ಕೂಡಿಗೆ, ಜು. ೨ : ಹಾರಂಗಿ ಮೀನುಗಾರಿಕೆ ಇಲಾಖೆಯ ವತಿಯಿಂದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಹರಿಯುವ ಕಾವೇರಿ ನದಿಗೆ ೧.೨೦ ಲಕ್ಷಕ್ಕೂ ಹೆಚ್ಚು ವಿವಿಧ ತಳಿಯ ಮೀನು ಮರಿಗಳನ್ನು ಬಿಡಲಾಯಿತು.
ಮೀನಿನ ಸಂತತಿಯನ್ನು ಹೆಚ್ಚುಗೊಳಿಸುವ ಹಿನ್ನೆಲೆಯಲ್ಲಿ ಮತ್ತು ಕಾವೇರಿ ನದಿ ಸಿಹಿ ನೀರಿನಲ್ಲಿ ಮೀನಿನ ಬೆಳವಣಿಗೆಗೆ ಅನುಕೂಲಕರವಾಗಿರುವ ದೃಷ್ಟಿಯಿಂದ ವರ್ಷಂಪ್ರತಿಯAತೆ ಈ ಸಾಲಿನಲ್ಲಿ ಮೀನಿನ ಮರಿಗಳನ್ನು ನದಿಗೆ ಬಿಡಲಾಗುತ್ತಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್ ತಿಳಿಸಿದರು.
ಈ ಸಂದರ್ಭ ಮೀನುಗಾರಿಕೆ ಇಲಾಖೆಯ ಅಪರ ನಿರ್ದೇಶಕ ಡಿ.ತಿಪ್ಪೇಸ್ವಾಮಿ, ಕಣಿವೆ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಉಪಾಧ್ಯಕ್ಷ ಮಂಜುನಾಥ, ಗೌರವಾಧ್ಯಕ್ಷ ಮಾಧುಸ್ವಾಮಿ, ಮೀನುಗಾರಿಕೆ ಇಲಾಖೆಯ ಮೈಸೂರು ವಲಯ ಜಂಟಿ ನಿರ್ದೇಶಕ ಗಣೇಶ್, ಮಡಿಕೇರಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಸಿ.ಎಸ್. ಸಚಿನ್, ಹಾರಂಗಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್, ದೇವಾಲಯ ಸಮಿತಿಯ ನಿರ್ದೇಶಕರಾದ ಮಧು, ಕುಮಾರ್, ಪ್ರಶಾಂತ್, ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.