ನಾಪೋಕ್ಲು, ಜು. ೨: ಬುದ್ಧಿವಂತಿಕೆ ಯಾರ ಸ್ವತ್ತಲ್ಲ, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ತೋರಿಸಿ ಮುಂದೆಬರಬೇಕು ಎಂದು ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮೇದುರ ವಿಶಾಲ ಹೇಳಿದರು. ಸ್ಥಳೀಯ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ೨೦೨೪- ೨೫ರ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಯನ್ನು ನೆರವೇರಿಸಿ ಅವರು ಮಾತನಾಡಿದರು.

ಶಾಲಾ ಹಂತದಲ್ಲಿ ರಚಿಸಲಾಗುವ ಸಂಘವು ವಿದ್ಯಾರ್ಥಿಯ ಭವಿಷ್ಯಕ್ಕೆ ಪೂರಕವಾಗಿರುತ್ತದೆ ಎಂದ ಅವರು ಮೌಲ್ಯ ನಿರ್ಣಯವೂ ಸಹ ವಿದ್ಯಾರ್ಥಿಗಳಿಗೆ ಪರಿಪೂರ್ಣತೆಯನ್ನು ಒದಗಿಸುತ್ತದೆ. ವಿದ್ಯಾರ್ಥಿ ದಿಸೆಯಲ್ಲೇ ಮುಂದಿನ ಭವಿಷ್ಯದ ಬಗ್ಗೆ ಕನಸು ಕಂಡು ಅದನ್ನು ನನಸಾಗಿಸಲು ಶಿಸ್ತು ಮತ್ತು ಶ್ರದ್ಧೆಯಿಂದ ಶ್ರಮಿಸುವಂತಾಗ ಬೇಕು ಎಂದು ಹಿತವಚನವನ್ನು ನುಡಿದರು.

ನಿವೃತ್ತ ಪ್ರಾಂಶುಪಾಲರು ಹಾಗೂ ಸಂಸ್ಥೆಯ ನಿರ್ದೇಶಕರಾದ ಪ್ರೊ ಕಲ್ಯಾಟಂಡ ಪೂಣಚ್ಚ ಮಾತನಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆಯ ಮಾಜಿ ಅಧ್ಯಕ್ಷರ ಕೊಡುಗೆ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ ಮಕ್ಕಳಿಗೆ ಹಿತವಚನ ನುಡಿದರು.

ಶಾಲೆಯ ಪ್ರಾಂಶುಪಾಲ ಕಲ್ಯಾಟಂಡ ಶಾರದಾ ಮಾತನಾಡಿ, ವಿದ್ಯಾರ್ಥಿಗಳು ಜವಾಬ್ದಾರಿಯನ್ನು ಹೊಂದಿ ಓದುವುದರ ಜೊತೆಗೆ ಉತ್ತಮ ಹವ್ಯಾಸವನ್ನು ರೂಢಿಸಿ ಕೊಳ್ಳಬೇಕು ಎಂದರು.

ಶ್ರೀರಾಮ ಟ್ರಸ್ಟ್ ಆಡಳಿತ ಮಂಡಳಿಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಅಧ್ಯಕ್ಷತೆ ವಹಿಸಿದ್ದ ವೇದಿಕೆಯಲ್ಲಿ, ಉಪಾಧ್ಯಕ್ಷ ನೆರವಂಡ ದೇವಯ್ಯ, ಕಾರ್ಯದರ್ಶಿ ನಾಯಕಂಡ ದೀಪು ಚಂಗಪ್ಪ, ನಿರ್ದೇಶಕರಾದ ಬಿದ್ದಾಟಂಡ ಪಾಪ ಮುದ್ದಯ್ಯ, ಬೊಪ್ಪಂಡ ಕುಶಾಲಪ್ಪ, ಕೊಂಬAಡ ಗಣೇಶ, ಬೊಳ್ಳಚೆಟ್ಟೀರ ಸುರೇಶ್, ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ, ಕಲಿಯಂಡ ಕೌಶಿಕ್ ಕುಶಾಲಪ್ಪ ಉಪಸ್ಥಿತರಿದ್ದರು.

ಪ್ರಾಂಶುಪಾಲೆ ಬಿ.ಎಂ. ಶಾರದಾ ಸ್ವಾಗತಿಸಿ, ಕೆ.ಎಸ್. ಶೋಭಾ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಲಾ ಅತಿಥಿಗಳ ಪರಿಚಯ ಮಾಡಿ, ಶಿಕ್ಷಕಿ ಲೀಲಾವತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸಿ.ಎಸ್ ಅನಿತ ವಂದಿಸಿದರು.

ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶಾಲಾ ನೂತನ ಆಡಳಿತ ಮಂಡಳಿ

ಶಾಲಾ ನಾಯಕಿಯಾಗಿ ವಿಶಾಲಾಕ್ಷಿ ಬಿ.ಎಸ್., ಉಪನಾಯಕ ನಾಗಿ ನಿರನ್ ನಂಜಪ್ಪ ಕೆ.ಎಂ, ಕಾರ್ಯದರ್ಶಿಯಾಗಿ ಸಾನ್ವಿಕ ಕೆ.ಎಸ್., ಸಾಂಸ್ಕೃತಿಕ ನಾಯಕಿಯಾಗಿ ರಿಂಶಾನ ಬಿ.ಬಿ. ಉಪನಾಯಕನಾಗಿ ಶಾಲಿನಿ ಕೆ.ಹೆಚ್., ಕಾರ್ಯದರ್ಶಿಯಾಗಿ ಸಹನಾ ಪಿ.ಎಸ್. ಆಯ್ಕೆಯಾದರು. ಶಾಲಾ ಕ್ರೀಡಾ ನಾಯಕಿಯಾಗಿ ಆಕಾಶ್ ಕೆ.ಎಸ್., ಉಪನಾಯಕನಾಗಿ ಮಹಮ್ಮದ್ ಕೆ.ವೈ., ಕಾರ್ಯದರ್ಶಿ ಯಾಗಿ ಗಾನವಿ ಬಿ.ಎಂ. ಶಾಲಾ ಸ್ವಚ್ಛತಾ ನಾಯಕನಾಗಿ ದೇವಯ್ಯ ಪಿ.ಎಂ., ನಾಯಕಿಯಾಗಿ ಕೃಪಾ ಡಿ.ಪಿ. ಹಾಗೂ ಕಾರ್ಯದರ್ಶಿಯಾಗಿ ಸಮನ್ವಿತ ಪಿ.ಎಸ್. ಆಯ್ಕೆಯಾದರು.