ಕುಶಾಲನಗರ, ಜು. ೨: ವೈದ್ಯರ ದಿನಾಚರಣೆಯ ಅಂಗವಾಗಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯಾರ್ಥಿ ಪ್ಯಾರಾ ಮೆಡಿಕಲ್ ಕಾಲೇಜಿನ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವೈದ್ಯರೊಂದಿಗೆ ತಂತ್ರಜ್ಞಾನ ಕೂಡ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂಧನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ವಿದ್ಯಾರ್ಥಿ ಪ್ಯಾರಾ ಮೆಡಿಕಲ್ ಕಾಲೇಜಿನ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ವೈದ್ಯರ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೈದ್ಯ ಡಾ. ಬಿದನ್ ಚಂದ್ರರಾಯ್ ಅವರ ಜನ್ಮದಿನದ ನೆನಪಿಗಾಗಿ ಭಾರತ ಸರ್ಕಾರವು ೧೯೯೧ ರ ಜುಲೈ ಒಂದನ್ನು ರಾಷ್ಟಿçÃಯ ವೈದ್ಯರ ದಿನವೆಂದು ಘೋಷಿಸಿದೆ ಎಂದು ಮಾಹಿತಿ ಒದಗಿಸಿದ ಅವರು ನಿಸ್ವಾರ್ಥ ಸೇವೆಯನ್ನು ಒದಗಿಸಿದ್ದಲ್ಲಿ ಮಾತ್ರ ವೈದ್ಯರ ಸೇವೆ ಪರಿಪೂರ್ಣ ಎಂದರು.

ಕಾರ್ಯಕ್ರಮದಲ್ಲಿ ವೈದ್ಯರುಗಳಾದ ಡಾ. ಶಿವಕುಮಾರ್, ಡಾ. ಪ್ರಾಣೇಶ್ ಡಾ. ಕೀರ್ತಿರಾಜ್, ಡಾ. ಪ್ರತಿಭಾ, ಪ್ಯಾರಾ ಮೆಡಿಕಲ್ ಸಂಸ್ಥೆಯ ಭವ್ಯಶ್ರೀ ಡಿ.ಎ., ಶ್ರೀ ವಿದ್ಯಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಾನಸ ಸ್ವಾಗತಿಸಿ, ವಂದಿಸಿದರು.