ಮಡಿಕೇರಿ, ಜು. ೯: ಜಿಲ್ಲೆಯಲ್ಲಿ ಮಾಜಿ ಸೈನಿಕರ ಕುಂದು - ಕೊರತೆಗಳಿಗೆ ಸಂಬAಧಿಸಿದAತೆ ಕಳೆದ ಹಲವು ಸಮಯಗಳಿಂದ ಮಾಜಿ ಸೈನಿಕರ ಅದಾಲತ್ ನಡೆದಿಲ್ಲ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ಅವರು ಸೂಚನೆ ನೀಡಿದ್ದರೂ ಸಭೆಯನ್ನು ವಿಳಂಬ ಮಾಡುತ್ತಿರುವ ಬಗ್ಗೆ ಮಾಜಿ ಸೈನಿಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಕೊಡಗು ಮಾಜಿ ಸೈನಿಕರ ಸಂಘದ ಸಭೆ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ತ್ವರಿತವಾಗಿ ಸಭೆ ನಡೆಸಲು ಆಗ್ರಹಿಸಲಾಯಿತು. ಸಂಘದಲ್ಲಿನ ಸದಸ್ಯತ್ವ ನವೀಕರಣ ಹಾಗೂ ಹೊಸ ಸದಸ್ಯತ್ವ ಅಭಿಯಾನದ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸೈನಿಕ ಕಲ್ಯಾಣ ಬೋರ್ಡ್ ಸಮಿತಿಯನ್ನು ಜಿಲ್ಲೆಯಲ್ಲಿ ಇನ್ನೂ ರಚಿಸಲಾಗಿಲ್ಲ. ಈ ಸಮಿತಿಯನ್ನು ಬೇರ ರಚನೆ ಮಾಡಲು ಒತ್ತಾಯಿಸಲೂ ಸಭೆ ನಿರ್ಧರಿಸಿತು. ಮಡಿಕೇರಿ ಇಸಿಹೆಚ್‌ಎಸ್ ಆಸ್ಪತ್ರೆಗೆ ಇದೀಗ ಹೊಸ ವೈದ್ಯರಾಗಿ ವರುಣಾ ಅವರು ನಿಯುಕ್ತಿಗೊಂಡಿರುವ ಬಗ್ಗೆ ಮಾಹಿತಿ ನೀಡಲಾಯಿತು. ಇದರೊಂದಿಗೆ ಜಿಲ್ಲೆಯಲ್ಲಿ ಹೊಸದಾಗಿ ಅಮ್ಮತ್ತಿಯ ಅಮೇರಿಕನ್ ಆಸ್ಪತ್ರೆ ಹಾಗೂ ಗೋಣಿಕೊಪ್ಪಲುವಿನ ಲೋಪಾ ಮುದ್ರ ಆಸ್ಪತ್ರೆ ಮಾಜಿಸೈನಿಕರಿಗೆ ಪ್ಯಾನಲ್ ಆಸ್ಪತ್ರೆಯಾಗಿ ಸೇರ್ಪಡೆಯಾಗಲಿದ್ದು, ಈ ಕುರಿತ ಪ್ರಕ್ರಿಯೆ ಸದ್ಯದಲ್ಲಿ ಪೂರ್ಣ ಗೊಳ್ಳಲಿರುವುದಾಗಿ ಮಾಹಿತಿಯನ್ನು ಒದಗಿಸಲಾಯಿತು. ಸಿಎನ್‌ಸಿ ಸಂಘಟನೆ ಭೂಪರಿವರ್ತನೆ ವಿಚಾರದಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಲೂ ಸಭೆ ನಿರ್ಧರಿಸಿತು.

ಅಧ್ಯಕ್ಷ ಬಿ.ಎ. ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ನಿವೃತ್ತ ಕರ್ನಲ್ ನೆರ್ಪಂಡ ಚಿಣ್ಣಪ್ಪ, ಕಾರ್ಯದರ್ಶಿ ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ, ಜಂಟಿ ಕಾರ್ಯದರ್ಶಿ ನಿವೃತ್ತ ಸುಬೇದಾರ್ ಮೇಜರ್ ವಾಸಪ್ಪ, ಖಜಾಂಚಿ ಕುಟ್ಟಂಡ ಮಾದಪ್ಪ ಸೇರಿದಂತೆ ಜಿಲ್ಲೆಯ ಇತರ ೮ ಸಂಘಗಳ ಅಧ್ಯಕ್ಷರು ಪಾಲ್ಗೊಂಡಿದ್ದರು. ಮಡಿಕೇರಿಯ ಕೊಹಿನೂರ್ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಸಭೆ ಜರುಗಿತು.