ಕುಶಾಲನಗರ, ಜು. ೩: ಮಂಗಳೂರಿನಿAದ ಕುಶಾಲನಗರ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಐರಾವತ ಸರಕಾರಿ ಬಸ್ ನಡು ರಸ್ತೆಯಲ್ಲಿ ಕೆಟ್ಟು ನಿಂತ ಹಿನ್ನೆಲೆಯಲ್ಲಿ ಸ್ವಲ್ಪಕಾಲ ಕುಶಾಲನಗರ ಪಟ್ಟಣದಲ್ಲಿ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು.
ಮಂಗಳೂರಿನಿAದ ಕುಶಾಲನಗರದ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಂಡ ಐರಾವತ ಬಸ್ ಏಂ೦೧ಈ೯೩೫೭ ಯಾಂತ್ರಿಕ ವೈಫಲ್ಯದಿಂದ ಕುಶಾಲನಗರ ಪಟ್ಟಣದ ಗಣಪತಿ ದೇವಾಲಯದ ಬಳಿ ಏಕಾಏಕಿ ರಸ್ತೆಯಲ್ಲಿ ನಿಂತ ಕಾರಣ ಪಟ್ಟಣದಲ್ಲಿ ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ಏರುಪೇರು ಉಂಟಾಯಿತು.
ತಕ್ಷಣ ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು ಮತ್ತು ಸ್ಥಳೀಯರ ಸಹಕಾರದೊಂದಿಗೆ ಬಸ್ ಅನ್ನು ರಸ್ತೆ ಬದಿಗೆ ಸರಿಸಿ ಹೆದ್ದಾರಿ ವಾಹನಗಳ ಸಂಚಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಯಿತು.