ಮಡಿಕೇರಿ, ಜು. ೨: ಕೂಡಿಗೆ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಎನ್.ಆರ್.ಎಲ್.ಎಂ ಜಿಲ್ಲಾ ಪಂಚಾಯತ್ ಕೊಡಗು ಸಹಯೋಗದಲ್ಲಿ ಮಹಿಳೆಯರಿಗಾಗಿ ಉಚಿತ ಟೈಲರಿಂಗ್ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ೧೮ ರಿಂದ ೪೫ ವಯೋಮಾನದ ಗ್ರಾಮೀಣ ಪ್ರದೇಶದ ಬಿ.ಪಿ.ಎಲ್, ರೇಷನ್ ಕಾರ್ಡ್ ಹೊಂದಿದ ಆಸಕ್ತ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಊಟ, ವಸತಿ ಸಮೇತ ೩೦ ದಿನಗಳ ಕಾಲ ಉಚಿತ ತರಬೇತಿ ನೀಡಲಾಗುವುದು. ಆಗಸ್ಟ್ ೨೧ ರಿಂದ ಸೆಪ್ಟೆಂಬರ್ ೧೯ ರವರೆಗೆ ತರಬೇತಿ ನಡೆಯಲಿದ್ದು ಆಸಕ್ತರು ಮೊ:೯೬೮೬೪೦೬೧೮೧, ೭೬೭೬೪೦೭೭೯೨ ಅನ್ನು ಸಂಪರ್ಕಿಸಬಹುದಾಗಿದೆ.