ವೇತನಕ್ಕೆ ಆಗ್ರಹ

ಮಡಿಕೇರಿ, ಜು. ೧೦: ಮಡಿಕೇರಿ ತಾಲೂಕು ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸರಕಾರಿ ವೈದ್ಯಕೀಯ ಸಿಬ್ಬಂದಿ ಹಾಗೂ ಡಿ. ದರ್ಜೆ ನೌಕರರು ಸೇರಿದಂತೆ ಎಲ್ಲಾ ಸಿಬ್ಬಂದಿಯವರಿಗೆ ಕಳೆದ ೪ ತಿಂಗಳುಗಳಿAದ ವೇತನ ಪಾವತಿ ಆಗಿರುವುದಿಲ್ಲ ಎಂದು ಅಳಲು ತೋಡಿಕೊಂಡಿರುತ್ತಾರೆ. ಕೆಲವು ಸಿಬ್ಬಂದಿ ವರ್ಗದವರಿಗೆ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಪ್ರತೀ ತಿಂಗಳ ವೇತನದಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸ ವೆಚ್ಚ ಮತ್ತು ಜೀವನ ನಿರ್ವಹಣೆ ವೆಚ್ಚಕ್ಕೆ ಹಣವಿಲ್ಲದೆ ಪರದಾಡುವಂತಾಗಿದೆ.

ಸAಬAಧಪಟ್ಟ ಇಲಾಖೆಯವರು ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕಾಗಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ ಮನವಿ ಮಾಡಿಕೊಂಡಿದ್ದಾರೆ.