ಮಡಿಕೇರಿ, ಜು. ೧೦: ಅಂಡರ್-೧೯ ಪುರುಷರ ಮಂಗಳೂರು ವಲಯ ತಂಡಕ್ಕೆ ಕೆ.ಎಸ್.ಸಿ.ಎ ಮಂಗಳೂರು ವಲಯದಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕೊಡಗಿನ ಕ್ರೀಡಾಪಟುಗಳಿಗೆ ತಾ.೧೪ ರಂದು ಮಂಗಳೂರು ಲಾಲ್ ಬಾಗ್‌ನಲ್ಲಿರುವ ಸಾಯ್ಬೀನ್ ಕಾಂಪ್ಲೆಕ್ಸ್ ನಲ್ಲಿರುವ '೨೨ ಯಾರ್ಡ್ಸ್ ಇಂಡೋರ್ ಕ್ರಿಕೆಟ್ ಫೆಸಿಲಿಟಿಯಲ್ಲಿ' ಆಯ್ಕೆ ಪ್ರಕ್ರಿಯೆ ನಡೆಯಲಿದೆ.

೨೦೦೫ ರ ಸೆಪ್ಟೆಂಬರ್ ೧ ರ ನಂತರ ಜನಿಸಿದವರು ಹಾಗೂ ೧೬ ವರ್ಷ ಮೇಲ್ಪಟ್ಟವರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಆಸಕ್ತರು ಕ್ರಿಕೆಟ್ ವೈಟ್ಸ್ ಹಾಗೂ ಶೂಸ್ ಹಾಗೂ ಜನನ ಪ್ರಮಾಣ ಪತ್ರದೊಂದಿಗೆ ಅಂದು ಬೆಳಿಗ್ಗೆ ೮ ಗಂಟೆಗೆ ಕಡ್ಡಾಯವಾಗಿ ಹಾಜರಿರುವಂತೆ ಕೆ.ಎಸ್.ಸಿ.ಎ ಮಂಗಳೂರು ವಲಯದ ಸಂಚಾಲಕ ರತನ್ ಕುಮಾರ್ ಮಾಹಿತಿ ನೀಡಿದ್ದಾರೆ.