ಗೋಣಿಕೊಪ್ಪಲು, ಜು. ೬: ಲಯನ್ಸ್ ಸಂಸ್ಥೆಯ ೫೦ನೇ ವರ್ಷದ ಪದಗ್ರಹಣ ಸಮಾರಂಭವು ಪಾಲಿಬೆಟ್ಟದ ಲಯನ್ಸ್ ಸೇವಾ ಅನುಗ್ರಹ ಭವನದ ಸಭಾಂಗಣದಲ್ಲಿ ಜರುಗಿತು. ಲಯನ್ಸ್ ಸಂಸ್ಥೆಯ ಹಾಲಿ ಅಧ್ಯಕ್ಷ ಅನಂತರಾಮ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಜಿ. ಶ್ರೀನಿವಾಸ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಕೊಡಗು, ಮಂಗಳೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳು ಒಳಪಟ್ಟಂತೆ ಲಯನ್ಸ್ ಜಿಲ್ಲಾ ೩೧೭ಡಿಯ ಪಾಲಿಬೆಟ್ಟ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಕೆ.ಕೆ. ಅಯ್ಯಪ್ಪ, ಕಾರ್ಯದರ್ಶಿಯಾಗಿ ಬಾಳೆಯಡ ಸದಾ ಕುಶಾಲಪ್ಪ, ಖಜಾಂಚಿಯಾಗಿ ಡಾ. ಭವಿಷ್ಯ ಕುಮಾರ್ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಅಧಿಕಾರ ಸ್ವೀಕರಿಸಿದರು. ಲಯನ್ಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಜಿ. ಶ್ರೀನಿವಾಸ್, ಲಯನ್ಸ್ ಸಂಸ್ಥೆಯು ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಹೆಸರುಗಳಿಸಿದೆ. ಜನರ ಸೇವೆಗಾಗಿ ಲಯನ್ಸ್ ಸಂಸ್ಥೆಯ ಸದಸ್ಯರು ಸದಾ ಸೇವೆ ಸಲ್ಲಿಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿಯೂ ಲಯನ್ಸ್ ಸಂಸ್ಥೆಯು ಹಲವಾರು ಜನೋಪಯೋಗಿ ಕಾರ್ಯಕ್ರಮ ಗಳನ್ನು ಅನುಷ್ಠಾನಗೊಳಿಸಿದೆ.

ಪಾಲಿಬೆಟ್ಟ ಲಯನ್ಸ್ ಸಂಸ್ಥೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ ಅವರು, ಜನರ ಸೇವೆಗಾಗಿ ಪ್ರತಿ ಲಯನ್ಸ್ ಸದಸ್ಯರ ಸಹಕಾರ ನಿರಂತರವಾಗಿರಬೇಕು. ಇದರಿಂದ ನಿಗದಿತ ಸಮಯದಲ್ಲಿ ಲಯನ್ಸ್ ಸಂಸ್ಥೆಯ ಉದ್ದೇಶಗಳನ್ನು ಜನರ ಬಳಿಗೆ ತಲುಪಿಸುವ ಕೆಲಸವಾಗಲಿದೆ ಎಂದರು.

ವೇದಿಕೆಯಲ್ಲಿ ವಲಯ ಅಧ್ಯಕ್ಷೆ ಕನ್ನಿಕ ಅಯ್ಯಪ್ಪ, ಪ್ರಾಂತೀಯ ಅಧ್ಯಕ್ಷರುಗಳಾದ ಪಿರಿಯಾಪಟ್ಟಣದ ಲಯನ್ ಮಹದೇವಪ್ಪ, ಮಡಿಕೇರಿಯ ಕನ್ನಂಡ ಬೆಳ್ಯಪ್ಪ, ಕುಶಾಲನಗರದ ಸುಮನ್ ಬಾಲಚಂದ್ರ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಕವಿತ ಅಚ್ಚಯ್ಯ ಪ್ರಾರ್ಥಿಸಿ, ಕೆ.ಕೆ. ಸ್ವರೂಪ್ ಅಯ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸದಾ ಕುಶಾಲಪ್ಪ ವಾರ್ಷಿಕ ವರದಿ ಮಂಡಿಸಿದರು.

ಡೋಮಿ ರೊಜಾರಿಯೋ ಧ್ವಜ ವಂದನೆ ಮಾಡಿದರು. ಎಂ.ಎನ್.ಅಚ್ಚಯ್ಯ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಡಾ. ಅಜ್ಜಿನಿಕಂಡ ಸಿ. ಗಣಪತಿ, ಮಾಜಿ ವಲಯ ಅಧ್ಯಕ್ಷರುಗಳಾದ ಪಟ್ಟಡ ಧನು ಉತ್ತಯ್ಯ, ನವೀನ್ ಅಂಬೆಕಲ್, ಮೋಹನ್ ದಾಸ್, ಮಧುಕರ್ ಶೇಠ್, ಪೆಮ್ಮುಡಿಯಂಡ ಅಪ್ಪಣ್ಣ, ಬನ್ಸಿ ಭೀಮಯ್ಯ, ಜ್ಯೋತಿ ಪೊನ್ನಪ್ಪ, ಹಿರಿಯರಾದ ಶಾರದಾ ಪೊನ್ನಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಲಯನ್ಸ್ ಖಜಾಂಚಿ ಡಾ. ಭವಿಷ್ಯಕುಮಾರ್ ವಂದಿಸಿದರು. ವಿವಿಧ ಭಾಗದಿಂದ ಲಯನ್ಸ್ ಸಂಸ್ಥೆಯ ಸದಸ್ಯರು, ಹಿರಿಯ ಸದಸ್ಯರು ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.