ಮಡಿಕೇರಿ, ಜು. ೯: ಅಭಿಮಾನಿಗಳ ಸಮ್ಮಿಲನ, ಅರ್ಥಪೂರ್ಣ ಸಮಾಜಮುಖಿ ಚಟುವಟಿಕೆಗಳೊಂದಿಗೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಜನ್ಮದಿನವನ್ನು ಸಂಭ್ರಮ-ಸಡಗರದಿAದ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಚರಿಸಿದರು.
ಮೊದಲು ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಗಳಿಗೆ ಎ.ಎಸ್. ಪೊನ್ನಣ್ಣ ಮುನ್ನುಡಿ ಇಟ್ಟರು. ಉತ್ತಮ ಮಳೆ-ಬೆಳೆಯಾಗಲಿ, ಕೊಡಗು ಅಭಿವೃದ್ಧಿ ಕಾಣಲೆಂದು ದೇವರಲ್ಲಿ ಪ್ರಾರ್ಥಿಸಿದರು. ಅನಂತರ ಭಾಗಮಂಡಲದಲ್ಲಿ ತುಲಾಭಾರ ಸೇವೆಗೈದು ಕ್ಷೇತ್ರದ ೫೯ ಪಂಚಾಯಿತಿ ಹಾಗೂ ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಭಾಗಮಂಡಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು. ನಂತರ ವೀರಾಜಪೇಟೆ ಪುರಸಭೆ ಪೌರಕಾರ್ಮಿಕರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡರು.
ಹುಟ್ಟುಹಬ್ಬದ ಪ್ರಯುಕ್ತ ಕ್ಷೇತ್ರದ ಎಲ್ಲಾ ಗ್ರಾಮಗಳ ಮುಖ್ಯರಸ್ತೆಯಲ್ಲಿ ಸ್ವಚ್ಛತಾ ಅಭಿಯಾನವನ್ನು ಕಾಂಗ್ರೆಸ್ ಕಾರ್ಯಕರ್ತರು ನಡೆಸಿದರು. ಆಶ್ರಮಗಳಲ್ಲಿ ಊಟದ ವ್ಯವಸ್ಥೆ, ಬಡವರಿಗೆ ನೆರವು, ವೈದ್ಯಕೀಯ ಶಿಬಿರಗಳು ವಿವಿಧೆಡೆ ನಡೆದವು.
ಬಿಟ್ಟಂಗಾಲದಲ್ಲಿ ಅದ್ದೂರಿ ಕಾರ್ಯಕ್ರಮ
ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಸಮಿತಿಗಳು, ಎ.ಎಸ್. ಪೊನ್ನಣ್ಣ ಅಭಿಮಾನಿಗಳ ಸಂಘದ ವತಿಯಿಂದ ಬಿಟ್ಟಂಗಾಲದ ಕೂರ್ಗ್ ಎತ್ನಿಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.
ಜಿಲ್ಲೆಯ ವಿವಿಧೆಡೆಗಳಿಂದ ಪೊನ್ನಣ್ಣ ಅಭಿಮಾನಿಗಳು, ಹಿತೈಷಿಗಳು ಸಂಭ್ರಮಕ್ಕೆ ಸಾಕ್ಷಿಯಾದರು. ಸಭಾಂಗಣಕ್ಕೆ ಪೊನ್ನಣ್ಣ ಅವರು ಪ್ರವೇಶಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಪೊನ್ನಣ್ಣ ಅಭಿಮಾನಿಗಳು, ವಿವಿಧ ಸಂಘ-ಸAಸ್ಥೆಗಳ ಪ್ರಮುಖರು ಶುಭಕೋರಿದರು. ಕೊಡವ ದುಡಿಕೊಟ್ಟ್ ಪಾಟ್ ಹಾಗೂ ನಾಣಚ್ಚಿ ಹಾಡಿಯ ಕಲಾತಂಡದಿAದ ವಿಶೇಷ ಸಂಗೀತ, ನೃತ್ಯದೊಂದಿಗೆ ಸಾಗಿ ಬಂದ ಪೊನ್ನಣ್ಣ ಅವರು ಸಭಾಂಗಣದ ಹೊರಭಾಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರವನ್ನು ವೀಕ್ಷಿಸಿ ತಾವು ತಪಾಸಣೆ ಮಾಡಿಸಿಕೊಂಡರು.
ಸಭಾAಗಣದ ಒಳಭಾಗಕ್ಕೆ ಬಂದ ಶಾಸಕರಿಗೆ ನೂರಾರು ಮಂದಿ ಉಡುಗೊರೆ ನೀಡಿ, ಹಾರ ಹಾಕಿ, ಪುಷ್ಪಗುಚ್ಛ ನೀಡಿ ಹಾರೈಸಿದರು. ಸಭಾಂಗಣದಲ್ಲಿ ಜನ ಕಿಕ್ಕಿರಿದು ಸೇರಿದ್ದರು. ವಿವಿಧ ಧರ್ಮಗುರುಗಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಬೃಹತ್ ಕೇಕ್ ಅನ್ನು ಪೊನ್ನಣ್ಣ ಕತ್ತರಿಸಿದರು.
ಪೊನ್ನಣ್ಣ ಕಾರ್ಯವೈಖರಿಗೆ ಧರ್ಮಗುರುಗಳ ಮೆಚ್ಚುಗೆ
ಹಿಂದೂ, ಮುಸ್ಮಿಂ, ಕ್ರೆöÊಸ್ತ ಸಮುದಾಯದ ಧರ್ಮಗುರುಗಳು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ್ದು ವಿಶೇಷವಾಗಿತ್ತು.
(ಮೊದಲ ಪುಟದಿಂದ) ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶಾಸಕರಾಗಿ ಎ.ಎಸ್. ಪೊನ್ನಣ್ಣ ಅವರು ಸಣ್ಣ ಅವಧಿಯಲ್ಲಿ ಪ್ರಾಮಾಣಿಕ ಕೆಲಸಗಳನ್ನು ಮಾಡಿ ಜನಪರವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರ ಶಿಸ್ತು, ಸಂಯಮ ಎಲ್ಲರಿಗೂ ಮಾದರಿಯಾಗಿದೆ. ಪೊನ್ನಣ್ಣ ಅವರು ತಮ್ಮ ೫೦ ವರ್ಷಗಳಲ್ಲಿ ಮಾಡಿದ ಸೇವೆ ಹೆಮ್ಮಯ ವಿಚಾರ. ರಾಜಕೀಯ ಹಿನ್ನೆಲೆ ಕುಟುಂಬದಿAದ ಬಂದಿರುವ ಪೊನ್ನಣ್ಣ ಅವರು ರಾಜಕೀಯ ಆಳ-ಅಗಲ ತಿಳಿದಿದ್ದಾರೆ. ಹಾಗಾಗಿ ಅವರಿಂದ ಅಲ್ಪಾವಧಿಯಲ್ಲಿ ಇಷ್ಟು ದೊಡ್ಡ ಮಟ್ಟದ ಕೆಲಸ ಮಾಡಲು ಸಾಧ್ಯವಾಯಿತು. ಕಾಲ ಎಂದರೆ ಕೇವಲ ಗಡಿಯಾರವಲ್ಲ. ನಮ್ಮೊಳಗಿನ ಅನುಭವ. ಪೊನ್ನಣ್ಣ ಅವರು ಅಪೂರ್ವ ಬೆಳವಣಿಗೆಯೊಂದಿಗೆ ಅನುಭವವನ್ನು ಹೊಂದಿದ್ದಾರೆ. ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ರೂ. ೨೫೦ ಕೋಟಿ ಹಣ ತರುವುದು ಸುಲಭದ ಮಾತಲ್ಲ. ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಕಣ್ಣ ಮುಂದಿವೆ. ಮತ್ತಷ್ಟು ಉತ್ತುಂಗಕ್ಕೆ ಏರಲಿ. ಆದರ್ಶ ರಾಜಕಾರಣಿಯಾಗಿ ಮಾದರಿಯಾಗಲಿ ಎಂದು ಆಶಿಸಿದರು.
ಸಂತ ಅನ್ನಮ್ಮ ದೇವಾಯಲದ ಧರ್ಮಗುರು ಜೇಮ್ಸ್ ಡಾಮ್ಟೀನ್ ಮಾತನಾಡಿ, ಪೊನ್ನಣ್ಣ ಅವರ ಸಮಾಜ ಮುಖಿ ಕೆಲಸ ಹೀಗೆ ಮುಂದುವರೆ ಯಲಿ ಎಂದು ಹಾರೈಸಿದರು.
ಕೊಡಗು ಜಿಲ್ಲಾ ಖಾಝಿ ಅಬ್ದುಲ್ಲ ಫೈಝಿ ಎಡಪಾಲ ಮಾತನಾಡಿ, ಕೊಡಗು ಜಿಲ್ಲೆ ಕಂಡAತ ಅಪರೂಪದ ರಾಜಕಾರಣಿ ಪೊನ್ನಣ್ಣ ಎಂದು ಬಣ್ಣಿಸಿದ ಅವರು, ವಿವಿಧತೆಯಲ್ಲಿ ಏಕತೆ ಕಾಣುವ ಭಾರತ ದೇಶ ಸದೃಢವಾಗಿರಬೇಕೆಂದರೆ ಪೊನ್ನಣ್ಣ ಅವರಂತ ರಾಜಕಾರಣಿ ಇರಬೇಕು. ಜಾತ್ಯತೀತ ನೆಲಗಟ್ಟಿನ ಸುಂದರ ಕೊಡಗನ್ನು ರೂಪಿಸುವಲ್ಲಿ ಪೊನ್ನಣ್ಣ ಅವರ ಪಾತ್ರ ದೊಡ್ಡದಿದೆ ಎಂದರು.
ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಹಫೀಲ್ ಸಹದಿ ಮಾತನಾಡಿ, ಪೊನ್ನಣ್ಣ ಅವರು ತಮ್ಮ ಜೀವಿತಾವಧಿಯಲ್ಲಿ ಅಮೂಲ್ಯ ಕಾಲಘಟ್ಟಕ್ಕೆ ತಲುಪಿದ್ದಾರೆ. ಪೊನ್ನಣ್ಣ ಸಾಧನೆ ಅವರ ವಿಶಾಲ ಮನಸ್ಥಿತಿಯಾಗಿದೆ. ಎಲ್ಲಾ ಜನಾಂಗದವರನ್ನು ಒಟ್ಟಾಗಿ ಕರೆದೊಯ್ಯುವ ಮನಸ್ಥಿತಿಯನ್ನು ಹೊಂದಿದ್ದಾರೆ. ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು.
ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಪೊನ್ನಣ್ಣ ಅವರು ಕಿರಿವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಕೊಡಗಿನ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಅವರ ಸೇವೆ ಇದೇ ರೀತಿ ಜನರಿಗೆ ಸಿಗಲಿ ಎಂದು ಹೇಳಿದರು.ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಜಾತ್ಯತೀತ ರಾಜಕೀಯಕ್ಕೆ ಮನ್ನಣೆ ನೀಡಿ. ದ್ವೇಷ ರಾಜಕಾರಣಕ್ಕೆ ಅವಕಾಶ ನೀಡಬೇಡಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಪೊನ್ನಣ್ಣ ಅವರು ಜನತೆಯ ಕಷ್ಟ-ಕಾರ್ಪಣ್ಯಕ್ಕೆ ಸ್ಪಂದಿಸಿ ಅಭಿವೃದ್ಧಿಗೆ ಕಟಿಬದ್ಧರಾಗಿದ್ದಾರೆ ಎಂದು ಶ್ಲಾಘಿಸಿದರು.
ಹಿರಿಯ ವಕೀಲ, ವೀರಾಜಪೇಟೆ ಪುರಸಭೆ ಮಾಜಿ ಅಧ್ಯಕ್ಷ ಮೇರಿಯಂಡ ಪೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸನ್ನಡತೆ, ಉತ್ತಮ ಗುಣಗಳನ್ನು ಹೊಂದಿರುವ ಪೊನ್ನಣ್ಣ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಶಾಂತೆಯAಡ ವೀಣಾ ಅಚ್ಚಯ್ಯ, ಚೆಪ್ಪುಡೀರ ಅರುಣ್ ಮಾಚಯ್ಯ, ಕೆ.ಎಂ. ಇಬ್ರಾಹಿಂ, ಕೆಪಿಸಿಸಿ ವಕ್ತಾರ ಎಂ. ಲಕ್ಷö್ಮಣ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ. ಚಂದ್ರಕಲಾ, ಕೆ.ಬಿ. ಶಾಂತಪ್ಪ, ಶಹೀದ್ ತೆಕ್ಕಿಲ್, ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಕಾಂಗ್ರೆಸ್ ಮುಖಂಡರುಗಳಾದ ಕೆ.ಬಿ. ಚಂದ್ರಮೌಳಿ, ಮೇರಿಯಂಡ ಸಂಕೇತ್ ಪೂವಯ್ಯ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಕಾಫಿ ಬೆಳೆಗಾರ ಪಿ.ಸಿ. ಹಸೈನಾರ್, ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ಕೊಡಗು ಗೌಡ ಸಮಾಜ ಅಧ್ಯಕ್ಷ ಪೇರಿಯನ ಜಯಾನಂದ, ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕೊರಕುಟ್ಟೀರ ಸರ ಚಂಗಪ್ಪ, ಕೊಡವ ಭಾಷಿಕ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ. ಎಂ. ಸುಭಾಷ್ ನಾಣಯ್ಯ, ಯರವ ಸಮಾಜ ಅಧ್ಯಕ್ಷ ಸಿದ್ದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪಟ್ಟಡ ರಂಜಿ ಪೂಣಚ್ಚ, ಮೀದೇರಿರ ನವೀನ್, ಇಸ್ಮಾಯಿಲ್, ಪೊನ್ನಣ್ಣ ಅವರ ಪತ್ನಿ ಕಾಂಚನ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಮೋಹನ್ ಪ್ರಾರ್ಥಿಸಿ, ದೇಚಮ್ಮ ಕಾಳಪ್ಪ ಸ್ವಾಗತಿಸಿ, ರಾಜೇಶ್ ಪದ್ಮನಾಭ್ ನಿರೂಪಿಸಿ, ರಫಿ ವಂದಿಸಿದರು.