ಐಗೂರು, ಜು. ೧೨: ಬೇಸಿಗೆಯಲ್ಲಿ ಸಂಪೂರ್ಣವಾಗಿ ಮಾದಾಪುರ ಮತ್ತು ಸುಂಟಿಕೊಪ್ಪ ಊರಿನ ಮಧ್ಯಭಾಗದಲ್ಲಿ ಸಿಗುವ ಗರಗಂದೂರು ವ್ಯಾಪ್ತಿಯ ಹರದೂರು ಹೊಳೆಯು ಬತ್ತಿ ಹೋಗಿದ್ದು, ಜೂನ್, ಜುಲೈ ತಿಂಗಳಿನಲ್ಲಿ ಸುರಿದ ಮಳೆಯಿಂದ ಈಗ ಹರದೂರು ಹೊಳೆಯು ಕಿರು ಸಮುದ್ರದಂತೆ ವಿಸ್ತಾರವಾಗಿ ನೋಡುಗರ ಕಣ್ಮನ ಸೆಳೆಯುತ್ತಿದೆ.
ಒಂದು ಕಡೆಯಿಂದ ಮಾದಾಪುರ ಹೊಳೆಯ ನೀರು, ಇನ್ನೊಂದು ಕಡೆಯಿಂದ ಹಟ್ಟಿಹೊಳೆಯ ನೀರು, ಇವೆರಡೂ ಹೊಳೆಗಳು ಒಟ್ಟು ಸೇರಿ ಗರಗಂದೂರಿನ ಮಲ್ಲಿಕಾರ್ಜುನ ಕಾಲೋನಿಯ ಬಳಿ ಸಂಗಮವಾಗಿ ಹರಿದು ಹರದೂರು ಹೊಳೆಯನ್ನು ಸೇರುತ್ತದೆ. ಅಲ್ಲಿಂದ ಮುಂದಕ್ಕೆ ಹರಿದ ಹೊಳೆ ಹಾರಂಗಿ ಅಣೆಕಟ್ಟೆಯ ನದಿಗೆ ಸೇರುತ್ತದೆ.
- ಸುಕುಮಾರ