ವೀರಾಜಪೇಟೆ, ಜು. ೯: ಭೂತಾನ ದೇಶ ಬುದ್ಧನ ನೆಲವೀಡು, ಅತೀ ಚಿಕ್ಕ ದೇಶವಾದರು ಭಾರತ ದೇಶದೊಂದಿಗೆ ಅಪಾರ ಸಂಬAಧ ಹೊಂದಿದೆ ಎಂದು ವೀರಾಜಪೇಟೆ ವೈದ್ಯರಾದ ಪಕ್ಷಿತಜ್ಞ ಡಾ.ಎಸ್.ವಿ. ನರಸಿಂಹನ್ ಹೇಳಿದರು.

ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಮಾಸಿಕ ತತ್ತ÷್ವಚಿಂತನಾಗೋಷ್ಠಿ ೨೨೧ ಕಿರಣ ಹೊಂಬೆಳಕು ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ 'ಭೂತಾನ; ಬುದ್ಧನ ನೆಲೆವೀಡು' ಎಂಬ ವಿಷಯದ ಬಗ್ಗೆ ಮಾತನಾಡಿ ಪ್ರಪಂಚದಲ್ಲಿಯೇ ಭೂತಾನದಲ್ಲಿರುವ ಬುದ್ಧನ ದೇವಾಲಯ ಅತೀ ದೊಡ್ಡದು ಎಂದು ಹೇಳಲಾಗುತ್ತಿದೆ.

ಬಹಳ ಎತ್ತರದಲ್ಲಿರುವ ಪ್ರದೇಶ, ಸುಮಾರು ೨೨೫ ಕೋಟಿ ವರ್ಷಗಳ ಹಿಂದಿನ ದೇಶ, ಅಲ್ಲಿ ಹೆಚ್ಚು ಬಂಡೆಗಳಿರುವ ಪ್ರದೇಶವಾದರು ಶೇ.೭೦ ರಷ್ಟು ಅರಣ್ಯಗಳನ್ನು ರಕ್ಷಣೆ ಮಾಡಲಾಗಿದೆ. ಭೂತಾನ್ ದೇಶದಲ್ಲಿ ೨೦ ಜಿಲ್ಲೆಗಳಿವೆ. ಅಲ್ಲಿನ ಬೆಳೆ ಭತ್ತ ಪ್ರಮುಖವಾಗಿದೆ, ಅಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಲ್ಲಿಗೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ದೇಶ ಹತ್ತಿರದಲ್ಲಿದೆ ಎಂದ ಡಾ.ನರಸಿಂಹನ್ ಬೌದ್ಧ ಧರ್ಮದ ಆಡಳಿತ ಬಹಳ ಉತ್ತಮವಾಗಿ ನಡೆಯುತ್ತಿದೆ ಎಂದರು ಭಾರತದೊಂದಿಗೆ ಅಪಾರ ಸಂಬAಧ ಹೊಂದಿದೆ ಎಂದರು.

ಶ್ರೀ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಭೂತಾನ ದೇಶ ಜಗತ್ತಿನ ಅತ್ಯಂತ ಶಾಂತಿಯುತ ದೇಶವಾಗಿದೆ, ಸಾಧು ಸಂತರು ಅತೀ ಹೆಚ್ಚು ಸಂದೇಶ ನೀಡಿದ ದೇಶ. ಸ್ವಚ್ಚತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು. ಭೂತಾನ ದೇಶ ಅತೀ ಕಡಿಮೆ ಜನ ಸಂಖ್ಯೆ ಇರುವ ದೇಶವಾದರು ಪ್ರಾಣಿ ಪಕ್ಷಿಗಳು ಕಡಿಮೆ ಇಲ್ಲ. ಮಾನವನಿಗೆ ಎಲ್ಲಿಯೇ ಇದ್ದರು ಶಾಂತಿ ನೆಮ್ಮದಿ ಮುಖ್ಯವಾಗಿದೆ, ಪ್ರವಾಸ ಮಾಡುವುದು ಮನಃಶಾಂತಿಗೆ ಆದರೂ ಅದನ್ನು ಅಧ್ಯಾಯ ಮಾಡುವುದು ಮುಖ್ಯವಾಗಿದೆ.

ಇದರಿಂದ ಅನೇಕ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸ್ವಾಮೀಜಿ ನುಡಿದರು. ಮೊದಲಿಗೆ ಕೃಷಿಕರಾದ ಶಶಿಕಲಾ ಗಿರೀಶ್ ಕಿಗ್ಗಾಲು ಕಾರ್ಯಕ್ರಮ ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳಾದ ಜೊನಾ ಲಕ್ಷಿö್ಮ ಸ್ವಾಗತಿಸಿ, ಮಾನ್ಯ ಅಮನ ಪ್ರಾರ್ಥಿಸಿದರೆ, ದಿವ್ಯ ದರ್ಶಿಣಿ ನಿರೂಪಿಸಿ, ವರುಣಿ ವಂದಿಸಿದರು.