ಮಡಿಕೇರಿ, ಜು, ೯: ಅಂತರರಾಷ್ಟಿçÃಯ ಸೇವಾ ಸಂಸ್ಥೆ ಯಾಗಿ ಜಗದಗಲ ಖ್ಯಾತಿಗಳಿಸಿರುವ ರೋಟರಿ ಸಂಸ್ಥೆಯು ನಾಯಕತ್ವ ಗುಣ ಬೆಳೆಸಲು ನೆರವಾಗುವುದ ರೊಂದಿಗೆ ಸದಸ್ಯರಲ್ಲಿರುವ ಪ್ರತಿಭೆಯ ಅನಾವರಣಕ್ಕೂ ವೇದಿಕೆಯಾಗಿ ಸಮಾಜ ಸೇವೆಗೆ ಪ್ರೇರಣೆ ನೀಡುತ್ತದೆ ಎಂದು ಸುಳ್ಯ ರೋಟರಿ ಸಂಸ್ಥೆಯ ಮಾಜಿ ಸಹಾಯಕ ಗವರ್ನರ್ ಡಾ. ಪಿ. ಕೆ. ಕೇಶವ್ ಹೇಳಿದ್ದಾರೆ, ಮಡಿಕೇರಿ ರೋಟರಿ ಸಭಾಂಗಣದಲ್ಲಿ ರೋಟರಿ ಮಡಿಕೇರಿ ವುಡ್ಸ್ನ ನೂತನ ಅಧ್ಯಕ್ಷರಾಗಿ ಹರೀಶ್ ಕಿಗ್ಗಾಲು ಮತ್ತು ಕಾರ್ಯದರ್ಶಿಯಾಗಿ ಕಿರಣ್ ಕುಂದರ್ ಹಾಗೂ ತಂಡದ ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು ಸರಿಯಾದ ವೇದಿಕೆಗಳು ದೊರಕದೇ ಇದ್ದಾಗ ಅಸಾಮಾನ್ಯ ವ್ಯಕ್ತಿ ಕೂಡ ಸಾಮಾನ್ಯನಾಗಿ ಬಿಡುತ್ತಾನೆ, ರೋಟರಿಯಂಥ ನಾಯಕತ್ವ ಬೆಳೆಸುವ ಸಂಸ್ಥೆಗಳು ಅಸಾಮಾನ್ಯ ವ್ಯಕ್ತಿತ್ವದವರೊಂದಿಗೆ ಸಾಮಾನ್ಯನನ್ನೂ ಅಸಮಾನ್ಯ ವ್ಯಕ್ತಿತ್ವದ ನಾಯಕನನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ, ಹೀಗಾಗಿ ರೋಟರಿಯಂಥ ಸೇವಾ ಸಂಸ್ಥೆಗಳಲ್ಲಿ ಸೇರ್ಪಡೆಯಾಗಿ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರೋಟರಿ ವಲಯ ೬ ರ ಸಹಾಯಕ ಗವರ್ನರ್ ದೇವಣಿರ ಕಿರಣ್ ಮಾತನಾಡಿ, ಈ ರೋಟರಿ ವರ್ಷದಲ್ಲಿ ಅಂಗನವಾಡಿಗಳಿಗೆ ಕಾಯಕಲ್ಪ, ಸಂಚಾರ ಮತ್ತು ಮಾದಕ ವ್ಯಸನದ ಜಾಗೃತಿ ಬಗ್ಗೆ ಕಾರ್ಯಕ್ರಮ ಸೇರಿದಂತೆ ೯ ವಿವಿಧ ಯೋಜನೆ ಗಳನ್ನು ಯಶಸ್ವಿಯಾಗಿ ಜಾರಿಗೆ ತರಲು ರೋಟರಿ ಸಂಸ್ಥೆ ಮುಂದಾಗಿದೆ ಎಂದು ಹೇಳಿದರು,

ರೋಟರಿ ವಲಯ ಸೇನಾನಿ ಅನಿತಾ ಪೂವಯ್ಯ ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ ೩ ವರ್ಷಗಳ ಹಿಂದೆ ಪ್ರಾರಂಭಿಸಿದ ಮಡಿಕೇರಿಯ ಮೂರನೇ ರೋಟರಿ ಸಂಸ್ಥೆಯಾದ ರೋಟರಿ ವುಡ್ಸ್ ಸಮಾಜ ಸೇವೆಯಲ್ಲಿ ಸಾರ್ಥಕತೆಯೊಂದಿಗೆ ಜನರ ಮನಗೆದ್ದಿದೆ ಎಂದರು. ರೋಟರಿ ವುಡ್ಸ್ ನೂತನ ಅಧ್ಯಕ್ಷ ಹರೀಶ್ ಕಿಗ್ಗಾಲು, ಈ ವರ್ಷದಲ್ಲಿ ಅನೇಕ ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಸೇವಾ ಕಾರ್ಯಗಳನ್ನು ನಿರಂತರವಾಗಿಸುವುದಾಗಿ ಭರವಸೆ ನೀಡಿದರು, ಇದೇ ಸಂದರ್ಭ ಜಾದೂಗಾರ ವಿಕ್ರಂ ಶೆಟ್ಟಿ ಮ್ಯಾಜಿಕ್ ಮೂಲಕ ಬುಟ್ಟಿಯೊಳಗಿನಿಂದ ರೋಟರಿ ವುಡ್ಸ್ನ ವಾರ್ತಾ ಸಂಚಿಕೆ ಅನಾವರಣಗೊಳಿಸಿ ಗಮನ ಸೆಳೆದರು,

ರೋಟರಿ ವುಡ್ಸ್ ವತಿಯಿಂದ ಮಡಿಕೇರಿಯ ಅಡುಗೆ ಅನಿಲ ಸಿಲಿಂಡರ್ ವಿತರಕರಾದ ಮಂಜುನಾಥ್, ಸುರೇಶ್, ಇರ್ಫಾನ್ ಎಂ. ಆರ್. ಉನೈಜ್, ವಜೀರ್, ಪೀಟರ್, ಇಮ್ರಾನ್ ಅವರುಗಳನ್ನು ಸನ್ಮಾನಿಸಲಾಯಿತು, ರೋಟರಿ ವುಡ್ಸ್ನ ಗೌರವ ಸದಸ್ಯರಾಗಿ ಅರಣ್ಯಾಧಿಕಾರಿ ಮಯೂರ್, ಸದಸ್ಯರಾಗಿ ಕೆ. ರವಿ ಮತ್ತು ಪವನ್ ವಸಿಷ್ಟ ಸೇರ್ಪಡೆ ಯಾದರು,

ರೋಟರಿ ವುಡ್ಸ್ ನಿರ್ಗಮಿತ ಅಧ್ಯಕ್ಷ ವಸಂತ್ ಕುಮಾರ್ ತನ್ನ ಅವಧಿಯ ಸೇವಾ ಕಾರ್ಯಗಳ ಮಾಹಿತಿ ನೀಡಿದರು, ರೋಟರಿ ವುಡ್ಸ್ ಕಾರ್ಯದರ್ಶಿ ಕಿರಣ್ ಕುಂದರ್ ವಂದಿಸಿದರು.