ಚೆಟ್ಟಳ್ಳಿ, ಜು. ೯: ಮಣ್ಣಿನ ರಕ್ಷಣೆಯ ಮೂಲಕ ಹೆಚ್ಚಿನ ಆದಾಯ ಪಡೆಯುವಲ್ಲಿ ಸುಸ್ಥಿರ ಕೃಷಿಪದ್ಧತಿಯನ್ನು ಕಾಫಿ ಉತ್ಪಾದನೆಯಲ್ಲಿ ಅಳವಡಿಸಿಕೊಳ್ಳಬೇಕೆಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಎಸ್.ಆಲೂರ ಹೇಳಿದರು.

ಚೆಟ್ಟಳ್ಳಿಯ ಕಾಫಿ ಉಪ ಸಂಶೋಧನಾ ಕೇಂದ್ರದಲ್ಲಿ ಕಾಫಿಮಂಡಳಿ ಹಾಗು ಸುಡಾನ್ ಕಾಫಿ ಪ್ರೆöÊ.ಲಿ. ಸಹಯೋಗದಲ್ಲಿ ಆಯೋಜಿಸಿದ್ದ ಕಾಫಿ ಅಭಿವೃದ್ಧಿ ಯೋಜನೆ ಅಡಿ ಕೊಡಗು ಪ್ರದೇಶದ ಕಾಫಿ ಬೆಳೆಯುವ ಬೆಳೆಗಾರರಿಗೆ ‘ಸುಸ್ಥಿರ ಕಾಫಿ ಉತ್ಪಾದನೆಗೆ ಉತ್ತಮ ಕೃಷಿಪದ್ಧತಿಗಳ ಸಾಮರ್ಥ್ಯಾಭಿವೃದ್ಧಿ’ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಣ್ಣ ಹಾಗೂ ಅತೀ ಸಣ್ಣ ಬೆಳೆಗಾರರು ಒಟ್ಟಾಗಿ ಕೃಷಿಯಲ್ಲಿ ತೊಡಗಿಸಿಕೊಂಡಾಗ ಮಾತ್ರ ನೂತನ ವೈಜ್ಞಾನಿಕ ಕ್ರಮವನ್ನು ಅನುಸರಿಸಲು ಸಾಧ್ಯವೆಂದರು.

ಕಾಫಿಮAಡಳಿಯ ಸದಸ್ಯ ಟಿ.ಕೆ.ಕಿಶೋರ್ ಕುಮಾರ್ ಮಾತನಾಡಿ, ಕಾಫಿ ತೋಟಗಳಲ್ಲಿ ಉತ್ತಮ ತಳಿಯ ಗಿಡಗಳನ್ನು ಬೆಳೆಸುವ ಮೂಲಕ ಹೆಚ್ಚಿನ ಇಳುವರಿ ಸಾಧ್ಯ, ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದಲ್ಲಿ ಉತ್ತಮ ಇಳುವರಿ ಕೊಡುವ ಕಾಫಿ ಗಿಡಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬೆಳೆಗಾರರಿಗೆ ವಿತರಿಸಲಾಗುತ್ತಿದೆ. ಅಂತರರಾಷ್ಟಿçÃಯ ಮಟ್ಟದಲ್ಲಿ ಭಾರತದ ಕಾಫಿಗೆ ಬೇಡಿಕೆ ಇದ್ದು ವಿದೇಶದಲ್ಲಿ ಕೃತಕವಾಗಿ ಬೆಳೆಯುವ ಕಾಫಿಗಿಂತ ಕೊಡಗಿನಂತ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆದ ಕಾಫಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಕಾಫಿಯಲ್ಲಿ ಹೆಚ್ಚಿನ ಚಿಕೋರಿಯ ಬಳಕೆ ಆರೋಗ್ಯಕ್ಕೆ ಹಾನಿಕಾರಕವೆಂದರು. ತೋಟಗಳಲ್ಲಿ ಅನಿಯಮಿತ ಕ್ರಿಮಿನಾಶಕಗಳ ಬಳಕೆಯಿಂದ ಗುಣಮಟ್ಟದಲ್ಲಿ ವ್ಯತಾಸವಾಗಲಿದೆ. ಕೊಡಗಿನಲ್ಲಿ ಕಾಡಾನೆಗಳು, ಕಾಡೆಮ್ಮೆ ಹಾಗೂ ವಿವಿಧ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆಗಾರರು ತೀವ್ರ ತೊಂದರೆ ಎದುರಿಸುವಂತಾಗಿರುವುದು ಒಂದೆಡೆಯಾದರೆ ಕಾಫಿ ತೋಟಗಳಲ್ಲಿ ಕಾರ್ಮಿಕರ ಕೊರತೆ ಮತ್ತೊಂದು ಸಮಸ್ಯೆ ಎಂದರು.

ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ಬೆಳೆಗಾರರು ಈ ಹಿಂದೆ ಕಾಫಿ ಬೋರ್ಡ್ ಮುಖಾಂತರ ಕಾಫಿಯನ್ನು ಮಾರಾಟ ಮಾಡಬೇಕಿತ್ತು. ೧೯೯೨-೯೩ರಿಂದ ಬೆಳೆಗಾರರು ತಮ್ಮದೇ ಆದ ಬ್ರಾö್ಯಂಡ್‌ನಡಿ ಉತ್ತಮ ಗುಣಮಟ್ಟದ ಕಾಫಿಯನ್ನು ಮಾರಾಟ ಮಾಡುವಂತಾಗಿದೆ. ಮುಂದಿನ ದಿನಗಳಲ್ಲಿ ನಾವು ಬೆಳೆಯುವ ಕಾಫಿಗೆ ಬೇಡಿಕೆ ಹೆಚ್ಚಾಗಲಿದ್ದು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವಂತಾಗಬೇಕೆAದರು. ಕೃಷಿ ಬಳಕೆಗೆ ಬೇಕಾದ ಯಂತ್ರೋಪಕರಣವಗಳನ್ನು ಕಾಫಿಮಂಡಳಿ ಕಡಿಮೆ ಖರ್ಚಿನಲ್ಲಿ ನೀಡುವ ಮೂಲಕ ಕಾಫಿ ಕೃಷಿಗೆ ಉತ್ತೇಜನ ನೀಡಬೇಕೆಂದರು. ಸುಡಾನ್ ಕಾಫಿ ಪ್ರೆöÊ.ಲಿ.ನ ವ್ಯವಸ್ಥಾಪಕ ಎ.ಬಿ.ಹರೀಶ್ ಮಾತನಾಡಿ ಉತ್ತಮ ಗುಣಮಟ್ಟ ಹಾಗೂ ಹೆಚ್ಚಿನ ಇಳುವರಿಯ ಮೂಲಕ ಉತ್ತಮ ಆದಾಯ ಪಡೆಯಲು ಸುಸ್ಥಿರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಕಾಫಿ ಮಂಡಳಿಯೊAದಿಗೆ ವಿವಿಧೆಡೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಬಗ್ಗೆ ವಿವರಿಸಿದರು.

ಕಾಫಿ ಮಂಡಳಿ ಕಳೆದ ಬಾರಿ ವಿವಿಧ ಯೋಜನೆಗಳಿಗೆ ರೂ. ೮ ಕೋಟಿಯಷ್ಟು ಹಣ ಬಿಡುಗಡೆಗೊಳಿಸಿತ್ತು. ಈ ಬಾರಿ ವಿವಿಧ ಕೃಷಿ ಯಂತ್ರೋಪಕರಣ, ಮರುನಾಟಿ, ಕೆರೆ, ಬಾವಿ, ಸ್ಪಿçಂಕ್‌ಲರ್ ವ್ಯವಸ್ಥೆ, ಗುಣಮಟ್ಟ ಸುಧಾರಣೆಗೆ, ಸಾವಯವ ಕೃಷಿಗೆ ಒಟ್ಟು ಸೇರಿ ಕೊಡಗಿಗೆ ರೂ.೧೭ ಕೋಟಿ ಹಣ ಬಿಡುಗಡೆಗೊಂಡಿದೆ. ಅತೀ ಸಣ್ಣ ಬೆಳೆಗಾರರರಿಂದ ಹಿಡಿದು ೨೫ ಹೆಕ್ಟೇರ್‌ಗಳಷ್ಟು ಜಾಗ ಹೊಂದಿರುವ ಬೆಳೆಗಾರರು ಕಾಫಿ ಮಂಡಳಿಗೆ ಅರ್ಜಿ ಸಲ್ಲಿಸುವ ಮೂಲಕ ಸವಲತ್ತನ್ನು ಪಡೆದುಕೊಳ್ಳಬಹುದೆಂದು ಮಡಿಕೇರಿ ಕಾಫಿ ಮಂಡಳಿಯ ಉಪನಿರ್ದೇಶಕ ಡಾ.ಚಂದ್ರಶೇಖರ್ ತಿಳಿಸಿದರು.

ಕಾಫಿ ಮಂಡಳಿ ೨,೦೪೭ ವಿವಿಧ ಯೋಜನೆಗಳ ಮೂಲಕ ಬೆಳೆಗಾರರ ೧೭ ವಿವಿಧ ಸಂಘಗಳನ್ನು ಜಾರಿಗೊಳಿಸಿದೆ. ಕೃಷಿಯಲ್ಲಿ ತೊಡಗಿಸಿಕೊಳ್ಳುವ ಬೆಳೆಗಾರರು ಈ ಸಂಘಗಳÀ ಸದಸ್ಯರಾಗುವ ಮೂಲಕ ಮಂಡಳಿಗೆ ವಿವಿಧ ಸಲಹೆ, ಸೂಚನೆ, ಬೆಳೆಗಾರರ ಸಮಸ್ಯೆಗಳನ್ನು ನೇರವಾಗಿ ತಿಳಿಸಬಹುದಾಗಿದೆ. ಕಾಫಿ ಮಂಡಳಿಯ ಇಂಡಿಯಾ ಕಾಫಿ ಆ್ಯಪ್ ಬಿಡುಗಡೆಗೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು. ಕಾರ್ಯಕ್ರಮದ ಅಂಗವಾಗಿ ಡಾ.ಅಶೋಕ್ ಎಸ್ ಆಲೂರ ಹಾಗೂ ಎ.ಬಿ.ಹರೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಬಸ್ಟಾ ಕಾಫಿಯಲ್ಲಿ ಸಸ್ಯ ಸಂವರ್ಧನೆ ಹಾಗೂ ಮೇಲು ಕಸಿಯ ಬಗ್ಗೆ ಗೋಣಿಕೊಪ್ಪ ಕಾಫಿಮಂಡಳಿಯ ವಿಜ್ಞಾನಿ ಡಾ. ಜೆ.ಚೇತನ್ ಬೆಳೆಗಾರರಿಗೆ ವಿವರಿಸಿದರು.

ಅತಿಥಿಗಳಾಗಿ ಗೋಣಿಕೊಪ್ಪ ಕಾಫಿ ಮಂಡಳಿ ಉಪನಿರ್ದೇಶಕಿ ಡಾ. ಕೆ. ಶ್ರೀದೇವಿ, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥ ಡಾ. ರಾಜೇಂದಿರನ್, ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯ ವಿಜ್ಞಾನಿ ಬಿ.ಪ್ರಭಾಕರ್, ಅಪ್ಪಂಗಳÀ ಸಂಬಾರ ಮಂಡಳಿಯ ಮುಖ್ಯಸ್ಥ ಡಾ. ಅಂಕೆಗೌಡ , ಕೊಡಗು ಪ್ಲಾಂರ‍್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಮೋಹನ್‌ದಾಸ್ ಭಾUವÀಹಿಸಿದ್ದರು.

ಅತಿಥಿಗಳು ಕಾಫಿ ಗಿಡಕ್ಕೆ ಪೋಷಕಾಂಶ ಹಾಗೂ ನೀರನ್ನು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಭಾವನಾ ಪ್ರಾರ್ಥಿಸಿ, ಕೇಂದ್ರದ ಪ್ರಬಾರ ಉಪನಿರ್ದೇಶಕ ಡಾ.ಮಂಜುನಾಥ್ ರೆಡ್ಡಿ ಸ್ವಾಗತಿಸಿ, ಕೇಂದ್ರದ ತಜ್ಞ ಡಾ.ಎಸ್.ಎ. ನಡಾಫ್ ಯೋಜನೆಯ ಬಗ್ಗೆ ವಿವರಿಸಿದರು, ತಜ್ಞ ಡಾ.ನಾಗರಾಜ್ ಗೋಕಾವಿ ವಂದಿಸಿ, ವಿಜ್ಞಾನಿ ಸುಚಿತ್ರ ಎಂ.ಎ ನಿರೂಪಿಸಿದರು.