ಸೋಮವಾರಪೇಟೆ, ಜು. ೩: ತಾಲ್ಲೂಕು ಹಿಂದೂ ಮಲಯಾಳ ಸಮಾಜದ ನೂತನ ಸಾಲಿನ ಅಧ್ಯಕ್ಷರನ್ನಾಗಿ ಹಾಲಿ ಅಧ್ಯಕ್ಷ ವಿ.ಎಂ. ವಿಜಯ ಅವರನ್ನೇ ಮುಂದುವರೆಸಲು ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ವಿ.ಎಂ. ವಿಜಯ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ರಚಿಸಿದ್ದು, ಅಧ್ಯಕ್ಷರಾಗಿ ವಿಜಯ ಅವರನ್ನು ಮರು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಪಿ.ಎನ್. ಗಂಗಾಧರ್, ಅಯ್ಯಪ್ಪ, ಅಜೀಶ್‌ಕುಮಾರ್, ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೆ. ಮೋಹನ್, ಖಜಾಂಚಿಯಾಗಿ ಎನ್.ಎನ್. ದಯಾನಂದ, ಸಹಕಾರ್ಯದರ್ಶಿಯಾಗಿ ವಿನೀಲ್, ಸನಿಲ್, ಸಂಘಟನಾ ಕಾರ್ಯದರ್ಶಿಯಾಗಿ ಟಿ.ವಿ. ಕಿಶೋರ್, ಮಹಿಳಾ ಘಟಕದ ಅಧ್ಯಕ್ಷರಾಗಿ ಅನಿತಾ ಮಾಧವನ್, ಕಾರ್ಯದರ್ಶಿ ಜ್ಯೋತಿ ಅರುಣ್, ಸಹಕಾರ್ಯದರ್ಶಿಯಾಗಿ ಗೀತಾ ಮೋಹನ್ ಹಾಗೂ ಸ್ಥಾಪಕ ಅಧ್ಯಕ್ಷ ಪಿ.ಡಿ. ಪ್ರಕಾಶ್ ಸೇರಿದಂತೆ ೩೫ ಜನ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಯಿತು.