ಭಾಗಮಂಡಲ, ಜು. ೧: ಎರಡು ದಿನಗಳಿಂದ ಬಿರುಸಿನ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕಾವೇರಿ ನದಿ ತುಂಬಿ ಹರಿಯುತ್ತಿದೆ.

ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಹಳ್ಳಕೊಳ್ಳಗಳು ಭರ್ತಿಯಾಗಿವೆ .ಈ ವರ್ಷ ತಲಕಾವೇರಿಗೆ ಜೂನ್ ತಿಂಗಳಲ್ಲಿ ೪೬.೦೨ ಇಂಚು ಮಳೆಯಾಗಿದ್ದರೆ, ಈ ವರ್ಷ ತಲಕಾವೇರಿಗೆ ಜನವರಿಯಿಂದ ಜೂನ್‌ವರೆಗೆ ೬೩.೬೨ ಇಂಚು ಮಳೆಯಾಗಿದೆ.

ಕಳೆದ ೨೦೨೩ರ ಜೂನ್ ಅಂತ್ಯದ ತನಕ ತಲಕಾವೇರಿ ವ್ಯಾಪ್ತಿಗೆ ೨೪.೭೩ ಇಂಚು ಮಳೆಯಾಗಿತ್ತು.