ಮಡಿಕೇರಿ, ಜು. ೨: ವೈದ್ಯರ ದಿನದ ಅಂಗವಾಗಿ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರ ಸಮ್ಮುಖದಲ್ಲಿ ಮಡಿಕೇರಿಯ ಡಾ. ಮೋಹನ್ ಅಪ್ಪಾಜಿ ಅವರನ್ನು ಸನ್ಮಾನಿಸಲಾಯಿತು.

ಕೊಡಗಿನಲ್ಲಿ ಪ್ರಕೃತಿ ವಿಕೋಪವಾದ ಸಂದರ್ಭ ಅವರು ಮಾಡಿದ ಸೇವೆ, ಕೋವಿಡ್ ಸಂದರ್ಭ ನಡೆಸಿದ ಸೇವೆ ಹಾಗೂ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಹಲವಾರು ವರ್ಷ ವಾರ್ಷಿಕ ಉಚಿತ ಇ.ಎನ್.ಟಿ. ಶಸ್ತçಚಿಕಿತ್ಸೆ ನೀಡಿರುವುದನ್ನು ಪರಿಗಣಿಸಿ ಅವರನ್ನು ಗೌರವಿಸಲಾಯಿತು.