ವೀರಾಜಪೇಟೆ, ಜು. ೯: ಪ್ರತಿಯೊಬ್ಬರಿಗೂ ಪರಿಸರದ ಅವಶ್ಯಕತೆ ಇರುವುದರಿಂದ ಎಲ್ಲರೂ ಪರಿಸರವನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಅರಣ್ಯ ಇಲಾಖೆ ವೀರಾಜಪೇಟೆ ಪ್ರಾದೇಶಿಕ ವಲಯದ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ-೨೦೨೪ ಅಂಗವಾಗಿ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಗಿಡ ನೆಟ್ಟು ಬಳಿಕ ಅವರು ಮಾತನಾಡಿದರು. ಕಾಡು ಮನುಷ್ಯನಿಗೆ ಬೇಕಾದ ವಸ್ತುಗಳನ್ನು ನೀಡುತ್ತಿದೆ. ಪ್ರಾಣಿ ಪಕ್ಷಿಗಳು ಸೇರಿದಂತೆ ಅನೇಕ ಜೀವರಾಶಿಗಳು ಅರಣ್ಯದಲ್ಲಿ ಜೀವಿಸುವುದರಿಂದ ಪರಿಸರವನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದರು.

ಈ ಸಂದರ್ಭ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಎಚ್.ಎನ್. ರಾಮಚಂದ್ರ, ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೋಣಿಯಂಡ ಅಪ್ಪಣ್ಣ, ಪುರಸಭೆ ಸದಸ್ಯ ರಂಜಿ ಪೂಣಚ್ಚ, ಹಿರಿಯ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ನೆಹರು, ವಲಯಾರಣ್ಯಾಧಿಕಾರಿ ದೇವಯ್ಯ, ಉಪ ವಲಯಾರಣ್ಯಾಧಿಕಾರಿ ಆನಂದ ಕೆ.ಆರ್., ಮೋನಿಷಾ ಎಂ.ಎಸ್., ಸಚಿನ್ ನಿಂಬಾಳ್ಕರ್, ಜನಾರ್ಧನ, ಸಂಜಿತ್ ಡಿ.ಪಿ., ಗಸ್ತು ಅರಣ್ಯಪಾಲಕ ಚಂದ್ರಶೇಖರ ಅಮರಗೋಳ, ಅರಣ್ಯ ಇಲಾಖೆಯ ಸಿಬ್ಬಂದಿಗಳು, ತಾಲೂಕು ಕಚೇರಿ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.