ಮಡಿಕೇರಿ, ಜು. ೬: ನಗರ ವ್ಯಾಪ್ತಿಯಲ್ಲಿ ದುಸ್ಥಿತಿಯಲ್ಲಿರುವ ಬಸ್ ತಂಗುದಾಣಗಳನ್ನು ಆಧುನೀಕರಣ ಗೊಳಿಸಲು ಶಾಸಕ ಡಾ. ಮಂತರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು ಸಂಜೆ ನಗರಸಭೆ, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಜನರಲ್ ತಿಮ್ಮಯ್ಯ ವೃತ್ತ, ಜಿಲ್ಲಾ ಆಸ್ಪತ್ರೆ, ಚೈನ್ ಗೇಟ್, ಮೂರ್ನಾಡು ರಸ್ತೆ, ಮಂಗಳೂರು ರಸ್ತೆಯ ಬಸ್ ತಂಗುದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು ತ್ವರಿತಗತಿಯಲ್ಲಿ ಹೈಟೆಕ್ ತಂಗುದಾಣಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಚೈನ್ ಗೇಟ್ ಬಳಿ ಇದ್ದ ತಂಗುದಾಣ ಕೆಡವಿದ ಸ್ಥಳದಿಂದ ಸ್ವಲ್ಪ ಮುಂದಕ್ಕೆ ಸುರಕ್ಷಿತ ಮತ್ತು ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣಕ್ಕೆ ಸೂಚಿಸಿದರು. ಮೂರ್ನಾಡು ರಸ್ತೆಯಲ್ಲಿನ ಶೌಚಾಲಯ ವೀಕ್ಷಣೆ ಮಾಡಿದ ಶಾಸಕರು ೨೦ ಲಕ್ಷ ರೂ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ನಕಾಶೆ ಮತ್ತು ಅಂದಾಜು ಪಟ್ಟಿಯನ್ನು ಸಲ್ಲಿಸುವಂತೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು. ಈ ಸಂದರ್ಭ ಶಾಸಕರೊಂದಿಗೆ ಮಡಿಕೇರಿ ನಗರಸಭೆ ಪೌರಾಯುಕ್ತರಾದ ವಿಜಯ್, ಪ್ರಮುಖರಾದ ತೆನ್ನಿರ ಮೈನಾ, ಪ್ರಕಾಶ್ ಆಚಾರ್ಯ, ಮಂಡೀರ ಸದಾ ಮುದ್ದಪ್ಪ, ಮುದ್ದುರಾಜ್, ವಿ.ಜಿ. ಮೋಹನ್, ಮೂಡಾ ಅಧಿಕಾರಿಗಳು. ಲೋಕೋಪಯೋಗಿ ರಾಷ್ಟಿçÃಯ ಹೆದ್ದಾರಿಯ ಎಂಜಿನಿಯರ್ಗಳು ಹಾಜರಿದ್ದರು.