ಕೂಡಿಗೆ, ಜು. ೩: ಕೊಡಗಿನ ಪ್ರಮುಖ ಆಕರ್ಷಣೆಯ ತಾಣ ಕುಶಾಲನಗರ ತಾಲೂಕಿನ ಚಿಕ್ಲಿಹೊಳೆ ಅಣೆಕಟ್ಟೆ ಭರ್ತಿಯಾಗಿದೆ.

ತುಂಬಿ ಹರಿಯುತ್ತಿರುವ ಚಿಕ್ಲಿಹೊಳೆ ಅಣೆಕಟ್ಟೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಶಾಸ್ತೊçÃಕ್ತವಾಗಿ ಬಾಗಿನ ಅರ್ಪಿಸಿದರು.

ವಾಡಿಕೆಯಂತೆ ಜುಲೈನಲ್ಲಿ ಭರ್ತಿಯಾಗುವ ಜಲಾಶಯ ಕಳೆದ ಕೆಲವು ದಿನಗಳಿಂದ ಸುರಿದ ಉತ್ತಮ ಮಳೆಯಿಂದ ಇದೀಗ ಅಣೆಕಟ್ಟೆ ಭರ್ತಿಯಾಗಿ ತುಂಬಿ ಹರಿಯಲು ಆರಂಭಿಸಿದೆ. ಅಣೆಕಟ್ಟೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಶಾಸಕರು ಪರಿಶೀಲನೆ ನಡೆಸಿದರು.

ಈ ಸಂದರ್ಭ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಅಭಿಯಂತರ ಕಿರಣ್, ಮತ್ತಿತರರು ಇದ್ದರು.