ಸೋಮವಾರಪೇಟೆ, ಜು. ೩: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ

ಬಿಜೆಪಿ ಬೆಂಬಲಿತ ಜಿ.ಎಸ್.ನಾಗರಾಜು, ಉಪಾಧ್ಯಕ್ಷರಾಗಿ ಜಿ.ಜಿ. ಮಲ್ಲಿಕಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎ.ಎಸ್.ನವೀನ್ ಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಹಾಗು ಕೆ.ಡಿ.ವಿಶಾಲಾಕ್ಷಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆ, ಖಾಲಿಯಾಗಿದ್ದ ಸ್ಥಾನಗಳಿಗೆ ಚುನಾವಣಾಧಿಕಾರಿ- ತಹಶೀಲ್ದಾರ್ ನವೀನ್ ಕುಮಾರ್ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ನಡೆಯಿತು.

ಎರಡು ಸ್ಥಾನಗಳಿಗೆ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಗಳು ಘೋಷಿಸಿದರು. ಈ ಸಂದರ್ಭ ಪಂಚಾಯಿತಿ ಸದಸ್ಯರಾದ ನವೀನ್ ಕುಮಾರ್, ವಿಶಾಲಾಕ್ಷಿ, ಸಿ.ಈ. ವೆಂಕಟೇಶ್, ಬಿ.ಹೆಚ್.ಮಂಜುನಾಥ್, ಜಿ.ಜಿ.ಗಣೇಶ್, ಕೆ.ಎಂ.ರೋಹಿಣಿ, ಕೆ.ಕೆ.ಸುಮ, ಗೌರಿ ಹಾಗೂ ಪಿಡಿಓ ಎಸ್.ಪಿ.ಲಿಖಿತ ಇದ್ದರು. ಬಿಜೆಪಿ ಮುಖಂಡರಾದ ಗೌಡಳ್ಳಿ ಸುನಿಲ್, ಶುಂಠಿ ಸುರೇಶ್, ಗೌತಮ್, ಬಿ.ಜೆ.ದೀಪಕ್, ಹೆಚ್.ಕೆ.ಮಾದಪ್ಪ, ಪಿ.ಕೆ.ಚಂದ್ರು, ದರ್ಶನ್ ಜೋಯಪ್ಪ, ಜೀವನ್, ಕಿಬ್ಬೆಟ್ಟ ಮಧು ಮತ್ತಿತರರು ಇದ್ದರು.