ಕಳೆದ ಜೂನ್ ೨೯ರ ರಾತ್ರಿ ೧೧.೩೦ಕ್ಕೆ ಬಹುಶಃ ದೇಶ, ವಿದೇಶಗಳಲ್ಲಿ ಇರುವ ಕನಿಷ್ಟ ನೂರು ಕೋಟಿ ಭಾರತೀಯರ ಕಣ್ಣಂಚಿನಲ್ಲಿ ಆನಂದಭಾಷ್ಪ ಹರಿದಿರುತ್ತದೆ. ಕಾರಣ ಇಷ್ಟೇ, ಭಾರತ ಕ್ರಿಕೆಟ್ ತಂಡ ಟಿ೨೦ ವಿಶ್ವಕಪ್ ಗೆದ್ದ ಕ್ಷಣವದು.
೨೦೨೩ರ ಏಕದಿನ ವಿಶ್ವಕಪ್ ಫೈನಲ್ ಸೋತ ನಂತರ ಕನಿಷ್ಟ ಒಂದು ವಾರದವರೆಗೂ ಜನ ಮಂಕು ಬಡಿದಂತೆ ಇದ್ದರು. ಆ ಹಂತಕ್ಕೆ ಭಾರತೀಯರ ಮನಸ್ಸಿನ ಆಳಕ್ಕೆ ಕ್ರಿಕೆಟ್ ಇಳಿದು ಹೋಗಿತ್ತು.
ಭಾರತದ ವಿಶೇಷತೆ ಎಂದರೆ ಒಂದೆರಡು ತಿಂಗಳ ಹಿಂದೆ ನಡೆದ ಐಪಿಎಲ್ ಸಂದರ್ಭದಲ್ಲಿ ಕೊಹ್ಲಿ ಬೇರೆ, ರೋಹಿತ್ ಶರ್ಮಾ ಬೇರೆ, ಹಾರ್ದಿಕ್ ಪಾಂಡ್ಯ ಬೇರೆ ಅಂತ ಬೇರೆ ಬೇರೆ ಬಣಗಳು ಆಗಿದ್ದವರು ಅದನ್ನೆಲ್ಲಾ ಮರೆತು ಇಂಡಿಯಾ ಗೆದ್ದರೆ ಸಾಕಪ್ಪಾ ಎಂದು ಮೊಬೈಲ್ ಮುಂದೆ, ಟಿವಿ ಮುಂದೆ, ಲ್ಯಾಪ್ಟಾಪ್ ಮುಂದೆ ತಾವು ಕುಳಿತ ಸ್ಥಳದಿಂದ ಕದಲದೆ ಏನಾದ್ರೂ ಆಗಿಯೇ ಬಿಡುತ್ತದೆ ಎಂದು ಕುಳಿತ ಜಾಗದಲ್ಲೇ ಕುಳಿತು ಆಟ ನೋಡುವ ತವಕದಲ್ಲಿದ್ದರು.
ಯಾವತ್ತೂ ಯಾವುದೇ ಆವೇಶ ತೋರಿಸದ ರಾಹುಲ್ ದ್ರಾವಿಡ್ ಕಪ್ ಎತ್ತಿ ಹಿಡಿದು ಸಂಭ್ರಮಿಸಿದ ರೀತಿಯೇ ಹೇಳುತ್ತಿತ್ತು ಈ ಕಪ್ನಲ್ಲಿ ಎಂತಹಾ ವಿಶೇಷತೆ ಅಡಗಿದೆ ಎಂದು. ತುಂಬಾ ‘ಆಟ್ಯೂಟುಡ್’ ಎಂದು ಜನರಿಂದ ಬೈಯಿಸಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದ ಪಾಂಡ್ಯನ ಕಣ್ಣೀರು ಹೇಳುತ್ತಿತ್ತು ಈ ಕಪ್ ಎಂತಹ ವಿಶೇಷತೆಯಿಂದ ಕೂಡಿದೆ ಎಂದು. ಆಕ್ರಮಣಕಾರಿ ಆಟಕ್ಕೆ ಹೆಸರಾದ ನಮ್ಮವರೇ ಆಗಿಬಿಟ್ಟಿರುವ ವಿರಾಟ್ ಕೊಹ್ಲಿ ಹೆಚ್ಚು ಕಿರುಚಾಟವಿಲ್ಲದ ಸೆಲೆಬ್ರೆಷನ್ ಹೇಳುತ್ತಿತ್ತು ಈ ಕಪ್ ಎಷ್ಟೊಂದು ವಿಶೇಷತೆಯಿಂದ ಕೂಡಿದೆ ಎಂದು. ರೋಹಿತ್ ಶರ್ಮಾ ಪಿಚ್ನಲ್ಲಿ ಕುಳಿತು ಆ ಮಣ್ಣನ್ನು ಸವಿದಾಗ ಆ ಭಾವನೆ ಹೇಳುತ್ತಿತ್ತು ಈ ಕಪ್ನಲ್ಲಿ ಎಷ್ಟೊಂದು ವಿಶೇಷತೆ ಅಡಗಿದೆ ಎಂದು. ಅದೇ ರೀತಿ ಆ ದಿನ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಭಾವನೆಗಳನ್ನು ಬಣ್ಣಿಸಲು ಆಗದಂತಹ ದಿನವಾಗಿತ್ತು.
ಭಾರತೀಯರು ಯಾವುದೇ ಕ್ಷೇತ್ರದಲ್ಲಿ ಯಾರು ಹೇಗೇ ಇದ್ದರೂ ಸಹಿಸಿಕೊಳ್ಳುತ್ತಾರೆ. ಕ್ರಿಕೆಟ್ ಪಟುಗಳು ತುಂಬಾ ಪರ್ಫೆಕ್ಟ್ ಆಗಿರಬೇಕು. ಜಂಟಲ್ ಮೆನ್ಗಳು ಆಗಿರಬೇಕು ಎಂದು ಬಯಸುತ್ತಾರೆ. ಸಚಿನ್, ದ್ರಾವಿಡ್, ಕುಂಬ್ಳೆ, ದೋನಿ, ಗಂಗೂಲಿ, ಜಹೀರ್ ಖಾನ್, ಲಕ್ಷö್ಮಣ್, ಯುವರಾಜ್ ಸಿಂಗ್ ಹೀಗೆ ಹಲವಾರು ಕ್ರೀಡಾಪಟುಗಳ ಗುಣಗಳು ಎಂಭತ್ತು-ತೊAಭತ್ತರ ದಶಕದ ಕೋಟ್ಯಂತರ ಯುವಜನರಿಗೆ ‘ಇನ್ಸಿಪಿರೇಷನ್’ ಆಗಿದೆ ಎಂದರೆ ತಪ್ಪಾಗಲಾರದು.
ಈoಡಿ ಚಿ ಟಿಚಿಣioಟಿ oಜಿ ೧೪೦ ಛಿಡಿoಡಿe ಠಿeoಠಿಟe, ಛಿಡಿiಛಿಞeಣ is ಟಿoಣ ರಿusಣ ಚಿ meಡಿe gಚಿme, iಣ is ಚಿಟಿ emoಣioಟಿ!
- ನಿಯಾಝ್ ಕೊಡಗು