ಸಿದ್ದಾಪುರ: ಚೆನ್ನಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹೆಚ್ ಎಸ್ ಗಣೇಶ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್. ಬಿ ಗಣೇಶ್ ಸಣ್ಣಯ್ಯ ಹಾಗೂ ಸ್ಥಳೀಯರಾದ ಪಿ ಆರ್ ಶೀಲಾ ರಾಜೇಶ್ ಸಿದ್ದಪ್ಪ ರಮ್ಲ ಹಾಗೂ ಜೋಯಪ್ಪ ಮನು ಸಾಬೀರ್ ರವೀಂದ್ರ ಇನ್ನಿತರರು ಹಾಜರಿದ್ದರು.

ಮಡಿಕೇರಿ : ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರಮದಾನ ನಡೆಯಿತು. ಇದೇ ಸಂದರ್ಭ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಜನ್ಮದಿನದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು. ಮೇಕೇರಿ ಗ್ರಾ.ಪಂ. ಸದಸ್ಯ ಎಂ.ಯು. ಹನೀಫ್ ಪಂಚಾಯಿತಿ ಸದಸ್ಯ ಕೀರ್ತನ್ ಕಾಂಗೀರ, ಕಾಂಗ್ರೆಸ್ ವಲಯ ಕಾರ್ಯದರ್ಶಿ ಎಂ.ಯು. ರಫೀಕ್ ಮತ್ತಿತರರು ಪಾಲ್ಗೊಂಡಿದ್ದರು. ವೀರಾಜಪೇಟೆ : ವೀರಾಜಪೇಟೆ ನಗರ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ವೀರಾಜಪೇಟೆಯ ಕಾವೇರಿ ಕಾಲೇಜಿನಿಂದ ಬಿಟ್ಟಂಗಾಲದ ಅಂಬಟ್ಟಿವರೆÀಗೆ ಸ್ವಚ್ಚತಾ ಕಾರ್ಯ ನಡೆಯಿತು.

ಈ ಸಂದರ್ಭ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಾದಂಡ ಪೂವಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಪುರಸಭಾ ಸದಸ್ಯರಾದ ರಜನಿಕಾಂತ್, ಜಲಿಲ್ ಅಹಮದ್, ಮನೆಯಪಂಡ ದೇಚಮ್ಮ ಕಾಳಪ್ಪ , ಎಸ್.ಎಚ್. ಮತೀನ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ವೀರಾಜಪೇಟೆ: ವೀರಾಜಪೇಟೆ ಪುರಸಭಾ ಸದಸ್ಯರುಗಳಿಂದ ನಗರದ ದೊಡ್ಡಟ್ಟಿ ಚೌಕ್ಕಿಯಲ್ಲಿ ಸಾರ್ವಜನಿಕರಿಗೆ ಬೆಳಗ್ಗಿನ ಉಪಾಹಾರ ವಿತರಣೆ ನಡೆಯಿತು.

ಈ ಸಂದರ್ಭ ಬ್ಲಾಕ್ ಈ ಸಂದರ್ಭ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ, ಸದಸ್ಯ ಮಹಮ್ಮದ್ ಖುರೇಶಿ, ಉಪಾಧ್ಯಕ್ಷೆ ಹೇಮಾವತಿ, ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ಮಿರ್ಷಾದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಅರಫಾತ್, ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಟಿ.ಎ.ಅನೀಫ್, ಟಿ.ಎ. ಮಹಮ್ಮದ್, ಸಾಬ ತಿಮ್ಮಯ್ಯ, ಅಮೀನಾ, ಶಶಿಮಂದಣ್ಣ, ಬೇತು ದವಸ ಭಂಡಾರದ ಅಧ್ಯಕ್ಷ ಕೊಂಡಿರ ನಾಣಯ್ಯ, ಪಕ್ಷದ ಪ್ರಮುಖರಾದ ಸಿ.ಎಚ್. ಅಹಮದ್, ವಸೀಮ್ ಕ್ಲಾಸಿಕ್ ಸೇರಿದಂತೆ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು, ಮತ್ತಿತರರು ಇದ್ದರು.

ನಾಪೋಕ್ಲು: ನಾಪೋಕ್ಲುವಿನ ಪುನಶ್ಚೇತನ ಚಾರಿಟೇಬಲ್ ಟ್ರಸ್ಟ್ನ ವಿಶೇಷ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು.

ಈ ಸಂದರ್ಭ ಸ್ಥಳಿಯ ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಲಯ ಅಧ್ಯಕ್ಷ ಮಾಚೆಟ್ಟಿರ ಕುಶು ಕುಶಾಲಪ್ಪ, ಪಂಚಾಯಿತಿ ಸದಸ್ಯರಾದ ಕುಲ್ಲೇಟಿರ ಅರುಣ್ ಬೇಬ,ಮಹಮ್ಮದ್, ಖುರೇಶಿ, ಪುನಶ್ಚೇತನ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥ ಬಾಳೆಯಡ ದಿವ್ಯ ಮಂದಪ್ಪ, ಸಂಸ್ಥೆ ಶಿಕ್ಷಕಿ ಅಸ್ಮ ಹಾಜರಿದ್ದರು.ಸಂಪಾಜೆ : ಕಾಂಗ್ರೆಸ್ ಕಾರ್ಯಕರ್ತರು ಸಂಪಾಜೆಯ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆ ನಡೆಸಿ, ಬಳಿಕ ಸಂಪಾಜೆಯ ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಪೆನ್ ವಿತರಣೆ ಮಾಡಿದರು. ನಂತರ ಸಂಪಾಜೆ ಗೇಟ್ ಬಳಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಪಿ.ಎಲ್. ಸುರೇಶ್, ಜಿಲ್ಲಾ ಮಾಜಿ ಯುವಕ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಎಸ್.ಪಿ., ನಾಪೋಕ್ಲು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ವರಿ ಕೆ.ಕೆ., ತಿರುಮಲ ಸೋನಾ, ಸಂಪಾಜೆ ಬೂತ್ ಅಧ್ಯಕ್ಷ ರಿತಿನ್ ಡೆಮ್ಮಲೆ, ಉಮೇಶ್ ನಿಡುಬೆ, ವಿಜಯಕುಮಾರ್ ಕನ್ಯಾನ, ಎನ್‌ಎನ್‌ಯುಐ ಕಾರ್ಯದರ್ಶಿ ರುನೈಜ್, ತಿಮ್ಮಪ್ಪ ಬಿ.ಎನ್., ಮೋಹನ ಬಾಳಕಜೆ, ಜಗನ್ ಡೆಮ್ಮಲೆ, ಗೋಪಾಲ ಪೂಜಾರಿ, ರಾಜೇಶ್ ಕುದ್ಕುಳಿ, ಮಾದವ, ನಾರಾಯಣ, ನಾಸೀರ್ ಮಾಡಶೇರಿ ಮತ್ತಿತರರು ಹಾಜರಿದ್ದರು.