ಸೋಮವಾರಪೇಟೆ, ಜು. ೯: ಮಳೆ, ಗಾಳಿಗೆ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು, ೨೧ ಕಂಬಗಳು ನೆಲಕ್ಕುರುಳಿದ ಪರಿಣಾಮ ಕಳೆದ ೪ ದಿನಗಳಿಂದ ಕಿರಗಂದೂರು ಗ್ರಾಮ ಕತ್ತಲಲ್ಲಿದೆ. ಕಿರಗಂದೂರು ಗ್ರಾಮಕ್ಕೆ ವಿದ್ಯುತ್ ಸಂಪರ್ಕಿಸುವ ಪ್ರಮುಖ ಮಾರ್ಗದ ಮೇಲೆ ಅಲ್ಲಲ್ಲಿ ಮರಗಳು ಬಿದ್ದ ಪರಿಣಾಮ ೨೧ ಕಂಬಗಳು ಧರಾಶಾಹಿಯಾಗಿವೆ. ೧೧ ಕೆ.ವಿ. ವಿದ್ಯುತ್ ಮಾರ್ಗ ಅಳವಡಿಸುವ ಸಂದರ್ಭ ಸಮರ್ಪಕವಾಗಿ ಜಂಗಲ್ ಕಟ್ಟಿಂಗ್ ಮಾಡದೇ ಇರುವುದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೀಗ ವಿದ್ಯುತ್ ಇಲಾಖಾ ಸಿಬ್ಬಂದಿಗಳೊAದಿಗೆ ಗ್ರಾಮಸ್ಥರು ಸೇರಿಕೊಂಡು ಶ್ರಮದಾನದ ಮೂಲಕ ದುರಸ್ತಿ ಕಾರ್ಯ ನಡೆಸುತ್ತಿದ್ದು, ತುಂಡಾಗಿರುವ ಕಂಬಗಳ ಬದಲಿಗೆ ನೂತನವಾಗಿ ಕಂಬಗಳನ್ನು ಅಳವಡಿಸಲಾಗುತ್ತಿದೆ.