ಮಡಿಕೇರಿ, ಜು. ೧೦: ಅಪ್ರಾಪ್ತೆ ಬಾಲಕಿಯರನ್ನು ಪುಸಲಾಯಿಸಿ ಕಾರಿನಲ್ಲಿ ಕರೆದೊಯ್ದು ಯುವಕರಿಬ್ಬರು ಅತ್ಯಾಚಾರ ನಡೆಸಿದ ಘಟನೆ ದಕ್ಷಿಣ ಕೊಡಗಿನ ನಾತಂಗಾಲದ ತೋಟವೊಂದರಲ್ಲಿ ನಡೆದಿದೆ. ಈ ಸಂಬAಧ ಐವರನ್ನು ಪೊಲೀಸರು ಬಂದಿಸಿದ್ದಾರೆ.

ದಕ್ಷಿಣ ಕೊಡಗಿನ ಗ್ರಾಮವೊಂದರಲ್ಲಿ ನೆಲೆಸಿರುವ ಬಾಲಕಿಯ ಮೇಲೆ ಅತ್ಯಾಚಾರವಾಗಿದ್ದು, ಮತ್ತೋರ್ವ ಅಪ್ರಾಪ್ತೆಯ ಮೇಲೆಯೂ ಅತ್ಯಾಚಾರ ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ನಾತಂಗಾಲದ ಅಕ್ಷಯ್ ಕುಟ್ಟನ್ (೨೭), ನವೀಂದ್ರ (೨೪), ಕೇರಳದ ತೋಲ್ಪಟ್ಟಿ ನಿವಾಸಿಗಳಾದ ರಾಹುಲ್ (೨೧), ಮನು (೨೫), ಸಂದೀಪ್ (೨೭) ಬಂಧಿತ ಆರೋಪಿಗಳು.

ನಿನ್ನೆ ದಿನ ಬಾಲಕಿಯರಿಬ್ಬರು ಅಗತ್ಯ ವಸ್ತು ಖರೀದಿಸಲೆಂದು ಗೋಣಿಕೊಪ್ಪ ಸಂತೆಗೆ ಬಂದ ಸಂದರ್ಭ ಆರೋಪಿಗಳ ಪೈಕಿ ತಿಳಿದಿರುವ ಮೂವರು ಸಿಕ್ಕಿದ್ದಾರೆ. ಇವರೊಂದಿಗೆ ಕುಟ್ಟದಿಂದ ನಾಗರಹೊಳೆ ಕಡೆಗೆ ತೆರಳುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಮಾರುತಿ ಕಾರಿನಲ್ಲಿ ಇಬ್ಬರು ಯುವಕರು ಬಂದಿದ್ದಾರೆ. ಕಾರನ್ನು ತಡೆದು ನಾಗರಹೊಳೆ ಕಡೆಗೆ ಬಿಡುವಂತೆ ಕೇಳಿಕೊಂಡು ಬಾಲಕಿಯರು ಸೇರಿ ಐವರು ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಕಾರಿನಲ್ಲಿ ಬಾಲಕಿಯರನ್ನು ಪುಸಲಾಯಿಸಿ ನಾತಂಗಾಲ ಬಳಿಯ ತೋಟವೊಂದಕ್ಕೆ ಕರೆದೊಯ್ದಿದ್ದಾರೆ. ಆರೋಪಿಗಳ ಪೈಕಿ ಇಬ್ಬರು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಉಳಿದ ಮೂವರು ಯುವಕರು ಜೊತೆಗಿದ್ದ ಮತ್ತೋರ್ವ ಬಾಲಕಿಯ ಮೇಲೂ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾರೆ.

(ಮೊದಲ ಪುಟದಿಂದ) ಈ ಸಂಬAಧ ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಭೇಟಿ ನೀಡಿ ಆರೋಪಿಗಳನ್ನು ಪತ್ತೆ ಹಚ್ಚಲು ತನಿಖಾ ತಂಡವನ್ನು ರಚಿಸಿದ್ದರು. ಕಾರ್ಯಾಚರಣೆ ಕೈಗೊಂಡಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ವೀರಾಜಪೇಟೆ ಡಿವೈಎಸ್‌ಪಿ ಆರ್. ಮೋಹನ್ ಕುಮಾರ್, ಕುಟ್ಟ ವೃತ್ತ ನಿರೀಕ್ಷಕ ಸಿ.ಎ.ಮಂಜಪ್ಪ, ಠಾಣಾಧಿಕಾರಿ ಮಹದೇವ, ಸಿಬ್ಬಂದಿಗಳು ಮಾಹಿತಿ ಕಲೆಹಾಕಿ ಪ್ರಕರಣ ದಾಖಲಾದ ೧೨ ಗಂಟೆ ಒಳಗಾಗಿ ಆರೊಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಐವರು ಆರೊಪಿಗಳ ಮೇಲೆ ೧೩೭(೨),೧೪೦(೪), ೭೦(೨), ೭೬ ಬಿಎನ್‌ಎಸ್ ಮತ್ತು ೪,೬, ಪೋಕ್ಸೋ ಕಾಯ್ದೆ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆಯರಿಗೆ ಸಖಿ ಕೇಂದ್ರದಲ್ಲಿ ಆರೈಕೆ ನೀಡಲಾಗುತ್ತಿದೆ.