(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಜು. ೨: ಪ್ರತಿವರ್ಷ ಜೂನ್ ೫ನೇ ತಾರೀಕನ್ನು ವಿಶ್ವ ಪರಿಸರ ದಿನಾಚರಣೆ ಹಾಗೂ ಜುಲೈಯಲ್ಲಿ ವನಮಹೋತ್ಸವ ಎಂಬ ಅತ್ಯದ್ಭುತ ಪರಿಕಲ್ಪನೆಯೊಂದಿಗೆ ಆಚರಿಸಿಕೊಂಡು ಬರಲಾಗುತ್ತದೆ. ಇದು ಭವಿಷ್ಯದ ಹಿತಚಿಂತನೆಗೆ ಭಾರೀ ಅಗತ್ಯವೂ ಆಗಿದ್ದು ಇದೊಂದು ಮಹತ್ಕಾರ್ಯ ಎಂಬುದರಲ್ಲಿ ನಿಜವಾಗಿಯೂ ಎರಡು ಮಾತಿಲ್ಲ. ಇಂದಿನ ಸನ್ನಿವೇಶದಲ್ಲಿ ಪರಿಸರದ ಸಮತೋಲನ ಕಾಪಾಡಲು, ಮನುಕುಲ, ಪ್ರಾಣಿ-ಪಕ್ಷಿ ಸಂಕುಲದ ಉಳಿವಿನ ದೃಷಿಯಲ್ಲಿ ಮರಗಿಡಗಳ ಲಾಲನೆ-ಪೋಷಣೆ ಇತರ ಎಲ್ಲಾ ಅಗತ್ಯತೆಗಳಿಗಿಂತಲೂ ಒಂದಷ್ಟು ಹೆಚ್ಚು ಎಂಬದೂ ವಾಸ್ತವ. ಪ್ರಸಕ್ತ ವರ್ಷ ಬೇಸಿಗೆ ಸಂದರ್ಭದಲ್ಲಿ ಕಂಡು ಬಂದ ತಾಪಮಾನದ ಏರಿಕೆ ಜನತೆಗೆ ಒಂದು ರೀತಿಯಲ್ಲಿ ಎಚ್ಚರಿಕೆಯ ಗಂಟೆಯೂ ಆಗಿದೆ. ಈಗಿನ ಕೆಲವು ವರದಿಗಳನ್ನು ಅವಲೋಕಿಸಿದರೆ ಈ ವರ್ಷ ಈ ಹಿಂದೆAದೂ ಕಂಡುಬಾರದಷ್ಟು ತಾಪಮಾನದಲ್ಲಿ ಏರಿಕೆ ಕಂಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಶೇ. ೩.೫ರಷ್ಟು ಹೆಚ್ಚು ತಾಪಮಾನ ಕಂಡು ಬಂದಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.
ಇAತಹ ಪರಿಸ್ಥಿತಿಯ ನಡುವೆ ಎದುರಾಗುತ್ತಿರುವ ಪ್ರಶ್ನೆ. ನಾವು -ನೀವೆಲ್ಲರೂ ಆಚರಿಸುತ್ತಿರುವ ಪರಿಸರ ದಿನಾಚರಣೆ, ವನಮಹೋತ್ಸವ ಪ್ರಸ್ತುತ ಯಾವ ರೀತಿಯಲ್ಲಿ ಸಾರ್ಥಕತೆ ಕಾಣುತ್ತಿದೆ ಎಂಬುದು.
ಕಳೆದ ಹತ್ತು ವರ್ಷಗಳಿಂದಲೇ ಅಥವಾ ಬೇಡ ಬಿಡಿ, ಕಳೆದ ಐದು ವರ್ಷಗಳಿಂದಲೋ ಪ್ರಾಕೃತಿಕ ಐಸಿರಿಯ ಕೊಡಗು ಜಿಲ್ಲೆಯಲ್ಲಿ ನೆಡಲಾದ ಗಿಡಗಳು ಏನಾಗಿವೆ? ಅದೆಷ್ಟೋ ಲಕ್ಷ ಗಿಡಗಳ ಲೆಕ್ಕ ಮಾತ್ರ ಕಡತಗಳಲ್ಲಿದ್ದರೆ ಈ ಗಿಡಗಳ ಜೀವಂತಿಕೆ ನಿಜವಾಗಿಯೂ ಇದೆಯೇ? ಇದ್ದಿದರೆ ಕೊಡಗು ಜಿಲ್ಲೆ ಲಕ್ಷ ಲಕ್ಷ ಹೊಸ ಮರ-ಗಿಡಗಳಿಂದ ನಳನಳಿಸಬೇಕಿತ್ತು ಅಲ್ಲವೆ?
ಹಾಗಾದರೆ ಏನಾಗಿದೆ ಏನಾಗುತ್ತಿದೆ ಎಂಬ ಬಗ್ಗೆ ಯಾರಾದರೂ ಚಿಂತನೆ ನಡೆಸಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಿದರೆ ಸಹಜವಾಗಿ ಹುಟ್ಟಿಕೊಳ್ಳುತ್ತದೆ.
ಗಿಡಗಳನ್ನು ನೆಟ್ಟು ‘ಫೋಸ್’ ನೀಡಿದರೆ ವಿಶ್ವ ಪರಿಸರ ದಿನಾಚರಣೆ ಅಥವಾ ವನಮಹೋತ್ಸವ ಸಾರ್ಥಕವಾಗುತ್ತದೆ ಎಂದರೆ ತಲೆ ಚಚ್ಚಿಕೊಳ್ಳಬೇಕು. ನೆಟ್ಟ ಗಿಡಗಳು ಮರಗಳಾಗಿ ಬೆಳೆಯುತ್ತಿದೆಯೇ ಇದನ್ನು ಪೋಷಿಸುವುದು ಹೇಗೆ ಅರಣ್ಯವನ್ನು ಉಳಿಸುವುದು, ಅಗತ್ಯ ಸ್ಥಳಗಳಲ್ಲಿ ಮರ ಗಿಡಗಳನ್ನು ಬೆಳೆಸುವುದು ಹೇಗೆ ಎಂಬುದನ್ನು ಕೇವಲ ಅರಣ್ಯ ಇಲಾಖೆ ಮಾತ್ರವಲ್ಲ ಇನ್ನಿತರ ಸಂಘ-ಸAಸ್ಥೆಗಳು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯೂ ಚಿಂತನೆ ಮಾಡಬೇಕಾಗಿದೆ.
ಅನುಭವಸ್ಥರೊಬ್ಬರ ಸಂದೇಶವೊAದು ಪರಿಸರದ ಬಗ್ಗೆ ಮಹತ್ವದ ಅರ್ಥವನ್ನು ಸಾರುತ್ತದೆ. ‘‘ನಾಗರಿಕತೆ ಎಂಬುದು ಶುರುವಾಗಿದ್ದು ಮೊಟ್ಟಮೊದಲು ಮರ ಕಡಿಯುವ ಮೂಲಕ. ನಾಗರಿಕತೆಯ ಅಂತ್ಯ ಕೊನೆಯ ಮರವನ್ನು ಕಡಿದಾಗ’’ ಎಂಬುದು ಈ ಸಂದೇಶವಾಗಿದೆ.
ನೆರಳಿಗಾಗಿ ಪರದಾಟ
ಪ್ರಸ್ತುತ ಬಿಸಿಲಧಗೆ ಇರುವ ಸಂದರ್ಭದಲ್ಲಿ ಜನರು ನೆರಳಿಗಾಗಿ ಪರಿತಪ್ಪಿಸುತ್ತಾರೆ. ವಾಹನಗಳನ್ನು ನಿಲ್ಲಿಸಲು ಕೂಡ ಮರದ ನೆರಳನ್ನು ಹುಡುಕುತ್ತಾರೆ. ಆಗ ಪ್ರಾಣಿ-ಪಕ್ಷಿಗಳ, ಇನ್ನಿತರ
(ಮೊದಲ ಪುಟದಿಂದ) ಜೀವವೈವಿಧ್ಯಗಳ ಪರಿಸ್ಥಿತಿಯೇನಾಗಬ ಹುದು. ಪರಿಸರಕ್ಕೆ ಜನರು ನೀಡುವ ಕೊಡುಗೆ ಜೀವಿತಾವಧಿಯದ್ದು. ಮರಗಿಡಗಳನ್ನು ನೆಡುವವರು ತಮಗೇ ಅದರ ಪ್ರತಿಫಲವನ್ನು ನಿರೀಕ್ಷೆ ಮಾಡಬಾರದು. ಹಿಂದಿನ ಕಾಲದಲ್ಲಿ ತಾತಂದಿರು ನೆಟ್ಟ ಮರದ ಪ್ರಯೋಜನ ಅವರ ಬದಲಿಗೆ ಮಕ್ಕಳು-ಮರಿ ಮಕ್ಕಳಿಗೆ ಸಿಗುತ್ತಿದೆ ಎಂಬುದನ್ನು ಜನರು ಸ್ವಯಂ ಜಾಗೃತಿಯ ಮೂಲಕ ಅರಿತುಕೊಳ್ಳಬೇಕೆಂದು ಪರಿಸರ ಪ್ರೇಮಿ ಅರಣ್ಯ ಇಲಾಖಾಧಿಕಾರಿಯೊಬ್ಬರು ಹೇಳುತ್ತಾರೆ. ಕೊಡಗಿನ ಮಟ್ಟಿಗೆ ತಮ್ಮ ಅನುಭವ ಹೇಳಿದ ಅವರು ಪರಿಸರ ದಿನದ ಹೆಸರಿನಲ್ಲಿ ಗಿಡಗಳನ್ನು ನೆಡುವುದರಿಂದ ನಷ್ಟವೇನೂ ಆಗುತ್ತಿಲ್ಲ. ಹುಟ್ಟುವ ಮಕ್ಕಳೆಲ್ಲರೂ ಬದುಕುವುದಿಲ್ಲ. ಅದೇ ರೀತಿ ಒಂದಷ್ಟು ಗಿಡಗಳು ನಾಶವಾಗುತ್ತವೆ. ಆದರೆ, ಕಾಡ್ಗಿಚ್ಚು, ಮಾನವ ನಿರ್ಮಿತ ಬೆಂಕಿ, ಪ್ರಾಣಿ-ಪಕ್ಷಿಗಳು ಗಿಡಗಳನ್ನು ಹಾಳುಗೆಡವುದ ರಿಂದ ಎಲ್ಲಾ ಗಿಡಗಳು ಬೆಳೆಯುತ್ತಿಲ್ಲ. ಆದರೆ ಶೇ. ೫೦ರಷ್ಟು ಫಲಪ್ರದÀವಾ ಗುತ್ತಿದೆ ಎಂಬುದಾಗಿ ತಿಳಿಸಿದರು.
ಗಿಡಗಳ ಹೆಸರಿನಲ್ಲಿ ಅವ್ಯವಹಾರ ಗಳು ಏನಾದರೂ ನಡೆಯುತ್ತಿದೆಯೇ ಎಂಬ ‘ಶಕ್ತಿ’ಯ ಪ್ರಶ್ನೆಗೆ ಉತ್ತರಿಸಿದ ಅವರು ಈ ಹಿಂದೆ ಏನಾದರೂ ಈ ರೀತಿಯ ಪ್ರಕರಣ ನಡೆದಿರಬಹುದು. ಆದರೆ ಪ್ರಸ್ತುತ ಇದಕ್ಕೆ ಅವಕಾಶವಿಲ್ಲ ಎಂದು ಪ್ರತಿಕ್ರಿಯಿಸಿದರು. ಶಾಲಾ ಆವ ರಣ, ಸರಕಾರಿ ಕಚೇರಿಗಳು, ಆಸ್ಪತ್ರೆ ಜಾಗಗಳಲ್ಲಿ ನೆಡುವ ಗಿಡಗಳನ್ನು ಕಾಳಜಿ ತೋರಿ ಪೋಷಿಸಬೇಕಾಗುತ್ತದೆ ಎಂದರು. ಪರಿಸರ ಪ್ರೇಮಿಯಾಗಿರುವ ಅರಣ್ಯ ಸಂರಕ್ಷಣೆಗಾಗಿ ಸಾಕಷ್ಟು ಕೆಲಸ ನಿರ್ವಹಿಸಿರುವವರಲ್ಲಿ ಒಬ್ಬರಾದ ಎ.ಎ. ತಮ್ಮು ಪೂವಯ್ಯ ಅವರನ್ನು ‘ಶಕ್ತಿ’ ಮಾತನಾಡಿಸಿದಾಗ ಪ್ರಸ್ತುತ ಪರಿಸರ ದಿನಾಚರಣೆ, ವನಮಹೋತ್ಸ ವಗಳು ಗಿಡಗಳ ನೆಡುವಿಕೆ ಒಂದು ರೀತಿಯಲ್ಲಿ ತೋರ್ಪಡಿಕೆಯಂತಾ ಗುತ್ತಿದೆ, ಇದಾಗಬಾರದು ಗಿಡ ನೆಟ್ಟು ‘ಫೋಸ್’ ನೀಡಿದರೆ ಸಾಲದು. ಅದರ ಮುಂದಿನ ಪೋಷಣೆ - ರಕ್ಷಣೆಯ ಬಗ್ಗೆ ಮುತುವರ್ಜಿಬೇಕು ಎಂದರು. ನೈಸರ್ಗಿಕವಾಗಿ ಗಿಡ ಮರಗಳು ಬೆಳೆಯಬೇಕು. ಇರುವ ಅರಣ್ಯಗಳಿಗೆ ಸೂಕ್ತ ರಕ್ಷಣೆ ಒದಗಿಸಿದರೆ ಪರಿಸರ ತನ್ನಿಂತಾನೇ ಅಭಿವೃದ್ಧಿಯಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅರಣ್ಯ ಪ್ರದೇಶಗಳಲ್ಲಿ ಇಲಾಖೆಯ ಜವಾಬ್ದಾರಿ ಅಧಿಕ ಎಂದು ಅವರು ಹೇಳುತ್ತಾರೆ.
ಜಾಗೃತಿ ಮೂಡಲಿ
ಏನೇ ಇರಲಿ ಈ ವರ್ಷವಂತೂ ಜನರಿಗೆ ಬೇಸಿಗೆಯಲ್ಲಿ ಸುಡು ಬಿಸಿಲಿನ ಅನುಭವ ಹೊಸ ಪಾಠ ಕಲಿಸಿದೆ. ಸೂಕ್ತ ಕಾಲಕ್ಕೆ ಮಳೆ - ಬೆಳೆಯಾಗಲು, ಪರಿಸರದ ಸಮತೋಲನ ಅಗತ್ಯ ಎಂಬ ಅರಿವಾಗಿದೆ. ಮುಂದಿನ ದಿನಗಳಲ್ಲಿ ಪರಿ ಸರ ದಿನಾಚರಣೆಯ ಮೂಲಕ ನೆಡಲಾ ಗುವ ಎಲ್ಲಾ ಗಿಡಗಳು ಸಮೃದ್ಧಿಯಾಗಿ ಬೆಳೆದು ಕೊಡಗಿನ ಪ್ರಾಕೃತಿಕತೆ - ಭೌಗೋ ಳಿಕತೆ ಈ ಹಿಂದಿನAತೆ ಸಮತೋಲನ ದಿಂದಿರಲಿ. ಈ ಬಗ್ಗೆ ಅರಣ್ಯ ಇಲಾಖೆ, ಸಂಘ ಸಂಸ್ಥೆಗಳು, ಪ್ರತಿ ಜನರೂ ಮುತುವರ್ಜಿ ವಹಿಸಲಿ ಎಂಬುದು ಪರಿಸರ ಪ್ರೇಮಿಗಳ ಅಭಿಲಾಷೆಯಾ ಗಿದೆ. ಒಟ್ಟಿನಲ್ಲಿ ಸಾರ್ವತ್ರಿಕ ಜವಾಬ್ದಾರಿ ಇಂದಿನ ಅಗತ್ಯತೆಯಾಗಿದೆ.
ವನ್ಯಜೀವಿ ತಾಣ, ರಕ್ಷಿತಾರಣ್ಯ, ಮೀಸಲು ಅರಣ್ಯ ಎಂಬುದು ಸರಕಾರದ ನಿಯಮ. ಆದರೆ ನಮ್ಮ ಪೂರ್ವಿಕರು ದೇವರ ಕಾಡು ಎಂಬ ಪರಿಕಲ್ಪನೆಯೊಂದಿಗೂ ಪರಿಸರವನ್ನು ಉಳಿಸಿ-ಬೆಳಿಸಿಕೊಂಡು ಬಂದಿರುವ ಜಿಲ್ಲೆ ಇಂದು ಎಂಬ ಅರಿವೂ ಅಗತ್ಯ.