ಕರಿಕೆ, ಜು. ೩: ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ಕಾಡು ಕೋಣ (ಕಾಟಿ), ಇತರ ವನ್ಯಜೀವಿಗಳ ಕಳ್ಳ ಬೇಟೆ, ಹತ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗಿದ್ದು, ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅರಣ್ಯ ಸಚಿವರು ಸಂಬAಧಿಸಿದ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ. ನಾಗರಹೊಳೆ ಅರಣ್ಯದಂಚಿನ ಕೊಡಗು ಅರಣ್ಯ ವೃತ್ತದ ಕುಶಾಲನಗರ ವಲಯದ ಮಾಲ್ದಾರೆ, ಆನೆಚೌಕೂರು, ಮಡಿಕೇರಿ ವಲಯಗಳಲ್ಲಿ ಒಟ್ಟು ಏಳು ಕಾಡುಕೋಣಗಳ ಹತ್ಯೆಯಾಗಿದ್ದು, ಈ ಬಗ್ಗೆ ಮಾಧÀ್ಯಮಗಳಲ್ಲಿ ವರದಿಯಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ, ಪರಿಸರ, ಜೀವಿಶಾಸ್ತç ಇಲಾಖೆಯವರಿಗೆ ಈ ಬಗ್ಗೆ ತಮ್ಮ ಕಛೇರಿಗೆ ವರದಿ ಸಲ್ಲಿಸಿ, ಸೂಕ್ತ ಕಾನೂನು ಕ್ರಮ ವಹಿಸಿ, ಅಗತ್ಯ ಗಸ್ತು ಹೆಚ್ಚಳ ಮಾಡಿ ವನ್ಯಜೀವಿ ಸಂರಕ್ಷಣೆ ಮಾಡಲು ಸೂಚಿಸಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ವರದಿ ನೀಡಲು ಆದೇಶ ಹೊರಡಿಸಿದ್ದು, ಎಲ್ಲಾ ವಲಯಗಳಲ್ಲಿ ಗಸ್ತು ಹೆಚ್ಚಿಸಿ ಕಳ್ಳ ಬೇಟೆ ನಿಯಂತ್ರಣ ಮಾಡಿ ವನ್ಯಜೀವಿಗಳ ಸಂರಕ್ಷಣೆಗಾಗಿ ಸೂಕ್ತ ಕ್ರಮವಹಿಸಲು ಸೂಚಿಸಿದ್ದಾರೆ. ಕೊಡಗಿನಲ್ಲಿ ಕಾಡುಕೋಣ ಸೇರಿದಂತೆ ಇತರ ವನ್ಯಜೀವಿಗಳನ್ನು ಬೇಟೆಯಾಡಿ, ಮಾಂಸ ಮಾಡಿ ಮಾರಾಟ ಮಾಡುವ ಮಾಫಿಯಾಗಳು ನಡೆಯುತ್ತಿದ್ದು, ನಾಗರಹೊಳೆ ರಾಷ್ಟಿçÃಯ ಉದ್ಯಾನವನ ಅಂಚಿನ ಅರಣ್ಯ ಪ್ರದೇಶ, ವನ್ಯಜೀವಿ ಅಭಯಾರಣ್ಯಗಳಲ್ಲಿ ಮಾತ್ರವಲ್ಲದೆ, ಖಾಸಗಿ ತೋಟಗಳು, ದೇವರಕಾಡು, ಮೀಸಲು ಅರಣ್ಯ ಪ್ರದೇಶದಲ್ಲಿ, ಡೀಮ್ಡ್ ಫಾರೆಸ್ಟ್ಗಳಲ್ಲೂ ಅರಣ್ಯ ಇಲಾಖೆ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿ ಗಸ್ತು ಹೆಚ್ಚಳ ಮಾಡಿ ಬೇಟೆ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.

-ಸುಧೀರ್ ಹೊದ್ದೆಟ್ಟಿ