ಸುAಟಿಕೊಪ್ಪ, ಜು. ೨: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕೋತ್ಸವ ೩ ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆದು ಸಂಪನ್ನಗೊAಡಿತು. ವಾರ್ಷಿಕೋತ್ಸವದ ಅಂಗವಾಗಿ ೩ ದಿನಗಳ ವಿಶೇಷ ಬಲಿಪೂಜೆ, ಆರಾಧನೆಯನ್ನು ಆಯೋಜಿಸಲಾಗಿತ್ತು. ಧ್ವಜಾರೋಹಣವನ್ನು ರೆ.ಫಾ. ಸಂಜಯ್ ಕುಮಾರ್ ನೆರವೇರಿಸಿ ವಿಶೇಷ ಪ್ರಭೋದನೆ ಮತ್ತು ಬಲಿಪೂಜೆಯನ್ನು ಸಮರ್ಪಿಸಿದರು. ೩ ದಿನಗಳು ವಿವಿಧ ಧರ್ಮಕೇಂದ್ರಗಳ ಧರ್ಮಗುರುಗಳು ಆಗಮಿಸಿ ಬಲಿಪೂಜೆ ಆರಾಧನೆಯನ್ನು ಸಲ್ಲಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಮಧ್ಯಾಹ್ನದ ವೇಳೆಯಲ್ಲಿ ಸಂತ ಸಬಾಸ್ಟಿನ್ ಅವರ ಅಂಬು ಕಾಣಿಕೆ ಹರಕೆಯನ್ನು ಭಕ್ತಾದಿಗಳು ಸಲ್ಲಿಸಿದರು. ಅಡಂಬರ ಗಾಯನ ಬಲಿಪೂಜೆ ಮತ್ತು ಪರಮಪ್ರಸಾದ ಆರಾಧನೆಯನ್ನು ಹೆಚ್.ಡಿಕೋಟೆಯ ಬರ್ನಾಡ್ ಪ್ರಕಾಶ್ ಬಾರ್ನಿಸ್ ವಿವಿಧ ಧರ್ಮ ಕೇಂದ್ರಗಳ ಧರ್ಮಗುರುಗಳು ಒಗ್ಗೂಡಿ ನೇರವೇರಿಸಿದರು.

ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ವಂ.ಪಾ. ಮದಲೈಮುತ್ತು, ಅನ್ನಮ್ಮ ದೇವಾಲಯದ ಧರ್ಮಗುರು ವಂ.ಪಾ. ಜೇಮ್ಸ್, ಪೊನ್ನಂಪೇಟೆ ಧರ್ಮ ಕೇಂದ್ರದ ಧರ್ಮಗುರು ಡೇವಿಡ್ ಸಗಾಯ್‌ರಾಜ್, ಅಬ್ಬೂರುಕಟ್ಟೆ ದೇವಾಲಯದ ಜಾನ್ ಡಿಕುನ್ನ, ಕೂಡಿಗೆ ಚಾಲ್ಸ್ ನರೋನ, ಚೆಟ್ಟಳ್ಳಿ ಧರ್ಮ ಕೇಂದ್ರದ ವಂ. ಜೆರಾಲ್ಡ್ ಸಿಕ್ವೇರಾ, ೭ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ರೆ.ಫಾ. ಸಬಾಸ್ಟೀನ್ ಪೂವ್ವಗತ್ತಿಲ್, ಕುಶಾಲನಗರ ಸಂತ ಸೆಬಾಸ್ಟಿನ್ ದೇವಾಲಯದ ಫಾ. ಮಾರ್ಟಿನ್, ಮಡಿಕೇರಿ ಸಂತ ಮೈಕಲರ ದೇವಾಲಯದ ಸಹಾಯಕ ಗುರು ಸಂಜಯ್ ಕುಮಾರ್, ಪಿರಿಯಾಪಟ್ಟಣದ ಜಾನ್ ಪೌಲ್, ಸೋಮವಾರಪೇಟೆ ಧರ್ಮ ಕೇಂದ್ರದ ಧರ್ಮಗುರು ದÀ್ವಂ.ಫಾ. ಅವಿನಾಶ್, ಪಾಲಿಬೆಟ್ಟ ಧರ್ಮ ಕೇಂದ್ರದ ಧರ್ಮ ಗುರು ವಂ.ಫಾ. ಜಾರ್ಜ್, ಮಾದಾಪುರ ಧರ್ಮ ಕೇಂದ್ರದ ಧರ್ಮಗುರು ವಂ.ಫಾ. ಸೂಫಿರಾಜ್ ಹಾಗೂ ಸಂತ ಅಂತೋಣಿ ದೇವಾಲಯದ ವಿಜಯಕುಮಾರ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.