ್ರತಿನಿಧಿಗಳು, ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆದರೆ, ಪಂಚಾಯಿತಿ ಪ್ರತಿನಿಧಿಗಳು ಮತ್ತು ಸ್ಥಳೀಯರ ಮಧ್ಯೆ ಮಾತಿನ ಚಕಮಕಿಯೇ ನಡೆಯಿತು.
ಕಾಫಿ ಬೆಳೆಗಾರ ಬಿದ್ದಾಟಂಡ ದಿನೇಶ್ ಮಾತನಾಡಿ, ಸಾಮಾಜಿಕ ಸುವ್ಯವಸ್ಥೆಗಾಗಿ ಕಾನೂನು ಇದೆ.ಅದನ್ನು ಎಲ್ಲರೂ ಪಾಲನೆ ಮಾಡಬೇಕು. ಇಲ್ಲಿ ಕಾನೂನನ್ನು ಉಲ್ಲಂಘಿಸಿ ರಸ್ತೆ ಅತಿಕ್ರ ಮಣ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರ ಚಲಾಯಿಸಿ ಒತ್ತುವರಿ ತೆರವುಗೊಳಿಸಬೇಕು ಎಂದರು. ಒತ್ತುವರಿದಾರರು ನ್ಯಾಯಾ ಲಯದ ಮೆಟ್ಟಿಲೇರಿದರೆ ಪ್ರಕರಣ ಇತ್ಯರ್ಥವಾಗಲು ಸುದೀರ್ಘ ಸಮಯ ಹಿಡಿಯು ತ್ತದೆ. ಅಲ್ಲದೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೂ ಒತ್ತುವರಿ ತಡೆಯಲು ಜವಾಬ್ದಾರಿಯಿದೆ ಎಂದು ಅವರು ವಾದಿಸಿದರು.
ಮತ್ತೋರ್ವ ಬೆಳೆಗಾರ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಗ್ರಾಮ ಪಂಚಾಯಿತಿಯವರು ಕಾನೂನು ಮಿತಿಯಲ್ಲಿ ಕಾರ್ಯನಿರ್ವಹಿಸಬೇಕು. ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ, ರಸ್ತೆ ಮಾರ್ಜಿನ್ ಗುರುತು ಮಾಡಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲಿ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಬೇಬ ಪ್ರತಿಕ್ರಿಯಿಸಿ ತೋಟದ ಮಾಲೀಕರ ಸಹಕಾರಬೇಕು. ರಸ್ತೆಗೆ ಸಂಬAಧಿಸಿದ ಕಾನೂನು ತೊಡಕು ನಿವಾರಣೆಗೆ ಸಾರ್ವಜನಿಕರು ಸಹಕರಿಸ ಬೇಕು. ಸಾರ್ವಜನಿಕರ, ತೋಟದ ಮಾಲೀಕರ ಸಹಕಾರವಿದ್ದರೆ ಗ್ರಾಮ ಪಂಚಾಯಿತಿ, ಪೊಲೀಸ್ ಹಾಗೂ ಕಂದಾಯ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಮಾತನಾಡಿ, ಈ ರಸ್ತೆಯನ್ನು ಸುಮಾರು ಜನ ಅತಿಕ್ರಮಣ ಮಾಡಿಕೊಂಡಿದ್ದು, ಪಂಚಾಯಿತಿನಿAದ ಎಲ್ಲರಿಗೂ ನೋಟಿಸ್ ನೀಡಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು. ಒತ್ತುವರಿಯಾಗಿರುವ ಎಲ್ಲ ಜಾಗಗಳನ್ನು ತೆರವುಗೊಳಿಸಿದರೆ, ತಾವೂ ತೆರವುಗೊಳಿಸಲು ಸಿದ್ಧ ಎಂದು ಮಣಿ ಮತ್ತಿತರರು ಹೇಳಿದರು. ಸಾರ್ವಜನಿಕರ ಸಹಕಾರವಿಲ್ಲದೆ ಒತ್ತುವರಿ ತೆರವು ಸಾಧ್ಯವಿಲ್ಲ. ಜನರು, ಪೊಲೀಸರು ಮತ್ತು ಪಂಚಾಯಿತಿಯ ಸಹಯೋಗದಲ್ಲಿ ಮಾತ್ರ ತೆರವು ಸಾಧ್ಯ ಎಂದು ಪಂಚಾಯಿತಿ ಪ್ರತಿನಿಧಿಗಳು ಹೇಳಿದರೆ, ಗ್ರಾಮ ಪಂಚಾಯಿತಿ ತನಗಿರುವ ಅಧಿಕಾರವನ್ನು ಚಲಾಯಿಸಬೇಕೆಂದು ಸಾರ್ವಜನಿಕರು ವಾದಿಸಿದರು.
ಬೇತು, ಕೊಳಕೇರಿವರೆಗೂ ಒತ್ತುವರಿಯಾಗಿದ್ದು ಅಂಥವರಿಗೆ ಅರಿವು ಮೂಡಿಸಿ ತೆರವುಗೊಳಿಸಿ ಎಂದು ನಾಗರಿಕರು ಒತ್ತಾಯಿಸಿ ಜಿಲ್ಲೆಯಾದ್ಯಂತ ರಸ್ತೆ ಒತ್ತುವರಿಯನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಬೇಕೆಂದು ಜನರು ಆಗ್ರಹಿಸಿದರು. ಕೆಲವು ರಸ್ತೆಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಒತ್ತುವರಿ ಬಗ್ಗೆ ಆಯಾ ಇಲಾಖೆಯೇ ಗಮನ ಹರಿಸಬೇಕು. ಕಟ್ಟಡ ನಿರ್ಮಾಣ ಮಾಡುವಾಗ ರಸ್ತೆ ಪರಿದಿಯನ್ನು ಕಾನೂನು ಬದ್ಧವಾಗಿ ಬಿಡಬೇಕು ಎಂದು ಪಂಚಾಯಿತಿ ಸದಸ್ಯರು ಹೇಳಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಕುರೈಸಿ, ಮಹಮ್ಮದ್, ಗ್ರಾಮಸ್ಥರಾದ ಬಿದ್ದಾಟಂಡ ಜೀವನ್ ಕಾರ್ಯಪ್ಪ, ನೀಡುಮಂಡ ಕೃತಿ, ಅಪ್ಪಚ್ಚರ ರಮ್ಮಿ ನಾಣಯ್ಯ, ಅಪ್ಪಾರಂಡ ಸುಭಾಷ್ ತಿಮ್ಮಯ್ಯ, ಬೋಟ್ಟೋಳಂಡ ಕುಮಾರ್, ಪುಳ್ಳೆರ ದಾದಾ, ಪುಳ್ಳೆರ ಅರುಣ, ಪಟ್ರಪಂಡ ಶರೀನ್, ನೀರನ್. ಅಚ್ಚಂಡ್ರ ಅಪ್ಪಚ್ಚ, ಕೋಟೆ ಮನು, ರಾಜಪ್ಪ ದಿನೇಶ್ ಇನ್ನಿತರ ಗ್ರಾಮಸ್ಥರು ಇದ್ದರು. ಗಸ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಗಲಾಟೆ ಆಗದಂತೆ ಸೂಕ್ತ ಕ್ರಮ ಕೈಗೊಂಡರು.