ಕೂಡಿಗೆ, ಜು. ೪: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಸೆ ಗ್ರಾಮದಲ್ಲಿ ದೇವಿರಮ್ಮ, ವೀರಭದ್ರೇಶ್ವರ ದೇವಾಲಯ ಸಮಿತಿಯ ವತಿಯಿಂದ ಮೂರು ದಿನಗಳ ಪೂಜಾ ಕೈಂಕರ್ಯಗಳೊAದಿಗೆ ಹುಲಸೆ ಗ್ರಾಮದಲ್ಲಿ ಶ್ರೀ ದೇವಿರಮ್ಮ, ಶ್ರೀ ವೀರಭದ್ರೇಶ್ವರ ಮತ್ತು ನಾಗದೇವರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿತು.

ವಿಗ್ರಹ ಪ್ರತಿಷ್ಠಾಪನೆಯ ಅಂಗವಾಗಿ ಕಾವೇರಿ ನದಿಯಿಂದ ಕಲಶದೊಂದಿಗೆ ನೀರು ತಂದು ಶ್ರೀ ದೇವಿರಮ್ಮ ಮತ್ತು ವೀರಭದ್ರ ಸ್ವಾಮಿಗೆ ಅಭಿಷೇಕ ಮಾಡಲಾಯಿತು. ಮೂರು ದಿನಗಳವರೆಗೆ ದೇವಾಲಯದ ಆವರಣದಲ್ಲಿ ಕೇರಳದ ಗೋಪಾಲ್ ಕೇದಲಾಯೆಲ್ ಮತ್ತು ಗಣೇಶ್ ಉಪಾಧ್ಯಾಯ ತಂಡದಿAದ ವಿವಿಧ ಹೋಮ-ಹವನ, ಪೂಜಾ ಕೈಂಕರ್ಯಗಳು ನಡೆದವು.

ಕೂಡಿಗೆ, ಹೆಬ್ಬಾಲೆ, ಹುಲಸೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು. ಆಗಮಿಸಿದ ಭಕ್ತರಿಗೆ ದೇವಾಲಯ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಇ. ರಾಮಣ್ಣ, ಕಾರ್ಯದರ್ಶಿ ಹೆಚ್. ಸಿ. ಚಂದ್ರು, ಉಪಾಧ್ಯಕ್ಷ ದೇವಯ್ಯ, ನಿರ್ದೇಶಕರಾದ ಜಯ, ಹೆಚ್.ಇ. ರಾಜು, ಶಿವಪ್ಪ ಸೇರಿದಂತೆ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತರು ಹಾಜರಿದ್ದರು.